ETV Bharat / briefs

ಮುಂಬೈಕರ್‌ ರೋ'ಹಿಟ್‌' 4 ಅಲ್ಲ, 5 ಬಾರಿ IPL ಚಾಂಪಿಯನ್‌.. ಅದು ಹೀಗೆ! - ಧೋನಿ

ಐಪಿಎಲ್‌ ಫೈನಲ್‌ ಪಂದ್ಯಗಳಲ್ಲಿ ರೋಹಿತ್‌ 100 ಪರ್ಸೆಂಟ್‌ ರೆಕಾರ್ಡ್‌ ಹೊಂದಿದ್ದಾರೆ. ತಮ್ಮ ಕ್ಯಾಪ್ಟನ್ಸಿಯಲ್ಲಿ 4ನೇ ಬಾರಿ ಐಪಿಎಲ್‌ ಟೈಟಲ್ ಗೆದ್ದು ದಾಖಲೆ ಬರೆದಿದ್ದಾರೆ.

ರೋಹಿತ್‌ ಶರ್ಮಾ
author img

By

Published : May 13, 2019, 2:28 PM IST

ಹೈದರಾಬಾದ್‌: ದ್ವಿಶತಕಗಳ ಸರದಾರ ಮುಂಬೈಕರ್‌ ರೋಹಿತ್‌ ಶರ್ಮಾ ನಿನ್ನೆಯ ಗೆಲುವಿನ ಮೂಲಕ 4ನೇ ಬಾರಿ ಐಪಿಎಲ್‌ ಕಪ್‌ ಎತ್ತಿ ಹಿಡಿದಿದ್ದಾರೆ. ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಸಿಎಸ್‌ಕೆ ವಿರುದ್ಧದ ಫೈನಲ್‌ ಪಂದ್ಯ ಗೆಲ್ಲುವ ಮೂಲಕ ಆಮ್ಚಿ ಮುಂಬೈ ಹೊಸ ದಾಖಲೆ ಬರೆದಿದೆ. ಹಾಗೇ 12 ಆವೃತ್ತಿಗಳಲ್ಲಿ ಐದು ಬಾರಿ ರೋಹಿತ್‌ ಚಾಂಪಿಯನ್ ಆಗಿ ಹೊಹೊಮ್ಮಿದ್ದಾರೆ.

ಐಪಿಎಲ್‌ ಫೈನಲ್‌ ಪಂದ್ಯಗಳಲ್ಲಿ ರೋಹಿತ್‌ 100% ರೆಕಾರ್ಡ್‌ ಹೊಂದಿದ್ದಾರೆ. ತಮ್ಮ ನಾಯಕತ್ವದಲ್ಲಿ 4ನೇ ಬಾರಿ ಐಪಿಎಲ್‌ ಟೈಟಲ್ ಗೆದ್ದು ದಾಖಲೆ ಬರೆದಿದ್ದಾರೆ. ಸಿಎಸ್‌ಕೆ ಟೀಂ ನಿನ್ನೆಯ ಪಂದ್ಯದಲ್ಲಿ ಬರೀ 1 ರನ್‌ನಿಂದ ಸೋಲಲು ಕಾರಣವಾಗಿದ್ದು ರೋಹಿತ್ ಚಾಣಾಕ್ಷ ನಾಯಕತ್ವ. ಹೀಗಾಗಿ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕ ಅನ್ನೋ ಪಟ್ಟ ರೋಹಿತ್‌ಗೆ ದಕ್ಕಿದೆ.

ರೋಹಿತ್‌ ಬ್ಯಾಟಿಂಗ್‌ನಲ್ಲಿ ನಿನ್ನೆ ಕ್ಲಿಕ್ ಆಗಲಿಲ್ಲ. ಆದರೆ, ಮೊದಲು ಬ್ಯಾಟ್‌ ಮಾಡಿದ ಮುಂಬೈ 5 ವಿಕೆಟ್‌ ನಷ್ಟಕ್ಕೆ 149 ಪೇರಿಸಿತ್ತು. 32ನೇ ವಸಂತಕ್ಕೆ ಕಾರಿಸಿದ್ದ ಬರ್ತ್‌ಡೇ ಬಾಯ್‌ ಕಿರನ್‌ ಪೊಲಾರ್ಡ್‌ 25 ಬಾಲ್‌ ಎದುರಿಸಿ 41 ರನ್ ಗಳಿಸಿದರು. ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಕೆರಿಬಿಯನ್ ದಾಂಡಿಗ ನೆರವಾದರು. ಸಿಎಸ್‌ಕೆ ಪರ ಶೇನ್‌ ವ್ಯಾಟ್ಸನ್ 59 ಬಾಲ್ ಆಡಿ 80ರನ್ ಕಲೆಹಾಕಿದರು.

ಆದರೆ, ಲಸಿತ್‌ ಮಾಲಿಂಗಾರ ಕೊನೆಯ 6 ಎಸೆತದಲ್ಲಿ 9ರನ್ ಗಳಿಸಲೂ ಆಗದೇ ಸಿಎಸ್‌ಕೆ ಪಂದ್ಯ ಕೈಚೆಲ್ಲಿತು. ಮೊದಲು 3 ಓವರ್ ಬಾಲ್‌ ಮಾಡಿದ್ದ ಮಾಲಿಂಗ 42ರನ್ ಕೊಟ್ಟು ದುಬಾರಿಯಾಗಿದ್ದರು. ಆದರೆ, ಪಂದ್ಯದ ನಿರ್ಣಾಯಕ ಓವರ್‌ನಲ್ಲಿ ಬರೀ 7ರನ್‌ ನೀಡಿ ಮುಂಬೈ ಗೆಲುವಿಗೆ ಮಾಲಿಂಗ ಕಾರಣವಾದರು.

pollard
ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪೊಲಾರ್ಡ್​

ಟಿ-20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಸೂಪರ್‌ ಹೀರೋ :
ತನ್ನ ಕ್ಯಾಪ್ಟನ್ಸಿಯಲ್ಲಿ ಮುಂಬೈಗೆ 4 ಸಾರಿ ಕಪ್‌ ಗೆದ್ದು ಕೊಟ್ಟ ರೋಹಿತ್, ಐದು ಬಾರಿ ಐಪಿಎಲ್‌ ಚಾಂಪಿಯನ್. ಹರ್ಭಜನ್‌ ಸಿಂಗ್ ಮತ್ತು ಅಂಬಟಿ ರಾಯ್ಡು ತಲಾ 4 ಬಾರಿ ಕಪ್ ಗೆದ್ದ ತಂಡದಲ್ಲಿದ್ದರು. ಟಿ-20 ಕ್ಯಾರಿಯರ್‌ನ 10 ಫೈನಲ್‌ ಪಂದ್ಯಗಳಲ್ಲಿ 9 ಮ್ಯಾಚ್‌ ಗೆದ್ದ ಕೀರ್ತಿ ಮುಂಬೈಕರ್‌ಗೆ ಸಲ್ಲಬೇಕು. ರೋಹಿತ್‌ ಚಿಟುಕು ಕ್ರಿಕೆಟ್‌ನ ಸೂಪರ್‌ ಹೀರೋ. 2007ರಲ್ಲಿ ಟಿ-20 ವರ್ಲ್ಡ್‌ ಕಪ್‌, 2013ರ ಚಾಂಪಿಯನ್ಸ್‌ ಟ್ರೋಫಿ, 2006ರ ಏಷಿಯಾ ಕಪ್‌, 2018 ನಿದಾಸ್ ಟ್ರೋಫಿ ಗೆದ್ದ ಟೀಂ ಇಂಡಿಯಾ ತಂಡದಲ್ಲಿದ್ದರು ರೋಹಿತ್.

Rohit
ಪತ್ನಿ ಹಾಗೂ ಮಗಳೊಂದಿಗೆ ರೋಹಿತ್ ಶರ್ಮಾ

ಐಪಿಎಲ್‌ಗೆ ಬಂದ್ರೇ, 2009ರಲ್ಲಿ ಚಾಂಪಿಯನ್‌ ಆಗಿದ್ದ ಡೆಕ್ಕನ್‌ ಚಾರ್ಜರ್ಸ್‌ ತಂಡದಲ್ಲಿ ಆಡಿದ್ದರು ರೋಹಿತ್. 2013ರಲ್ಲಿ ಮುಂಬೈ ತಂಡದ ಕ್ಯಾಪ್ಟನ್​ ಆಗಿ ಮೊದಲ ಬಾರಿ ಕಪ್‌ಗೆ ಮುತ್ತಿಕ್ಕಿದ್ದರು. ಇದಾದ್ಮೇಲೆ 2015, 2017 ಹಾಗೂ 2019ರ ಐಪಿಎಲ್‌ ಫೈನಲ್‌ನಲ್ಲೂ ಕಪ್‌ ಎತ್ತಿ ಹಿಡಿದು, ಪರ್ಫೆಕ್ಟ್‌ ರೆಕಾರ್ಡ್‌ ಹೊಂದಿದ್ದಾರೆ ಮುಂಬೈಕರ್. ಸಮಯಕ್ಕೆ ತಕ್ಕಂತೆ ಬೌಲಿಂಗ್ ಚೇಂಜ್, ಹೇಗೆ ಫೀಲ್ಡಿಂಗ್‌ ನಿಲ್ಲಿಸಬೇಕು ಎಂಬ ಮುಂಬೈಕರ್‌ ಸ್ಟ್ರಾಟರ್ಜಿ ಬ್ರಿಲಿಯಂಟಾಗಿರುತ್ತೆ.

ನಿನ್ನೆಯ ಫೈನಲ್‌ನಲ್ಲೂ ಅದನ್ನೇ ಮಾಡಿದ್ದರು ರೋಹಿತ್ ಶರ್ಮಾ. ಬೌಲರ್‌ ಮತ್ತು ಫೀಲ್ಡರ್‌ಗಳು ಕ್ಯಾಪ್ಟನ್‌ ನಿರ್ಧಾರದಿಂದ ಬೇಸತ್ತಿದ್ದರು. ಆದರೆ, ಕೊನೆಗೆ ಫಲಿತಾಂಶ ರೋಹಿತ್‌ ಕೈಹಿಡಿದಿತ್ತು. ಹಾಗಾಗಿಯೇ ರೋಹಿತ್‌ ಶರ್ಮಾ ಮುಂಬೈಗೆ ಸೂಪರ್‌ ಸಂಡೇ ಉಡುಗೊರೆ ಕೊಟ್ಟರು.

pandya
ಐಪಿಎಲ್​ ಕಪ್​ನೊಂದಿಗೆ ಪಾಂಡ್ಯ ಬ್ರದರ್ಸ್​

Intro:Body:

ಮುಂಬೈಕರ್‌ ರೋ'ಹಿಟ್‌' 4 ಅಲ್ಲ, 5 ಬಾರಿ IPL ಚಾಂಪಿಯನ್‌.. ಅದು ಹೀಗೆ!

ಹೈದರಾಬಾದ್‌: ದ್ವಿಶತಕಗಳ ಸರದಾರ ಮುಂಬೈಕರ್‌ ರೋಹಿತ್‌ ಶರ್ಮಾ ನಿನ್ನೆ 4ನೇ ಬಾರಿ ಐಪಿಎಲ್‌ ಕಪ್‌ನ ಎತ್ತಿ ಹಿಡಿದಿದ್ದಾರೆ. ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಸಿಎಸ್‌ಕೆ ವಿರುದ್ಧದ ಫೈನಲ್‌ ಪಂದ್ಯ ಗೆಲ್ಲುವ ಮೂಲಕ ಆಮ್ಚಿ ಮುಂಬೈ ಹೊಸ ದಾಖಲೆ ಬರೆದಿದೆ. ಹಾಗೇ 12 ಆವೃತ್ತಿಗಳಲ್ಲಿ ಐದು ಬಾರಿ ರೋಹಿತ್‌ ಚಾಂಪಿಯನ್ ಆಗಿದ್ದಾರೆ.

ಐಪಿಎಲ್‌ ಫೈನಲ್‌ ಪಂದ್ಯಗಳಲ್ಲಿ ರೋಹಿತ್‌ 100 ಪರ್ಸೆಂಟ್‌ ರೆಕಾರ್ಡ್‌ ಹೊಂದಿದ್ದಾರೆ. ತಮ್ಮ ಕ್ಯಾಪ್ಟನ್ಸಿಯಲ್ಲಿ 4ನೇ ಬಾರಿ ಐಪಿಎಲ್‌ ಟೈಟಲ್ ಗೆದ್ದು ದಾಖಲೆ ಬರೆದಿದ್ದಾರೆ. ಧೋನಿ ನೇತೃತ್ವದ ಸಿಎಸ್‌ಕೆ ಟೀಂ ನಿನ್ನೆಯ ಪಂದ್ಯದಲ್ಲಿ ಬರೀ 1ರನ್‌ನಿಂದ ಸೋತಿದೆ. ಅದಕ್ಕೆ ಕಾರಣ ರೋಹಿತ್‌ ಕ್ಯಾಪ್ಟೆನ್ಸಿ. ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕ ಅನ್ನೋ ಪಟ್ಟ ರೋಹಿತ್‌ಗೆ ದಕ್ಕಿದೆ. 

ರೋಹಿತ್‌ ಬ್ಯಾಟಿಂಗ್‌ನಲ್ಲಿ ನಿನ್ನೆ ಕ್ಲಿಕ್ ಆಗಲಿಲ್ಲ. ಆದರೆ, ಮೊದಲು ಬ್ಯಾಟ್‌ ಮಾಡಿದ ಮುಂಬೈ 5 ವಿಕೆಟ್‌ ನಷ್ಟಕ್ಕೆ 149 ಪೇರಿಸಿತ್ತು. 32ನೇ ವಸಂತಕ್ಕೆ ಕಾರಿಸಿದ್ದ ಬರ್ತ್‌ಡೇ ಬಾಯ್‌ ಕಿರನ್‌ ಪೋಲಾರ್ಡ್‌ 25 ಬಾಲ್‌ ಎದುರಿಸಿ 41 ರನ್ ಗಳಿಸಿದರು. ತಂಡ ಫೈಟಿಂಗ್‌ ಸ್ಕೋರ್‌ ತಲುಪಲು ಕೆರಿಬಿಯನ್ ದಾಂಡಿಗ ನೆರವಾದರು. ಸಿಎಸ್‌ಕೆ ಪರ ಶೇನ್‌ ವ್ಯಾಟ್ಸನ್ 59 ಬಾಲ್ ಆಡಿ 80ರನ್ ಕಲೆಹಾಕಿದರು. ಆದರೆ, ಲಸಿತ್‌ ಮಲಿಂಗಾರ ಕೊನೆಯ 6 ಎಸೆತದಲ್ಲಿ 9ರನ್ ಗಳಿಸಲೂ ಆಗದೇ ಸಿಎಸ್‌ಕೆ ಪಂದ್ಯ ಕೈಚೆಲ್ಲಿತು. ಮೊದಲು 3 ಓವರ್ ಬಾಲ್‌ ಮಾಡಿದ್ದ ಮಾಲಿಂಗ 42ರನ್ ಕೊಟ್ಟು ದುಬಾರಿಯಾಗಿದ್ದರು. ಆದರೆ, ಪಂದ್ಯದ ನಿರ್ಣಾಯಕ ಓವರ್‌ನಲ್ಲಿ ಬರೀ 7ರನ್‌ ನೀಡಿ ಮುಂಬೈ ಗೆಲುವಿಗೆ ಮಾಲಿಂಗ ಕಾರಣವಾದರು. 

ಟಿ-20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಸೂಪರ್‌ ಹೀರೋ :

ತನ್ನ ಕ್ಯಾಪ್ಟನ್ಸಿಯಲ್ಲಿ ಮುಂಬೈಗೆ 4 ಸಾರಿ ಕಪ್‌ ಗೆದ್ದು ಕೊಟ್ಟ ರೋಹಿತ್, ಐದು ಬಾರಿ ಐಪಿಎಲ್‌ ಚಾಂಪಿಯನ್. ಹರ್ಭಜನ್‌ ಸಿಂಗ್ ಮತ್ತು ಅಂಬಟಿ ರಾಯ್ಡು ತಲಾ 4 ಬಾರಿ ಕಪ್ ಗೆದ್ದ ತಂಡದಲ್ಲಿದ್ದರು. ಟಿ-20 ಕ್ಯಾರಿಯರ್‌ನ 10 ಫೈನಲ್‌ ಪಂದ್ಯಗಳಲ್ಲಿ 9 ಮ್ಯಾಚ್‌ ಗೆದ್ದ ಕೀರ್ತಿ ಮುಂಬೈಕರ್‌ಗೆ ಸಲ್ಲಬೇಕು. ರೋಹಿತ್‌ ಚಿಟುಕು ಕ್ರಿಕೆಟ್‌ನ ಸೂಪರ್‌ ಹೀರೋ. 2007ರಲ್ಲಿ ಟಿ-20 ವರ್ಲ್ಡ್‌ ಕಪ್‌,  2013ರ ಚಾಂಪಿಯನ್ಸ್‌ ಟ್ರೋಫಿ, 2006ರ ಏಷಿಯಾ ಕಪ್‌, 2018 ನಿದಾಸ್ ಟ್ರೋಫಿ ಗೆದ್ದ ಟೀಂ ಇಂಡಿಯಾ ತಂಡದಲ್ಲಿದ್ದರು ರೋಹಿತ್. 

ಐಪಿಎಲ್‌ಗೆ ಬಂದ್ರೇ, 2009ರಲ್ಲಿ ಚಾಂಪಿಯನ್‌ ಆಗಿದ್ದ ಡೆಕ್ಕನ್‌ ಚಾರ್ಜರ್ಸ್‌ ತಂಡದಲ್ಲಿ ಆಡಿದ್ದರು ರೋಹಿತ್. 2013ರಲ್ಲಿ ಮುಂಬೈ ತಂಡದ ಕ್ಯಾಪ್ಟನಾಗಿ ಮೊದಲ ಬಾರಿ ಕಪ್‌ಗೆ ಮುತ್ತಿಕ್ಕಿದ್ದರು. ಇದಾದ್ಮೇಲೆ 2015, 2017 ಹಾಗೂ 2019ರ ಐಪಿಎಲ್‌ ಫೈನಲ್‌ನಲ್ಲೂ ಕಪ್‌ ಎತ್ತಿ ಹಿಡಿದು, ಪರ್ಫೆಕ್ಟ್‌ ರೆಕಾರ್ಡ್‌ ಹೊಂದಿದ್ದಾರೆ ಮುಂಬೈಕರ್. ಸಮಯಕ್ಕೆ ತಕ್ಕಂತೆ ಬೌಲಿಂಗ್ ಚೇಂಜ್, ಹೇಗೆ ಫೀಲ್ಡಿಂಗ್‌ ನಿಲ್ಲಿಸ್ಬೇಕೆಂಬ ಮುಂಬೈಕರ್‌ ಸ್ಟ್ರಾಟರ್ಜಿ ಬ್ರಿಲಿಯಂಟಾಗಿರುತ್ತೆ. ನಿನ್ನೆಯ ಫೈನಲ್‌ನಲ್ಲೂ ಅದನ್ನೇ ಮಾಡಿದ್ದರು ರೋಹಿತ್ ಶರ್ಮಾ. ಬೌಲರ್‌ ಮತ್ತು ಫೀಲ್ಡರ್‌ಗಳು ಕ್ಯಾಪ್ಟನ್‌ ನಿರ್ಧಾರದಿಂದ ಬೇಸತ್ತಿದ್ದರು. ಆದರೆ, ಕೊನೆಗೆ ಫಲಿತಾಂಶ ರೋಹಿತ್‌ ಕೈಹಿಡಿದಿತ್ತು. ಹಾಗಾಗಿಯೇ ರೋಹಿತ್‌ ಶರ್ಮಾ ಮುಂಬೈಗೆ ಸೂಪರ್‌ ಸಂಡೇ ಉಡುಗೊರೆ ಕೊಟ್ಟರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.