ಕೋಲ್ಕತ್ತಾ: ಕೆಕೆಆರ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ ರಾಜಸ್ಥಾನ್ ರಾಯಲ್ಸ್ಗೆ ಗೆಲುವು ತಂದುಕೊಟ್ಟ 17 ವರ್ಷದ ರಿಯಾನ್ ಪರಾಗ್, ತಮ್ಮ ಇನಿಂಗ್ಸ್ನಲ್ಲಿ ಪ್ರಯೋಗಿಸಿದ ಹೆಲಿಕಾಪ್ಟರ್ ಶಾಟ್ಗೆ ಎಂಎಸ್ ಧೋನಿಯಿಂದ ಪ್ರೇರಣೆ ಪಡೆದಿಲ್ಲ ಎಂದಿದ್ದಾರೆ.
ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಚೇಸಿಂಗ್ ವೇಳೆ 10 ಓವರ್ನಲ್ಲಿ ಪರಾಗ್ ಯರ್ರಾ ಪೃಥ್ವಿರಾಜ್ ಬೌಲಿಂಗ್ನಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿ ಬಾರಿಸಿದ್ದರು. ಪಂದ್ಯದ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆ್ಯರೋನ್ ನಡೆಸಿದ ಸಂದರ್ಶನದಲ್ಲಿ ಪರಾಗ್ಗೆ ಹೆಲಿಕಾಪ್ಟರ್ ಶಾಟ್ ಪ್ರಯೋಗ ಮಾಡಲು ಧೋನಿ ನಿಮಗೆ ಪ್ರೇರಣೆನಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಪರಾಗ್ " ಶಾಟ್ ಬಾಲ್ ಬಂದಿದ್ದರಿಂದ ನಾನು ಸುಮ್ಮನೆ ಹೊಡೆದೆ, ಆ ಶಾಟ್ ಕ್ಲಿಕ್ ಆಯಿತು, ಇದರ ಹಿಂದೆ ಯಾರ ಪ್ರೇರಣೆಯೂ ಇಲ್ಲ, ನಾನು ಈ ಹಿಂದೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ಈ ರೀತಿಯ ಹೊಡೆತಗಳನ್ನು ಹೊಡೆದಿದ್ದೇನೆ. ಆದರೆ, ಹೆಚ್ಚೇನೂ ಅಭ್ಯಾಸ ಮಾಡಿಲ್ಲ" ಎಂದಿದ್ದಾರೆ.
-
The Helicopter shot, knuckle inswinger story ft. Aaron & Riyan@VarunAaron and Riyan Parag talk about some quirky additions to their own game that helped @rajasthanroyals to a last over win in Kolkata! By @28anand. #KKRvRR
— IndianPremierLeague (@IPL) April 26, 2019 " class="align-text-top noRightClick twitterSection" data="
WATCH the video 📹 - https://t.co/CSykvWdEPN pic.twitter.com/X3lZiZHMhn
">The Helicopter shot, knuckle inswinger story ft. Aaron & Riyan@VarunAaron and Riyan Parag talk about some quirky additions to their own game that helped @rajasthanroyals to a last over win in Kolkata! By @28anand. #KKRvRR
— IndianPremierLeague (@IPL) April 26, 2019
WATCH the video 📹 - https://t.co/CSykvWdEPN pic.twitter.com/X3lZiZHMhnThe Helicopter shot, knuckle inswinger story ft. Aaron & Riyan@VarunAaron and Riyan Parag talk about some quirky additions to their own game that helped @rajasthanroyals to a last over win in Kolkata! By @28anand. #KKRvRR
— IndianPremierLeague (@IPL) April 26, 2019
WATCH the video 📹 - https://t.co/CSykvWdEPN pic.twitter.com/X3lZiZHMhn
ಕೆಕೆಆರ್ ವಿರುದ್ಧ ಈಡನ್ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಪರಾಗ್ ಸೀನಿಯರ್ಗಳಾದ ಸ್ಮಿತ್,ರಹಾನೆ, ಬೆನ್ಸ್ಟೋಕ್ಸ್ ಬೇಗ ವಿಕೆಟ್ ಒಪ್ಪಿಸಿದರೂ ತಾವು ತಾಳ್ಮೆಯಿಂದ ಆಡುವ ಮೂಲಕ ಶ್ರೇಯಸ್ ಗೋಪಾಲ್ ಹಾಗೂ ಜೋರ್ಫರಾ ಆರ್ಚರ್ ಜೊತೆ ಉತ್ತಮ ಜೊತೆಯಾಟ ನಡೆಸಿ ಗೆಲುವು ತಂದುಕೊಟ್ಟಿದ್ದರು. ಈ ಗೆಲುವಿನ ಮೂಲಕ ಪ್ಲೇ ಆಫ್ ಕನಸನ್ನು ರಾಯಲ್ಸ್ ತಂಡಕ್ಕೆ ಚಿಗುರಿಸುವಲ್ಲಿ ಪರಾಗ್ ಪ್ರಮುಖ ಪಾತ್ರವಹಿಸಿದರು.