ETV Bharat / briefs

ಮೋದಿ ಬ್ಯಾಂಕ್​ ಬ್ಯಾಲೆನ್ಸ್​ ₹4,142 ಸೇರಿ ಇಷ್ಟೊಂದು ಆಸ್ತಿ! ಏರಿಕೆನಾ, ಇಳಿಕೆಯಾಯ್ತಾ?

author img

By

Published : Apr 26, 2019, 9:16 PM IST

ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಒಟ್ಟು 2.51 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ಇದರಲ್ಲಿ ಸ್ಥಿರಾಸ್ತಿ ಮೊತ್ತ ₹ 1.10 ಕೋಟಿ ಹಾಗೂ ಬ್ಯಾಂಕ್​ ಬ್ಯಾಲೆನ್ಸ್​​, ಇತರೆ ಹೂಡಿಕೆ ಸೇರಿ ಒಟ್ಟು ಮೊತ್ತ ₹ 1,41,36,119 ಎಂದು ತಿಳಿದು ಬಂದಿದೆ.

ಮೋದಿ ನಾಮಪತ್ರ ಸಲ್ಲಿಕೆ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಪ್ರದೇಶದ ವಾರಣಾಸಿ ಸಂಸದೀಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಮ್ಮ ಉಮೇದುವಾರಿಕೆಯಲ್ಲಿ ಅವರ ಬಳಿ ಇರುವ ಸಂಪೂರ್ಣ ಆಸ್ತಿಯ ಮಾಹಿತಿ ನೀಡಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಒಟ್ಟು 2.51 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ಇದರಲ್ಲಿ ಸ್ಥಿರಾಸ್ತಿ ಮೊತ್ತ ₹ 1.10 ಕೋಟಿ ಹಾಗೂ ಬ್ಯಾಂಕ್​ ಬ್ಯಾಲೆನ್ಸ್​​ ಇತರೆ ಹೂಡಿಕೆ ಸೇರಿ ಒಟ್ಟು ಮೊತ್ತ ₹ 1,41,36,119 ಎಂದು ತಿಳಿದು ಬಂದಿದೆ.

ಉಳಿದಂತೆ ₹38,750 ಕೈಯಲ್ಲಿರುವ ನಗದು, ಬ್ಯಾಂಕ್ ಬ್ಯಾಲೆನ್ಸ್ ₹ 4,143, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಫಿಕ್ಸೆಡ್ ಡೆಪಾಸಿಟ್ ಹಣ ₹ 1,27,81,574 ( ₹1.27 ಕೋಟಿ ). ಸ್ಥಿರಾಸ್ತಿಯಲ್ಲಿ ₹ 1,10 ಕೋಟಿ ಬೆಲೆಬಾಳುವ ಮನೆ ಗಾಂಧಿನಗರದಲ್ಲಿದೆ ಎಂದು ತಿಳಿಸಿದ್ದಾರೆ. 45 ಗ್ರಾಂ ತೂಕದ ಒಟ್ಟು 4 ಬಂಗಾರದ ಉಂಗುರಗಳಿದ್ದು, ಅದು ₹1.13 ಲಕ್ಷ ರೂ. ಬೆಲೆಬಾಳುತ್ತದೆ. ಸರ್ಕಾರಿ ಸಂಬಳದಲ್ಲೇ ಜೀವನ ನಡೆಸುತ್ತಿರುವ ಮೋದಿ ಮೇಲೆ ಯಾವುದೇ ರೀತಿಯ ಕ್ರಿಮಿನಲ್​ ಕೇಸ್​ಗಳಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಅವರ ಬಳಿ ಯಾವುದೇ ರೀತಿಯ ಭೂಮಿ ಇಲ್ಲ ಎಂದು ಘೋಷಣೆ ಮಾಡಿದ್ದಾರೆ.

ಇನ್ನು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ₹1.65 ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಅದಕ್ಕೆ ಹೋಲಿಕೆ ಮಾಡಿದಾಗ ಅವರ ಆಸ್ತಿಯಲ್ಲಿ ಶೇ 50ರಷ್ಟು ಏರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ನಾಮಪತ್ರದಲ್ಲಿ ಜಶೋದಾಬೆನ್​ ಪತ್ನಿ ಎಂದು ತಿಳಿಸಿದ್ದು, 1983ರಲ್ಲಿ ಗುಜರಾತ್​ ವಿಶ್ವವಿದ್ಯಾಲಯದಿಂದ ಎಂಎ ಡಿಗ್ರಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.1978ರಲ್ಲಿ ಡೆಲ್ಲಿ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದು, 1967ರಲ್ಲಿ ಗುಜರಾತ್ ಬೋರ್ಡ್​​ನಿಂದ ಎಸ್​ಎಸ್​ಸಿ ಪರೀಕ್ಷೆ ಪಾಸ್​ ಮಾಡಿದ್ದಾಗಿ ಹೇಳಿದ್ದಾರೆ.

Intro:Body:

ಮೋದಿ ಬ್ಯಾಂಕ್​ ಬ್ಯಾಲೆನ್ಸ್​ ₹4,142 ಸೇರಿ ಇಷ್ಟೊಂದು ಆಸ್ತಿ... ಏರಿಕೆನಾ, ಇಳಿಕೆಯಾಯ್ತಾ!? 

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಪ್ರದೇಶದ ವಾರಣಾಸಿ ಸಂಸದೀಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಮ್ಮ ಉಮೇದುವಾರಿಕೆಯಲ್ಲಿ ಅವರ ಬಳಿ ಇರುವ ಸಂಪೂರ್ಣ ಆಸ್ತಿಯ ಮಾಹಿತಿ ನೀಡಿದ್ದಾರೆ. 

ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಒಟ್ಟು 2.51 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ಇದರಲ್ಲಿ ಸ್ಥಿರಾಸ್ತಿ ಮೊತ್ತ ₹ 1.10 ಕೋಟಿ ಹಾಗೂ ಬ್ಯಾಂಕ್​ ಬ್ಯಾಲೆನ್ಸ್​​, ಇತರೆ ಹೂಡಿಕೆ ಸೇರಿ ಒಟ್ಟು ಮೊತ್ತ ₹ 1,41,36,119 ಎಂದು ತಿಳಿದು ಬಂದಿದೆ.

ಉಳಿದಂತೆ ₹38,750 ಕೈಯಲ್ಲಿರುವ ನಗದು, ಬ್ಯಾಂಕ್ ಬ್ಯಾಲೆನ್ಸ್ ₹ 4,143,  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಫಿಕ್ಸೆಡ್ ಡೆಪಾಸಿಟ್ ಹಣ ₹ 1,27,81,574 ( ₹1.27 ಕೋಟಿ ). ಸ್ಥಿರಾಸ್ತಿಯಲ್ಲಿ ₹ 1,10 ಕೋಟಿ ಬೆಲೆಬಾಳುವ ಮನೆ  ಗಾಂಧಿನಗರದಲ್ಲಿದೆ ಎಂದು ತಿಳಿಸಿದ್ದಾರೆ.   45 ಗ್ರಾಂ ತೂಕದ ಒಟ್ಟು 4 ಬಂಗಾರದ ಉಂಗುರಗಳಿದ್ದು, ಅದು₹1.13 ಲಕ್ಷ ರೂ. ಬೆಲೆಬಾಳುತ್ತದೆ. ಸರ್ಕಾರಿ ಸಂಬಳದಲ್ಲೇ ಜೀವನ ನಡೆಸುತ್ತಿರುವ ಮೋದಿ ಮೇಲೆ ಯಾವುದೇ ರೀತಿಯ ಕ್ರಿಮಿನಲ್​ ಕೇಸ್​ಗಳಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಅವರ ಬಳಿ ಯಾವುದೇ ರೀತಿಯ ಭೂಮಿ ಇಲ್ಲ ಎಂದು ಘೋಷಣೆ ಮಾಡಿದ್ದಾರೆ.

ಇನ್ನು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ₹1.65 ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಅದಕ್ಕೆ ಹೋಲಿಕೆ ಮಾಡಿದಾಗ ಅವರ ಆಸ್ತಿಯಲ್ಲಿ ಶೇ 50ರಷ್ಟು ಏರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ನಾಮಪತ್ರದಲ್ಲಿ ಜಶೋದಾಬೆನ್​ ಪತ್ನಿ ಎಂದು ತಿಳಿಸಿದ್ದು, 1983ರಲ್ಲಿ ಗುಜರಾತ್​ ವಿಶ್ವವಿದ್ಯಾಲಯದಿಂದ ಎಂಎ ಡಿಗ್ರಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.1978ರಲ್ಲಿ ಡೆಲ್ಲಿ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದು, 1967ರಲ್ಲಿ ಗುಜರಾತ್ ಬೋರ್ಡ್​​ನಿಂದ ಎಸ್​ಎಸ್​ಸಿ ಪರೀಕ್ಷೆ ಪಾಸ್​ ಮಾಡಿದ್ದಾಗಿ ಹೇಳಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.