ಕಲಬುರಗಿ: ಜಿಲ್ಲೆಯ ಹಲವೆಡೆ ಮಳೆಯ ಅಬ್ಬರ ಜೋರಾಗಿದ್ದು, ಅಫ್ಜಲಪುರ ಸೇರಿದಂತೆ ಮೊದಲಾದ ತಾಲೂಕುಗಳಲ್ಲಿ ಧಾರಾಕಾರ ಮಳೆ ಸುರಿದಿದೆ.
ಇಲ್ಲಿನ ಪೊಲೀಸ್ ಕ್ವಾಟ್ರಸ್ ಸಂಪೂರ್ಣ ನೀರಿನಿಂದ ಆವೃತವಾಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಲ್ಲಿ ಮತ್ತು ಹೊಲಗಳಲ್ಲಿ ನೀರು ಸಂಗ್ರಹವಾಗಿದೆ.
ಸಂತಸಗೊಂಡಿರುವ ರೈತ ಸಮುದಾಯ: ಮಳೆಯು ಕೃಷಿ ಚಟುವಟಿಕೆಗಳಿಗೆ ಚಾಲನೆ ಕೊಟ್ಟಿದ್ದು, ಬಿತ್ತನೆ ಕಾರ್ಯ ಪ್ರಾರಂಭಿಸಲಾಗಿದೆ. ಮಳೆ ಬಾರದಿದ್ದಕ್ಕೆ ನಿರಾಶೆಯಾಗಿದ್ದ ರೈತ ನಿನ್ನೆ ಸುರಿದ ಮಳೆಗೆ ಕೊಂಚ ನಿರಾಳವಾಗಿದ್ದಾನೆ. ಅಫ್ಜಲಪುರ ಸೇರಿದಂತೆ ಜಿಲ್ಲೆಯ ಮೊದಲಾದ ಕೆಲ ತಾಲೂಕುಗಳಲ್ಲೂ ಧಾರಾಕಾರ ಮಳೆ ಸುರಿದ ವರದಿಯಾಗಿದೆ.