ಚಿತ್ರದುರ್ಗ: ದೇಶದಲ್ಲಿ ಧರ್ಮ, ಸಂಸ್ಕೃತಿ ಉಳಿದಿದ್ದರೆ ಅದು ಕೇವಲ ದೇವಾಲಯಗಳಿಂದ ಮಾತ್ರ ಎಂದು ಉಡುಪಿ ಪೇಜಾವರ ಶ್ರೀಗಳು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಮುತ್ತಯ್ಯನಹಟ್ಟಿಯಲ್ಲಿ ನಡೆದ ರಾಜರಾಜೇಶ್ವರಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇವಾಲಯಗಳ ಮೂಲಕ ಧಾರ್ಮಿಕ ಜಾಗೃತಿ ಮತ್ತು ಭಕ್ತಿಯ ಪ್ರಸಾರ ಮಾಡುವುದರಿಂದ ಹಿಂದೂ ಧರ್ಮ ಉಳಿದಿದೆ. ದೇವಾಲಯಗಳ ಮುಖಾಂತರ ಸನಾತನ ಧರ್ಮದ ಜಾಗೃತಿ ನಡೆಯುತ್ತಿದೆ ಎಂದರು.
ಪಂಚ ದೇವತೆಗಳು ಮತ್ತು ಮೂಲ ಮಠಾಧೀಶರುಗಳು ನಮ್ಮ ಹಿಂದೂ ಧರ್ಮದ ಸಂಕೇತ. ಇದೊಂದು ಅನೇಕ ಧರ್ಮಗಳ ಸಮುಚ್ಛಯ. ನಮ್ಮ ಧರ್ಮಕ್ಕೆ ಅನೇಕ ಮುಖಗಳಿದ್ದರೂ ನಮ್ಮ ಹೃದಯ ಒಂದೇ. ನಮ್ಮಲ್ಲಿ ಎಷ್ಟೇ ಬೇರೆ ಬೇರೆ ಸಂಪ್ರದಾಯ, ಮತ ಬೇಧಗಳು ಇದ್ದರೂ ಕೂಡ ನಮ್ಮ ಹೃದಯ ಒಂದಾದರೆ ಮಾತ್ರ ಹಿಂದೂ ಧರ್ಮ, ರಾಷ್ಟ್ರ ಬಲಿಷ್ಠವಾಗಿ ಬೆಳೆಯಲಿಕ್ಕೆ ಸಾಧ್ಯ ಎಂದು ಶ್ರೀಗಳು ತಿಳಿಸಿದರು.