ಬೀದರ್: ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದು, ಅಗಲಿದ ಹಿರಿಯ ರಾಜಕಾರಣಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಈಶ್ವರ ಖಂಡ್ರೆ- ಕೆಪಿಸಿಸಿ ಕಾರ್ಯಾಧ್ಯಕ್ಷ:
ಸರಳ, ಸಜ್ಜನಿಕೆ, ಬಡವರ ಬಂಧು ಅಪಾರ ಜನಪ್ರೀಯತೆ ಘಳಿಸಿಕೊಂಡ ಕಾಂಗ್ರೆಸ್ ನ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ನಿಧನದಿಂದ ರಾಜ್ಯ ರಾಜಕಾರಣ, ಬೀದರ್ ಜಿಲ್ಲೆ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ. ನಮ್ಮೆಲ್ಲರ ಜೊತೆಯಲ್ಲಿ ಅಗಾಧ ಗೆಳೆತನ ಹೊಂದಿದ್ದು, ನಮ್ಮೆಲ್ಲರ ಗೌರವಕ್ಕೆ ಪಾತ್ರರಾಗಿದ್ದ ನಾರಾಯಣರಾವ್ ನಿಧನ ನಮ್ಮೆಲ್ಲಿರಿಗೂ ಆಘಾತ ತಂದಿದೆ. ದೇವರು ಅವರ ಅಗಲಿಕೆ ದುಃಖ ತಡೆದುಕೊಳ್ಳುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಸಂತಾಪ ಸೂಚಿಸಿದ್ದಾರೆ.
ಪ್ರಭು ಚವ್ಹಾಣ- ಜಿಲ್ಲಾ ಉಸ್ತುವಾರಿ ಸಚಿವರು:
ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕ ಜೀವನದಲ್ಲಿ ಸಕ್ರೀಯವಾಗಿ ನೊಂದವರ ಪಾಲಿಗೆ ಆಶಾ ಕಿರಣವಾಗಿ ದುಡಿದು. ಕೊರೊನಾ ಸೋಂಕಿನಿಂದ ಬಳಲಿ ಅನಾರೋಗ್ಯದಿಂದ ಸಾವನಪ್ಪಿರುವ ಶಾಸಕ ನಾರಾಯಣರಾವ್ ನಿಧನ ರಾಜ್ಯ ರಾಜಕಾರಣಕ್ಕೆ ತುಂಬಲಾಗದ ನಷ್ಟವಾಗಿದ್ದು, ದೇವರು ಅವರ ಆತ್ಮ ಶಾಂತಿ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸಂತಾಪ ಸೂಚಿಸಿದ್ದಾರೆ.
ಬಂಡೆಪ್ಪ ಕಾಶೆಂಪೂರ್- ಜೆಡಿಎಸ್ ಶಾಸಕ:
ಜನಪರ ಕಾಳಜಿ, ಬುದ್ಧ-ಬಸವ ಹಾಗೂ ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಮಾನತೆಯ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ್ದ ನಾರಾಯಣರಾವ್ ನಿಧನ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಜಕ್ಕೂ ತುಂಬಲಾಗದ ನಷ್ಟವಾಗಿದೆ. ನನ್ನ ಅಣ್ಣನಂತೆ ಇದ್ದ ಸಂಗ ಜೀವಿಗೆ ಅನಂತ ನಮನಗಳು. ಅವರ ಕುಟುಂಬದ ಸದಸ್ಯರಿಗೆ ನಾರಾಯಣರಾವ್ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೆನೆ ಎಂದು ಮಾಜಿ ಸಚಿವ ಹಾಲಿ ಶಾಸಕ ರಾಜಶೇಖರ ಪಾಟೀಲ್ ಸಂತಾಪ ವ್ಯಕ್ತಪಡಿಸಿದರು.
ರಾಜಶೇಖರ ಪಾಟೀಲ್ ಹುಮನಾಬಾದ್- ಶಾಸಕರು, ಮಾಜಿ ಸಚಿವರು:
ನೇರ ನುಡಿಯ ಬಿ. ನಾರಾಯಣರಾವ್ ನಮ್ಮ ಆತ್ಮೀಯರು. ಅವರು ಬಡವರ, ನೊಂದವರ ಬಗ್ಗೆ ಅಪಾರ ಕಾಳಜಿ ವಹಸಿದ್ದು, ಇದ್ದಿದ್ದು ಇದ್ದಂಗೆ ಹೇಳುವ ಜಾಯಮಾನದವರಾಗಿದ್ದರು. ಅಂತಹ ನಾಯಕ ನಮ್ಮನ್ನು ಅಗಲಿರುವ ಸುದ್ದಿ ಕೇಳಿ ಆಘಾತವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆ ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಅಭಿಮಾನಿಗಳಿಗೆ ನೀಡಲಿ ಎಂದು ಹಾರೈಸುತ್ತೇನೆ ಎಂದು ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಕಂಬನಿ ಮಿಡಿದಿದ್ದಾರೆ.
ಭಗವಂತ ಖೂಬಾ- ಸಂಸದರು ಬೀದರ್:
ಶಾಸಕ ಬಿ. ನಾರಾಯಣರಾವ್ ಅಗಲಿಕೆಯಿಂದ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ. ಅವರು ಒಬ್ಬ ಕ್ರೀಯಾಶಿಲ ಜನಪ್ರತಿನಿಧಿಯಾಗಿದ್ದು ತುಳಿತಕ್ಕೆ ಒಳಗಾದವರ ಧ್ವನಿಯಾಗಿ ದೀನ ದಲಿತರ ಕಣ್ಮಣಿಯಾಗಿದ್ದರು. ಬಸವಣ್ಣನ ಕರ್ಮ ಭೂಮಿಯಲ್ಲಿ ಜನ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಮಾಡಬೇಕಲ್ಲಾ ಎಂದು ಸದಾ ಹೇಳುತ್ತಿದ್ದರು. ಇಂತಹ ನಾಯಕರನ್ನು ಕಳೆದುಕೊಂಡು ಬಸವಕಲ್ಯಾಣ ಕ್ಷೇತ್ರ ಬಡವಾಗಿದೆ. ಅವರ ಅಗಲಿಕೆ ದುಃಖ ತಡೆದುಕೊಳ್ಳಲು ದೇವರು ಅವರ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ಸಂಸದ ಭಗವಂತ ಖೂಬಾ ಸಂತಾಪ ಸೂಚಿಸಿದ್ದಾರೆ.