ETV Bharat / briefs

ಕೋರ್ಟ್​ ಮೆಟ್ಟಿಲೇರಿದ್ದ ಅಪ್ಪ-ಮಗನ 'ಜೈವಿಕ' ಹೋರಾಟ... ರೋಹಿತ್​​ ಶೇಖರ್​ ತಿವಾರಿ ಜೀವನದ ರೋಚಕ ಘಟನಾವಳಿ..! - ರೋಹಿತ್​​ ಶೇಖರ್​ ತಿವಾರಿ

ಆತನನ್ನು ಸ್ವಂತ ಮಗ ಎಂದು ಒಪ್ಪದ ತಂದೆ.. ಮಗ, ಅಪ್ಪನ ಹಾದಿಯನ್ನೇ ಹಿಡಿದು ರಾಜಕಾರಣಕ್ಕೆ ಧುಮುಕಿದವರು. ದೀರ್ಘಕಾಲದ ವಾದ-ವಿವಾದದ ಬಳಿಕ ಆತ ತನ್ನ ಮಗ ಎಂದು ಅಪ್ಪ ಒಪ್ಪಿಕೊಳ್ಳುತ್ತಾನೆ. ಇದು ಇಂದು ನಿಧನರಾಗಿರುವ ರೋಹಿತ್​​ ಶೇಖರ್​ ತಿವಾರಿ ಜೀವನದ ಉಲ್ಲೇಖನೀಯ ವಿಚಾರ..!

ರೋಹಿತ್​​ ಶೇಖರ್​ ತಿವಾರಿ
author img

By

Published : Apr 16, 2019, 10:07 PM IST

ನವದೆಹಲಿ: ಎರಡು ರಾಜ್ಯಗಳಲ್ಲಿ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿ ರಾಜಕಾರಣವನ್ನೇ ಉಸಿರಾಡಿದ್ದ ಎನ್​.ಡಿ ತಿವಾರಿ ಪುತ್ರ ರೋಹಿತ್​ ಶೇಖರ್​ ತಿವಾರಿ ಇಂದು ನಿಧನರಾಗಿದ್ದಾರೆ. ರೋಹಿತ್​​​ ಜೀವನ ಪುಟವನ್ನು ತಿರುವಿದರೆ ರಾಜಕೀಯ ಹೊರತಾದ ಒಂದು ರೋಚಕ ಹೋರಾಟ ಕಂಡುಬರುತ್ತದೆ.

ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಸಿಎಂ ಆಗಿದ್ದ ಎನ್​.ಡಿ ತಿವಾರಿ. ಸ್ವಂತ ಮಗ ರೋಹಿತ್​​​ ಶೇಖರ್​ ತಿವಾರಿಯನ್ನು ಮಗ ಎಂದು ಸುತಾರಾಂ ಒಪ್ಪಿರಲಿಲ್ಲ.

ಸಂಬಂಧಿತ ಸುದ್ದಿ:

ಉತ್ತರ ಪ್ರದೇಶ ಮಾಜಿ ಸಿಎಂ ಎನ್​​.ಡಿ ತಿವಾರಿ ಪುತ್ರ ನಿಗೂಢ ಸಾವು..!

ಏಳು ವರ್ಷದ ಹೋರಾಟ:

2007ರಲ್ಲಿ ಕೋರ್ಟ್​ ಕಟಕಟೆ ಏರಿದ್ದ ಈ ಅಪ್ಪ-ಮಗನ ವಿವಾದ ಬರೋಬ್ಬರಿ ಏಳು ವರ್ಷಗಳ ಕಾಲ ನಡೆದಿತ್ತು. ಎನ್​​​.ಡಿ.ತಿವಾರಿ ತಮ್ಮ ಸ್ವಂತ ತಂದೆ ಎನ್ನುವುದನ್ನು ಸಾಬೀತುಪಡಿಸಲು ರೋಹಿತ್​ ಶೇಖರ್ ತಿವಾರಿ ಸಾಕಷ್ಟು ಹೆಣಗಾಟ ನಡೆಸಿದ್ದರು.

2014ರಲ್ಲಿ ದೆಹಲಿ ಹೈಕೋರ್ಟ್​ ಎನ್​.ಡಿ.ತಿವಾರಿ, ರೋಹಿತ್​ ಶೇಖರ್​ ತಿವಾರಿಯ ಜೈವಿಕ ತಂದೆ ಎನ್ನುವುದನ್ನು ಹೇಳಿತ್ತು. ಅಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿತ್ತು. ರೋಹಿತ್​ ತಾಯಿ ಉಜ್ವಲ ಶರ್ಮ ಆದೇಶ ಹೊರಬೀಳುತ್ತಿದ್ದಂತೆ ಕಣ್ಣೀರಾಗಿದ್ದರು.

ND Tiwari
ತಂದೆ ಎನ್​​.ಡಿ ತಿವಾರಿ ಜೊತೆ ಮಗ ರೋಹಿತ್ ಶೇಖರ್ ತಿವಾರಿ

ಕೋರ್ಟ್​ ಆದೇಶ ಬಳಿಕ ಅಂದರೆ 2014ರಲ್ಲಿ ರೋಹಿತ್​​​ ಶೇಖರ್ ತಿವಾರಿ ತಾಯಿ ಉಜ್ವಲ ಶರ್ಮರನ್ನು 88ನೇ ವರ್ಷದಲ್ಲಿ ವರಿಸಿದರು. ಎನ್​​.ಡಿ.ತಿವಾರಿ 1954ರಲ್ಲಿ ಸುಶೀಲಾ ಸನ್ವಾಲ್​​ರನ್ನು ವಿವಾಹವಾಗಿದ್ದರು. 1991ರಲ್ಲಿ ಆಕೆ ಅಸುನೀಗಿದ್ದಳು.

ಡಿಎನ್​ಎ ಪರೀಕ್ಷೆ, ಹಲವಾರು ಮೊಕದ್ದಮೆಗಳು:

ಆರಂಭದಲ್ಲಿ ಡಿಎನ್​ಎ ಪರೀಕ್ಷೆಗೆ ಎನ್​.ಡಿ ತಿವಾರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 2012ರಲ್ಲಿ ಕೊನೆಗೆ ಹೇಗೋ ಒಪ್ಪಿಸಿ ಎನ್​​.ಡಿ.ತಿವಾರಿಯ ಡಿಎನ್​​ಎ ಪರೀಕ್ಷೆ ನಡೆಸಲಾಗಿತ್ತು.

ಇಷ್ಟೆಲ್ಲಾ ಹರಸಾಹಸದ ಬಳಿಕ ಇಬ್ಬರೂ ಒಂದಾದರು. 2017ರಲ್ಲಿ ಎನ್​.ಡಿ. ತಿವಾರಿ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಜೊತೆಗೆ ಪುತ್ರ ಸಹ ಕಮಲವನ್ನೇ ನೆಚ್ಚಿಕೊಂಡರು.

ತಮ್ಮ ಹುಟ್ಟುಹಬ್ಬದ ದಿನದಂದೇ 2018ರಲ್ಲಿ ಎನ್​​.ಡಿ.ತಿವಾರಿ ನಿಧನರಾದರು. ಅಪ್ಪ ಸತ್ತ ಒಂದೇ ವರ್ಷದ ಒಳಗಾಗಿ ಮಗ ಸಹ ಸಾವನ್ನಪ್ಪಿದ್ದಾನೆ. ಸಾವಿಗೆ ನಿರ್ದಿಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.

Intro:Body:

ಕೋರ್ಟ್​ ಮೆಟ್ಟಿಲೇರಿದ್ದ ಅಪ್ಪ-ಮಗನ 'ಜೈವಿಕ' ಹೋರಾಟ... ರೋಹಿತ್​​ ಶೇಖರ್​ ತಿವಾರಿ ಜೀವನದ ರೋಚಕ ಘಟನಾವಳಿ..!

ನವದೆಹಲಿ: ಎರಡು ರಾಜ್ಯಗಳಲ್ಲಿ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿ ರಾಜಕಾರಣವನ್ನೇ ಉಸಿರಾಡಿದ್ದ ಎನ್​.ಡಿ ತಿವಾರಿ ಪುತ್ರ ರೋಹಿತ್​ ಶೇಖರ್​ ತಿವಾರಿ ಇಂದು ನಿಧನರಾಗಿದ್ದಾರೆ. ರೋಹಿತ್​​​ ಜೀವನ ಪುಟವನ್ನು ತಿರುವಿದರೆ ರಾಜಕೀಯ ಹೊರತಾದ ಒಂದು ರೋಚಕ ಹೋರಾಟ ಕಂಡುಬರುತ್ತದೆ.

ಆತನನ್ನು ಸ್ವಂತ ಮಗ ಎಂದು ಒಪ್ಪದ ತಂದೆ.. ಮಗ, ಅಪ್ಪನ ಹಾದಿಯನ್ನೇ ಹಿಡಿದು ರಾಜಕಾರಣಕ್ಕೆ ಧುಮುಕಿದವರು. ದೀರ್ಘಕಾಲದ ವಾದ-ವಿವಾದದ ಬಳಿಕ ಆತ ತನ್ನ ಮಗ ಎಂದು ಅಪ್ಪ ಒಪ್ಪಿಕೊಳ್ಳುತ್ತಾನೆ. ಇದು ಇಂದು ನಿಧನರಾಗಿರುವ ರೋಹಿತ್​​ ಶೇಖರ್​ ತಿವಾರಿ ಜೀವನದ ಉಲ್ಲೇಖನೀಯ ವಿಚಾರ..!

ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಸಿಎಂ ಆಗಿದ್ದ ಎನ್​.ಡಿ ತಿವಾರಿ. ಸ್ವಂತ ಮಗ ರೋಹಿತ್​​​ ಶೇಖರ್​ ತಿವಾರಿಯನ್ನು ಮಗ ಎಂದು ಸುತಾರಾಂ ಒಪ್ಪಿರಲಿಲ್ಲ.

ಏಳು ವರ್ಷದ ಹೋರಾಟ:

2007ರಲ್ಲಿ ಕೋರ್ಟ್​ ಕಟಕಟೆ ಏರಿದ ಈ ಅಪ್ಪ-ಮಗನ ವಿವಾದ ಬರೋಬ್ಬರಿ ಏಳು ವರ್ಷಗಳ ಕಾಲ ನಡೆದಿತ್ತು. ಎನ್​​​.ಡಿ.ತಿವಾರಿ ತಮ್ಮ ಸ್ವಂತ ತಂದೆ ಎನ್ನುವುದನ್ನು ಸಾಬೀತುಪಡಿಸಲು ರೋಹಿತ್​ ಶೇಖರ್ ತಿವಾರಿ ಸಾಕಷ್ಟು ಹೆಣಗಾಟ ನಡೆಸಿದ್ದರು.

2014ರಲ್ಲಿ ದೆಹಲಿ ಹೈಕೋರ್ಟ್​ ಎನ್​.ಡಿ.ತಿವಾರಿ, ರೋಹಿತ್​ ಶೇಖರ್​ ತಿವಾರಿಯ ಜೈವಿಕ ತಂದೆ ಎನ್ನುವುದನ್ನು ಹೇಳಿತ್ತು. ಅಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿತ್ತು. ರೋಹಿತ್​ ತಾಯಿ ಉಜ್ವಲ ಶರ್ಮ ಆದೇಶ ಹೊರಬೀಳುತ್ತಿದ್ದಂತೆ ಕಣ್ಣೀರಾಗಿದ್ದರು.

ಕೋರ್ಟ್​ ಆದೇಶ ಬಳಿಕ ಅಂದರೆ 2014ರಲ್ಲಿ ರೋಹಿತ್​​​ ಶೇಖರ್ ತಿವಾರಿ ತಾಯಿ ಉಜ್ವಲ ಶರ್ಮರನ್ನು 88ನೇ ವರ್ಷದಲ್ಲಿ ವರಿಸಿದರು. ಎನ್​​.ಡಿ.ತಿವಾರಿ 1954ರಲ್ಲಿ ಸುಶೀಲಾ ಸನ್ವಾಲ್​​ರನ್ನು ವಿವಾಹವಾಗಿದ್ದರು. 1991ರಲ್ಲಿ ಆಕೆ ಅಸುನೀಗಿದ್ದಳು.

ಡಿಎನ್​ಎ ಪರೀಕ್ಷೆ, ಹಲವಾರು ಮೊಕದ್ದಮೆಗಳು:

ಆರಂಭದಲ್ಲಿ ಡಿಎನ್​ಎ ಪರೀಕ್ಷೆಗೆ ಎನ್​.ಡಿ ತಿವಾರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 2012ರಲ್ಲಿ ಕೊನೆಗೆ ಹೇಗೋ ಒಪ್ಪಿಸಿ ಎನ್​​.ಡಿ.ತಿವಾರಿಯ ಡಿಎನ್​​ಎ ಪರೀಕ್ಷೆ ನಡೆಸಲಾಗಿತ್ತು.

ಇಷ್ಟೆಲ್ಲಾ ಹರಸಾಹಸದ ಬಳಿಕ ಇಬ್ಬರೂ ಒಂದಾದರು. 2017ರಲ್ಲಿ ಎನ್​.ಡಿ. ತಿವಾರಿ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಜೊತೆಗೆ ಪುತ್ರ ಸಹ ಕಮಲವನ್ನೇ ನೆಚ್ಚಿಕೊಂಡರು.

ತಮ್ಮ ಹುಟ್ಟುಹಬ್ಬದ ದಿನದಂದೇ 2018ರಲ್ಲಿ ಎನ್​​.ಡಿ.ತಿವಾರಿ ನಿಧನರಾದರು. ಅಪ್ಪ ಸತ್ತ ಒಂದೇ ವರ್ಷದ ಒಳಗಾಗಿ ಮಗ ಸಹ ಸಾವನ್ನಪ್ಪಿದ್ದಾನೆ. ಮಗನ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.