ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕಿನ ರಾಂಪೂರ ಏತ ನೀರಾವರಿ ಯೋಜನೆಯ ಕ್ಲೋಸರ್ ಕಾಮಗಾರಿಗಳು ಅತ್ಯಂತ ಕಳಪೆ ಮಟ್ಟದಿಂದ ಕೂಡಿವೆ ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸಿವೆ.
ರಾಂಪೂರ ಏತ ನೀರಾವರಿ ಯೋಜನೆ ಮುಖ್ಯ ನಾಲೆ, ಪೂರ್ವ ಮತ್ತು ಪಶ್ಚಿಮ ಮುಖ್ಯ ನಾಲೆ, ವಿತರಣಾ ನಾಲೆ ಹಾಗೂ ಟೇಲ್ ಎಂಡ್ ಕಾಲುವೆ ಹೂಳು ತೆಗೆಯುವ, ಮುಳ್ಳುಕಂಟಿ ಸ್ವಚ್ಛತೆ, ವೀಕ್ಷಣಾ ರಸ್ತೆ, ಸಿಡಿ, ಲೈನಿಂಗ್ ಸೇರಿ ಕ್ಲೋಸರ್ ಕಾಮಗಾರಿಗೆ ₹11 ಕೋಟಿ ಖರ್ಚು ಮಾಡುತ್ತಿದ್ದು, ನಿರ್ವಹಣೆಯ ವೈಫಲ್ಯತೆ ಎದ್ದು ಕಾಣುತ್ತಿದೆ.
ಸರ್ಜಾಪುರ ಬಳಿಯ ಟೇಲ್ ಎಂಡ್ ಕಾಲುವೆಯ 4ನೇ ಕಿ.ಮೀ. ದಲ್ಲಿ ನಡೆಯುತ್ತಿರುವ ಸರಫೇಸ್ ಕಾಂಕ್ರೆಟಿಂಗ್ ಕಾಮಗಾರಿ ಇದಕ್ಕೆ ಸಾಕ್ಷಿಯಾಗಿದೆ. ಅಗತ್ಯ ಕಂಕರ್, ಮರಳು, ಸಿಮೆಂಟ್ ಬಳಸದೆ ಗುಂಡುಕಲ್ಲು ಹಾಕಿ ಅತಿಹೆಚ್ಚು ಮರಳು ಮಿಶ್ರಿತ ಸಿಮೆಂಟ್ ಬಳಸಿರುವುದು ಸಸಿ ಕಾಮಗಾರಿ ಸಂಘಟಕರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.
ಇದರಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದು, ಬಹುತೇಕ ಜಾಮಗಾರಿಗಳು ಕಳಪೆಯಿಂದ ಕೂಡಿವೆ. ಮತ್ತೆ ಕೆಲವೆಡೆ ನಾಲೆ ಕುಸಿದು ಕೊಚ್ಚಿ ಹೋಗಿದ್ರೂ ದುರಸ್ತಿಗೆ ಮುಂದಾಗಿಲ್ಲ ಎಂದು ಕರವೇ ಗ್ರಾಮ ಘಟಕ ಅಧ್ಯಕ್ಷ ನಿಜಗುಣಿ ಗುಂಟಿ ಆರೋಪಿಸಿದ್ದಾರೆ.