ಬೆಂಗಳೂರು: ಪ್ರತಿಯೊಂದು ನಗರದಲ್ಲಿ ವಿಶ್ವ ದಾಖಲೆ ಪ್ರಯತ್ನಗಳು ಪ್ರತಿ ದಿನ ನಡೆಯುತ್ತಲೇ ಇರುತ್ತವೆ. ಇಂತಹ ಪ್ರಯತ್ನಕ್ಕೆ ಬೆಂಗಳೂರಿನ ಯುವ ಸಮುದಾಯ ಇಂದು ಬನ್ನೇರುಘಟ್ಟ ರಸ್ತೆಯ ಗೋಪಾಲನ್ ಇನೋವೇಷನ್ ಮಾಲ್ನಲ್ಲಿ ಕೈ ಹಾಕಿತ್ತು.
ಕೇವಲ ಗಿನ್ನಿಸ್ ದಾಖಲೆಯ ಪ್ರಯತ್ನವಲ್ಲದೆ ಹುಲಿ ಸಂರಕ್ಷಣೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸಿದರು. ಸುಮಾರು 300 ಸ್ಪರ್ಧಿಗಳು ಸಾವಿರದ ಇನ್ನೂರು ರೂಬಿಕ್ ಕ್ಯೂಬ್ ಜೋಡಿಸುವ ಮೂಲಕ ಬೃಹದಾಕಾರದ ಹುಲಿಯ ಮುಖದ ಚಿತ್ರ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದರು.
ರೂಬಿಕ್ ಕ್ಯೂಬ್ ತರಬೇತುದಾರ ಹೊಸ ಕಲಾವಿದ ಪೃಥ್ವೀಶ್ ನೇತೃತ್ವದಲ್ಲಿ ಈ ಸಾಧನೆ ಮಾಡಲು 50ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಯುವಕರು ಉತ್ಸುಕರಾಗಿದ್ದರು. ತಮ್ಮ ಮೆದುಳು ಹಾಗೂ ಕಣ್ಣುಗಳ ಸಂಯೋಜನೆ ನೆರವಿನಿಂದ ರೂಬಿಕ್ ಕ್ಯೂಬ್ಗಳನ್ನು ಕ್ಷಣಮಾತ್ರದಲ್ಲಿ ಜೋಡಿಸಿ ತಮ್ಮ ಯುಕ್ತಿಯ ಜೊತೆಗೆ ಶಕ್ತಿಯನ್ನು ಪ್ರದರ್ಶಿಸಿದರು.