ಗಂಗಾವತಿ(ಕೊಪ್ಪಳ) : ವಾರಣಾಸಿಯ ಬನಾರಸ್ ಐಐಟಿ ಹಿಂದು ವಿಶ್ವವಿದ್ಯಾಲಯ, ಚಲನಚಿತ್ರ ಮತ್ತು ಮಾಧ್ಯಮ ಮಂಡಳಿಯು ಇತ್ತೀಚೆಗೆ ಆಯೋಜಿಸಿದ್ದ ಭಾರತದ ಮೊದಲ ಅತಿ ದೊಡ್ಡ ಡಿಜಿಟಲ್ ಕಲಾ, ಉತ್ಸವ ಮತ್ತು ಛಾಯಾಚಿತ್ರ ಸ್ಪರ್ಧೆಯಲ್ಲಿ ನಗರದ ಛಾಯಾಚಿತ್ರ ಗ್ರಾಹಕ ವಿಜಯ್ ಪಾಲ್ಗೊಂಡು ಮೊದಲ ಸ್ಥಾನ ಪಡೆದಿದ್ದಾರೆ.
ಐದು ವಿಭಾಗಗಳಲ್ಲಿ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂತಿಮ ಸುತ್ತಿನ ಪ್ರಶಸ್ತಿಗೆ ಆಯ್ಕೆಯಾಗಿವೆ. ಹೊರ ದೇಶದ 500ಕ್ಕೂ ಹೆಚ್ಚು ಛಾಯಾಗ್ರಾಹಕರು ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಳೆದ ಹಲವು ವರ್ಷದಿಂದ ಫೋಟೋಗ್ರಫಿಯನ್ನು ಹವ್ಯಾಸವನ್ನಾಗಿಸಿಕೊಂಡ ಯುವಕ ವಿಜಯ್ ತನ್ನ ಕ್ಯಾಮೆರಾದ ಕಣ್ಣಲ್ಲಿ ಸಾಕಷ್ಟು ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
ನಗರದಲ್ಲಿ ಪ್ರಾಥಮಿಕ ಶಿಕ್ಷಣ ವಿಜಯ ಬಳ್ಳಾರಿ, ಸದ್ಯ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ರಿಫ್ಲೆಕ್ಷನ್, ಹೋಂ ಟೌನ್, ಹ್ಯಾಪಿ, ಪ್ರಾಡೆಕ್ಟ್ ಮತ್ತು ಇಲ್ಯೂಷನ್ ಎಂಬ ಐದು ವಿಭಾಗದಲ್ಲಿ ತನ್ನ ಚಿತ್ರಗಳನ್ನು ಸ್ಪರ್ಧೆಗೆ ಇಟ್ಟಿದ್ದ ಯುವಕ, ಎಲ್ಲಾ ವಿಭಾಗದಲ್ಲೂ ಮೊದಲ ಹಂತದಲ್ಲಿ ತೇರ್ಗಡೆಯಾಗಿ ಕೊನೆಗೆ ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ರಿಫ್ಲೆಕ್ಷನ್, ಹೋಂ ಟೌನ್, ಹ್ಯಾಪಿ, ಪ್ರಾಡಕ್ಟ್ ಮತ್ತು ಇಲ್ಯೂಷನ್ ಎಂಬ ಐದು ವಿಭಾಗದಲ್ಲಿ ತನ್ನ ಚಿತ್ರಗಳನ್ನು ಸ್ಪರ್ಧೆಗೆ ಇಟ್ಟಿದ್ದ ಯುವಕ, ಎಲ್ಲಾ ವಿಭಾಗದಲ್ಲೂ ಮೊದಲ ಹಂತದಲ್ಲಿ ತೇರ್ಗಡೆಯಾಗಿ ಕೊನೆಗೆ ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.