ನವದೆಹಲಿ: ಆರ್ಥಿಕ ಸಮಸ್ಯೆ, ಉದ್ಯೋಗ ಹಾಗೂ ರಾಷ್ಟ್ರೀಯ ಭದ್ರತೆಯಲ್ಲಿನ ಲೋಪದೋಷ ಪತ್ತೆ ಹಚ್ಚಲು ಪ್ರಧಾನಿ ಮೋದಿ ಮೂರು ವಿಶೇಷ ಸಂಪುಟ ಸಮಿತಿಗಳನ್ನು ರಚಿಸಿದ್ದಾರೆ.
ಭದ್ರತಾ ಕ್ಯಾಬಿನೆಟ್ ಸಮಿತಿ, ಹೂಡಿಕೆ ಮತ್ತು ಬೆಳವಣಿಗೆಗಳ ಕ್ಯಾಬಿನೆಟ್ ಸಮಿತಿ ಹಾಗೂ ಭದ್ರತಾ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯ ಕ್ಯಾಬಿನೆಟ್ ಸಮಿತಿಗಳನ್ನು ಪ್ರಧಾನಿ ಮೋದಿ ಪರಿಚಯಿಸಿದ್ದಾರೆ. ಮೋದಿಯೇ ಈ ಎಲ್ಲ ಸಮಿತಿಗಳ ಮುಖ್ಯಸ್ಥರಾಗಿರಲಿದ್ದಾರೆ.
ಎಎನ್-32 ವಿಮಾನಕ್ಕಿದೆ 'ನಾಪತ್ತೆ' ಇತಿಹಾಸ! ಇದು ವಾಯುಸೇನೆಯ ಅತಿದೊಡ್ಡ ಹುಡುಕಾಟದ ಕಥೆ
ಭದ್ರತಾ ಕ್ಯಾಬಿನೆಟ್ ಸಮಿತಿ:
ಐದು ಮಂದಿ ಸದಸ್ಯರ ಈ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಇರಲಿದ್ದಾರೆ. ಮೋದಿ ಸಮಿತಿಯ ಮುಖ್ಯಸ್ಥರಾಗಿರಲಿದ್ದಾರೆ.
ಹೂಡಿಕೆ ಮತ್ತು ಬೆಳವಣಿಗೆಗಳ ಕ್ಯಾಬಿನೆಟ್:
ಪ್ರಧಾನಿ ಮೋದಿ ಮುಖ್ಯಸ್ಥರಾಗಿರುವ ಈ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ರೈಲ್ವೇ ಸಚಿವ ಪಿಯೂಷ್ ಗೋಯಲ್ ಇರಲಿದ್ದಾರೆ.
ಭದ್ರತಾ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯ ಕ್ಯಾಬಿನೆಟ್ ಸಮಿತಿ:
ಪ್ರಧಾನಿ ಮೋದಿ ಮುಖ್ಯಸ್ಥರಾಗಿರುವ ಈ ಸಮಿತಿ ಹತ್ತು ಮಂದಿ ಸದಸ್ಯರನ್ನು ಹೊಂದಿರಲಿದೆ. ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೇ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲಗಳ ಸಚಿವ ಧಮೇಂದ್ರ ಪ್ರಧಾನ್, ಕೌಶಲ್ಯ ಮತ್ತು ಉದ್ಯಮಶೀಲ ಸಚಿವ ಮಹೇಂದ್ರ ನಾಥ್ ಪಾಂಡೆ, ರಾಜ್ಯ ಖಾತೆ ಸಚಿವರಾದ ಸಂತೋಷ್ ಕುಮಾರ್ ಗಂಗ್ವಾರ್ ಹಾಗೂ ಹರ್ದೀಪ್ ಸಿಂಗ್ ಪುರಿ ಈ ಸಮಿತಿಯ ಸದಸ್ಯರಾಗಿದ್ದಾರೆ.