ನವದೆಹಲಿ: ನಿಚ್ಚಳ ಬಹುಮತದೊಂದಿಗೆ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರ ರಚಿಸಲು ಮುಂದಾಗಿರುವ ಬಿಜೆಪಿ ಈ ನಿಟ್ಟಿನಲ್ಲಿ ಇವತ್ತು ಮಹತ್ವದ ಹೆಜ್ಜೆ ಇಟ್ಟಿದೆ. ಇವತ್ತು ಎನ್‌ಡಿಎ ಸಂಸದೀಯ ಸಭೆ ನಡೆದಿದ್ದು, ನರೇಂದ್ರ ಮೋದಿ ಎನ್‌ಡಿಎ ಸಂಸದೀಯ ನಾಯಕರಾಗಿ ಆಯ್ಕೆಯಾದ್ರು.
ಇದಾದ ಬಳಿಕ ರಾಷ್ಟ್ರಪತಿ ಭೇಟಿ ಮಾಡಿದ ಎನ್‌ಡಿಎ ಮಿತ್ರ ಪಕ್ಷಗಳ ನಿಯೋಜಿತ ಸಂಸದರು ನರೇಂದ್ರ ಮೋದಿಯವರನ್ನು ಒಮ್ಮತದಿಂದ ಪಕ್ಷದ ಸಂಸದೀಯ ನಾಯಕನನ್ನಾಗಿ ಆಯ್ಕೆ ಮಾಡಿದರು.ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ,ರಾಜನಾಥ್ ಸಿಂಗ್,ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್,ಸುಷ್ಮಾ ಸ್ವರಾಜ್, ಉದ್ಧವ್ ಠಾಕ್ರೆ,ನಿತಿನ್ ಗಡ್ಕರಿ, ಕೆ.ಪಳನಿಸ್ವಾಮಿ ಸೇರಿ ಅನೇಕರು ಭಾಗಿಯಾಗಿದ್ದರು.
ಇದಾದ ಬಳಿಕ ರಾಷ್ಟ್ರಪತಿ ಕೋವಿಂದ್ ಭೇಟಿಯಾದ ಮೋದಿ ನೂತನ ಸರ್ಕಾರ ರಚನೆ ಮಾಡಲು ಹಕ್ಕು ಮಂಡನೆ ಮಾಡಿದರು. ಎನ್‌ಡಿಎ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದ್ದು, ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿರುವೆ ಎಂದು ತಿಳಿಸಿದರು.
ಲಭ್ಯವಾಗಿರುವ ಮಾಹಿತಿ ಪ್ರಕಾರ, ನರೇಂದ್ರ ಮೋದಿ ಬರುವ ಮೇ.30ರಂದು ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.