ರೋಕ್ಬ್ರೂನ್-ಕ್ಯಾಪ್-ಮಾರ್ಟಿನ್(ಫ್ರಾನ್ಸ್): ಸ್ಪೇನಿನ ರಾಫೇಲ್ ನಡಾಲ್ ಫ್ರಾನ್ಸ್ನಲ್ಲಿ ನಡೆಯುತ್ತಿರುವ ಮಾಂಟೋ-ಕಾರ್ಲೊ ಮಾಸ್ಟರ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ನಡಾಲ್ ಇಂದು ನಡೆದ ಕ್ವಾರ್ಟರ್ ಫೈನಲ್ನಲ್ಲಿ 1-6,6-3,6-1 ಸೆಟ್ಗಳಲ್ಲಿ ಅರ್ಜೆಂಟೈನಾದ ಗೈಡೋ ಪೆಲ್ಲಾ ವಿರುದ್ಧ ಜಯ ಸಾಧಿಸಿದ್ದಾರೆ.
ನಡಾಲ್ ಮೆಂಟೋ ಕಾರ್ಲೊ ಟೂರ್ನಿಯಲ್ಲಿ 11 ಬಾರಿ ಚಾಂಪಿಯನ್ ಆಗಿದ್ದಾರೆ. ಈ ಗೆಲುವಿನ ಮೂಲಕ 2019ರ ಆವೃತ್ತಿಯಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದಿರುವ ದಿಗ್ಗಜರಾದ ಡಾಮಿನಿಕ್ ಥೈಮ್, ಸ್ಟೆಫನೋಸ್ ತ್ಸಿತ್ಸಿಪಾಸ್, ಅಲೆಕ್ಸಾಂಡರ್ ಜರ್ವೆ ಹಾಗೂ ವಿಶ್ವದ ನಂ.1 ನೂವಾಕ್ ಜಾಕೋವಿಕ್ರ ಸಾಲಿಗೆ ಸೇರುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡರು.
ಮೊದಲ ಸೆಟ್ಅನ್ನು 1-6ರಲ್ಲಿ ಕಳೆದುಕೊಂಡ ನಡಾಲ್ ನಂತರದ 2 ಸೆಟ್ಗಳಲ್ಲಿ 6-2,6-3 ರಲ್ಲಿ ಗೆದ್ದು ಮಣ್ಣಿನ ಅಂಕಣದಲ್ಲಿ ತಾವೇ ಹೀರೋ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಸೆಮಿಫೈನಲ್ನಲ್ಲಿ ಇಟಲಿಯ ಫಾಬಿಯೋ ಫಾಗ್ನಿನಿಯನ್ನು ಎದುರಿಸಲಿದ್ದಾರೆ.