ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅಭಿನಯದ ರಂಗಸ್ಥಳಂ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆದಿದ್ದು ಈಗ ಇತಿಹಾಸ.
ಆ ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಆಗ್ತಿರೋದು ಗೊತ್ತೇ ಇದೆ. ರಂಗಸ್ಥಳಂ ಕನ್ನಡ ಅವತರಣಿಕೆಯಾದ ರಂಗಸ್ಥಳ ಸಿನಿಮಾದ ಮೊದಲ ಲಿರಿಕಲ್ ವಿಡಿಯೊವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ತೆಲುಗಿನ ಮೂಲ ಸಂಗೀತಕ್ಕೆ ಕನ್ನಡ ಲಿರಿಕ್ ಜೋಡಿಸಲಾಗಿದ್ದು. ಸಂಗೀತ ತಂಡದ ಶ್ರಮಕ್ಕೆ ಕನ್ನಡಿಗರು ಜೈ ಎಂದಿದ್ದಾರೆ.
ಲಹರಿ ಯೂಟ್ಯೂಬ್ ಚಾನೆಲ್ ಮೂಲಕ ಶುಕ್ರವಾರ ಬಿಡುಗಡೆಯಾದ ಎಷ್ಟು ಮುದ್ದಾಗಿದ್ದೀಯೆ ಲಚ್ಮಿ ಹಾಡನ್ನು ಈವರೆಗೂ 40 ಸಾವಿರ ಮಂದಿ ವೀಕ್ಷಿಸಿದ್ದು, 500 ಪರ ಹಾಗೂ ವಿರೋಧದ ಕಮೆಂಟ್ ಹರಿಬಿಟ್ಟಿದ್ದಾರೆ.
ಕೆಲವರು ಸಂಗೀತಗಾರರ ವೃತ್ತಿ ಕೌಶಲ್ಯವನ್ನು ಹೊಗಳಿದ್ದರೆ, ಇನ್ನೂ ಕೆಲವರು ಡಬ್ಬಿಂಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಡಿನ ಡಬ್ಬಿಂಗ್ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ವೃತ್ತಿಪರವಾಗಿದೆ ಎಂದು ಶಹಬ್ಬಾಶ್ಗಿರಿ ಕೊಟ್ಟಿದ್ದಾರೆ.
ಸಿನಿಮಾದ ಡಬ್ಬಿಂಗ್ ರೈಟ್ಸ್ ಅನ್ನು ಜಾಕ್ ಮಂಜು ಪಡೆದಿದ್ದರು. ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಬಿಡುಗಡೆ ದಿನಾಂಕ ಗೊತ್ತಾಗಬೇಕಿದೆ.
- " class="align-text-top noRightClick twitterSection" data="">