ನವದೆಹಲಿ: ಚುನಾವಣೆಯ ಹೀನಾಯ ಸೋಲಿನಿಂದ ಹೊರಬರದ ವಿಪಕ್ಷಗಳ ನಡುವೆಯೇ ಹದಿನೇಳನೇ ಲೋಕಸಭೆಯ ಮೊದಲ ಕಲಾಪ ಸೋಮವಾರ ಆರಂಭವಾಗಲಿದೆ.
ಕಲಾಪ ಆರಂಭಕ್ಕೆ ಕೇವಲ ಒಂದು ದಿನ ಉಳಿದಿದ್ದು, ಮೊದಲ ದಿನ ಆಡಳಿತ ಪಕ್ಷವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ವಿಪಕ್ಷ ಇನ್ನೂ ಯಾವುದೇ ಕಾರ್ಯತಂತ್ರ ರೂಪಿಸಿಲ್ಲ. ಇದರ ಜೊತೆಗೆ ಕಾಂಗ್ರೆಸ್ ಸಂಸತ್ತಿನಲ್ಲಿ ತನ್ನ ವಿಪಕ್ಷ ನಾಯಕನನ್ನು ಇನ್ನೂ ಘೋಷಿಸಿಲ್ಲ.
ಈ ಬಾರಿ ಸಂಸತ್ನಲ್ಲಿ ಮೊಳಗಲ್ಲ ಗಟ್ಟಿದನಿ... ಮುತ್ಸದ್ದಿ ಜೀವಗಳಿಲ್ಲದೇ ಕಲಾಪಕ್ಕಿಲ್ಲ ಕಳೆ!?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಹಾಗೂ ಮುತ್ಸದ್ಧಿ ರಾಜಕಾರಣಿಗಳು ಸೋಲನುಭವಿಸಿದ್ದು ಪರಿಣಾಮ ಬರೋಬ್ಬರಿ 300 ಚೊಚ್ಚಲ ಸಂಸದರು ಪಾರ್ಲಿಮೆಂಟ್ ಪ್ರವೇಶ ಮಾಡಿದ್ದಾರೆ. ಚುನಾವಣೆಯಲ್ಲಿ ಮತದಾರ ಹೊಸಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾನೆ. ಮಲ್ಲಿಕಾರ್ಜುನ ಖರ್ಗೆ, ಹೆಚ್.ಡಿ.ದೇವೇಗೌಡ, ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳು ಈ ಬಾರಿ ಸಂಸತ್ನಲ್ಲಿ ಕಾಣಿಸಿಗುವುದಿಲ್ಲ.
ಜೂನ್ 16ರಂದು ಆರಂಭವಾಗಲಿರುವ ಮೊದಲ ಹಂತದ ಅಧಿವೇಶನ ಜುಲೈ 26ರಂದು ಮುಕ್ತಾಯವಾಗಲಿದೆ. ಮುನ್ನೂರಕ್ಕೂ ಅಧಿಕ ಸಂಸದರನ್ನು ಹೊಂದಿರುವ ಬಿಜೆಪಿ ಅಧಿವೇಶನದ ಹುರುಪಿನಲ್ಲಿದೆ.