ಗಂಗಾವತಿ : ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಆವರಣದಲ್ಲಿರುವ ವಿದ್ಯುತ್ ಪರಿವಾಹಕಕ್ಕೆ ಅಳವಡಿಸಿರುವ ತಂತಿಬೇಲಿ ಕಿತ್ತು ಹೋಗಿದ್ದು, ಜೆಸ್ಕಾಂ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇಲ್ಲಿನ ಮೈದಾನದಲ್ಲಿರುವ ವಿದ್ಯುತ್ ಪರಿವಾಹಕದ ಸುತ್ತಲ ತಂತಿ ಬೇಲಿ ಕಿತ್ತು ಹೋಗಿದ್ದು, ಇದರ ಪಕ್ಕದಲ್ಲಿ ಸಾರ್ವಜನಿಕ ಉದ್ಯಾನವಿದೆ. ಇಲ್ಲಿಗೆ ಜನರು ವಾಯವಿಹಾರಕ್ಕೆ ಬರುತ್ತಾರೆ. ಅಲ್ಲದೇ ನಿತ್ಯ ಮಕ್ಕಳು ಆಟವಾಡಲು ಕಾಲೇಜು ಮೈದಾನಕ್ಕೆ ಆಗಮಿಸುತ್ತಾರೆ. ಆಕಸ್ಮಿಕವಾಗಿ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ.
ಹಾಗಾಗಿ ಜೆಸ್ಕಾಂ ಇಲಾಖೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.