ಬಳ್ಳಾರಿ: ನಗರದ ಅವಂಬಾವಿ ಪ್ರದೇಶದ ನಿವಾಸಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮನೆಗೆ ದಿಗಂಬರ ರಾಜಭಾರತಿ ಸ್ವಾಮೀಜಿ ಭೇಟಿ ನೀಡಿ. ಆಶ್ರಮದ ಶಾಲಾ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ್ದಾರೆ ಎನ್ನಲಾಗಿದೆ.
ಸಂಡೂರು ತಾಲೂಕಿನ ದೇವರಕೊಳ್ಳ ಗ್ರಾಮ ಹೊರವಲಯದ ಗುಡ್ಡಗಾಡು ಪ್ರದೇಶದಲ್ಲಿ ದಿಗಂಬರ ರಾಜಭಾರತಿ ಸ್ವಾಮೀಜಿ ವಾಸವಿದ್ದಾರೆ.
ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮನೆಗೆ ಭೇಟಿ ನೀಡಿದ ದಿಗಂಬರ ರಾಜಭಾರತಿ ಸ್ವಾಮೀಜಿ ಬಳಿ, ಸಂಕಷ್ಟಗಳನ್ನು ರೆಡ್ಡಿ ಹೇಳಿಕೊಂಡರಂತೆ. ಶೀಘ್ರವೇ ನಿಮ್ಮೆಲ್ಲ ಸಂಕಷ್ಟಗಳು ನಿವಾರಣೆ ಆಗಲಿದೆ ಎಂದು ಸ್ವಾಮೀಜಿ ಆಶೀರ್ವದಿಸಿದರು ಎನ್ನಲಾಗಿದೆ.
ಜೂನ್ 16 ರಂದು ಜಿಲ್ಲೆಯ ಹೊಸಪೇಟೆ ತಾಲೂಕಿನ ಸಂಕ್ಲಾಪುರ ಗ್ರಾಮದಲ್ಲಿರುವ ಆಶ್ರಮದ ಶಾಲೆಯಲ್ಲಿ ನಡೆಯುವ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿರುವುದಾಗಿ ರಾಜಭಾರತಿ ಸ್ವಾಮೀಜಿ ಹೇಳಿದರು