ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ರಹಸ್ಯ ಮಾತುಕತೆ ನಡೆಸಿದ ಬಳಿಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಪಕ್ಷಕ್ಕೆ ಸಾವಿರಾರು ಜನರ ತಪಸ್ಸು, ಪರಿಶ್ರಮವಿದೆ. ಎಲ್ಲರ ಪರಿಶ್ರಮದ ಫಲವಾಗಿ ಅಧಿಕಾರದಲ್ಲಿದ್ದೇವೆ. ನಮ್ಮ ಆದ್ಯತೆ ಜನರ ಹಿತ ಕಾಯೋದು. ಇತ್ತೀಚಿನ ಕೆಲವು ಬೆಳವಣಿಗೆ ನಮಗೆ ಕಳವಳ ಉಂಟು ಮಾಡಿದೆ. ಆ ನಿಟ್ಟಿನಲ್ಲಿ ಯಾಕೆ ಹೀಗೆ ಆಗುತ್ತಿದೆ ಎಂಬ ಬಗ್ಗೆ ಇಬ್ಬರಿಗೂ ಆತಂಕವಿದೆ ಎಂದರು.
ಯಾರದ್ದೋ ಪರಿಶ್ರಮದಿಂದ ಕಷ್ಟಪಟ್ಟು ಕಟ್ಟಿರುವ ಪಕ್ಷ. ನಮ್ಮ ಆಶಯಗಳಿಗೆ ವಿರುದ್ಧ ಹೋಗಬಾರದು. ಆ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ. ನಾವಿಬ್ಬರೇ ನಿರ್ಣಯ ಕೈಗೊಳ್ಳಲು ಆಗುವುದಿಲ್ಲ. ಪಕ್ಷದ ಹಿರಿಯರಿದ್ದಾರೆ, ಕೋರ್ ಕಮಿಟಿ ಇದೆ. ಅವರ ಜೊತೆ ಸಮಾಲೋಚನೆ ನಡೆಸಿ ಏನು ಮಾಡಬೇಕು ಅದನ್ನ ಮಾಡ್ತೇವೆ ಎಂದಿದ್ದಾರೆ.