ವಿಶಾಖಪಟ್ಟಣಂ: ಎರಡನೇ ಕ್ವಾಲಿಫೈಯರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 148 ರನ್ಗಳ ಗುರಿಯನ್ನು ಸಮರ್ಥವಾಗಿ ಬೆನ್ನತ್ತಿ ಆರು ವಿಕೆಟ್ಗಳ ಜಯ ಸಾಧಿಸುವ ಮೂಲ ಚೆನ್ನೈ ಸೂಪರ್ ಕಿಂಗ್ಸ್ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎರಡನೇ ತಂಡವಾಗಿ ಉಪಾಂತ್ಯ ಪ್ರವೇಶಿಸಿದೆ.
ಸಾಧಾರಣ ಗುರಿಯನ್ನು ಬೆನ್ನಟ್ಟಿದ ಚೆನ್ನೈಗೆ ಆರಂಭಿಕರಾದ ಶೇನ್ ವ್ಯಾಟ್ಸನ್ ಹಾಗೂ ಫಫ್ ಡು ಪ್ಲೆಸಿಸ್ ಭರ್ಜರಿ ಆರಂಭ ನೀಡಿದರು. ಇಬ್ಬರೂ ಆಟಗಾರರು 50 ರನ್ ಗಳಿಸಿ ಪೆವಿಲಿಯನ್ ಸೇರಿದರು.
-
.@ChennaiIPL reach their 8th #VIVOIPL final, what a team 🔥#CSKvDC pic.twitter.com/mMpGkNTJEb
— IndianPremierLeague (@IPL) May 10, 2019 " class="align-text-top noRightClick twitterSection" data="
">.@ChennaiIPL reach their 8th #VIVOIPL final, what a team 🔥#CSKvDC pic.twitter.com/mMpGkNTJEb
— IndianPremierLeague (@IPL) May 10, 2019.@ChennaiIPL reach their 8th #VIVOIPL final, what a team 🔥#CSKvDC pic.twitter.com/mMpGkNTJEb
— IndianPremierLeague (@IPL) May 10, 2019
ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ 11 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಅಂಬಟಿ ರಾಯುಡು(20) ತಂಡಕ್ಕೆ ಅರ್ಹ ಜಯ ತಂದಿತ್ತರು.
ಡೆಲ್ಲಿ ಪರ ಬೌಲ್ಟ್, ಇಶಾಂತ್, ಅಕ್ಷರ್ ಪಟೇಲ್ ಹಾಗೂ ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆದರು.
ಚೆನ್ನೈ ತಾನಾಡಿದ ಹತ್ತು ಐಪಿಎಲ್ ಟೂರ್ನಿಯಲ್ಲಿ ಎಂಟು ಬಾರಿ ಫೈನಲ್ ಪ್ರವೇಶಿಸಿದ ದಾಖಲೆ ಬರೆದಿದೆ. ಬೇರಾವುದೇ ತಂಡ ಇಷ್ಟೊಂದು ಬಾರಿ ಉಪಾಂತ್ಯ ಪ್ರವೇಶ ಮಾಡಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಭಾನುವಾರ(ಮೇ 12)ರಂದು ಪ್ರಸಕ್ತ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.