ETV Bharat / briefs

ವಿದೇಶಿ ಪ್ಲೇಯರ್ಸ್ ತವರಿಗೆ ತೆರಳಿದರೆ ಡೆಲ್ಲಿಗೆ ಕಪ್​ ಗೆಲ್ಲುವ ಅವಕಾಶ... ಹೇಗೆ ಗೊತ್ತಾ? - ರಾಜಸ್ಥಾನ ರಾಯಲ್ಸ್​

ವಿಶ್ವಕಪ್​ ಹತ್ತಿರವಾಗುತ್ತಿದ್ದಂತೆ ರಾಷ್ಟ್ರೀಯ ತಂಡದಿಂದ ಕರೆ ಬಂದಿರುವ ಹಿನ್ನಲೆ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಸ್ವದೇಶಕ್ಕೆ ತೆರಳುತ್ತಿರುವುದು ಐಪಿಎಲ್​ ತಂಡಗಳಿಗೆ ತುಂಬಲಾರದ ನಷ್ಟವಾಗುತ್ತಿದೆ. ಆದ್ರೆ ಡೆಲ್ಲಿ ಕ್ಯಾಪಿಟಲ್​ ಮಾತ್ರ ಒಳಗೊಳಗೆ ಹಿಗ್ಗುತ್ತಿದೆ.

ipl
author img

By

Published : Apr 28, 2019, 4:35 PM IST

ನವದೆಹಲಿ: ವಿಶ್ವಕಪ್​ ಹತ್ತಿರವಾಗುತ್ತಿದ್ದಂತೆ ರಾಷ್ಟ್ರೀಯ ತಂಡದಿಂದ ಕರೆ ಬಂದಿರುವ ಹಿನ್ನಲೆ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಸ್ವದೇಶಕ್ಕೆ ತೆರಳುತ್ತಿರುವುದು ಐಪಿಎಲ್​ ತಂಡಗಳಿಗೆ ತುಂಬಲಾರದ ನಷ್ಟವಾಗುತ್ತಿದ್ದರೆ, ಡೆಲ್ಲಿ ಕ್ಯಾಪಿಟಲ್​ ಮಾತ್ರ ಒಳಗೊಳಗೆ ಹಿಗ್ಗುತ್ತಿದೆ.

ಹೌದು, ಬೇರೆ ತಂಡಗಳ ವಿದೇಶಿ ಆಟಗಾರರು ಅವರ ತವರಿಗೆ ವಾಪಸ್​ ಹೋಗಲೇಬೇಕಾದ ಪರಿಸ್ಥಿತಿ ಎದುರಾಗಿದೆ. ವಿಶ್ವಕಪ್​ಗೂ ಮುನ್ನ ನಡೆಯುವ ತರಬೇತಿ ಹಾಗೂ ಕೆಲವು ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಐಪಿಎಲ್​ನಲ್ಲಿನ ಆಟ ಮೊಟಕುಗೊಳಿಸಲೇಬೇಕಾಗಿದೆ. ಐಪಿಎಲ್​ನಲ್ಲಿ ಇದರ ಪರಿಣಾಮ ಹೆಚ್ಚು ಬೀರುತ್ತಿರುವುದು ಸನ್​ರೈಸರ್ಸ್​ ಹೈದರಾಬಾದ್​, ರಾಜಸ್ಥಾನ ರಾಯಲ್ಸ್​, ಆರ್​ಸಿಬಿಗೆ ಮಾತ್ರ. ಇನ್ನು ಮುಂಬೈ, ಚೆನ್ನೈ, ಪಂಜಾಬ್​ ಹಾಗೂ ಕೆಕೆಆರ್​ ತಂಡಗಳಲ್ಲಿ ಕೆಲವೇ ಕೆಲವು ಆಟಗಾರರು ಹೋದರೂ ಇನ್ನುಳಿದ ಸ್ಟಾರ್​ ಆಟಗಾರರ ದಂಡೇ ಇರುವುದರಿಂದ ಈ ತಂಡಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ.

ಆದರೆ, ಈ ಸಮಸ್ಯೆಯಿಂದ ಡೆಲ್ಲಿ ತಂಡ ಮುಕ್ತವಾಗಿದೆ. ಏಕೆಂದರೆ ಡೆಲ್ಲಿ ತಂಡದಲ್ಲಿರುವ ರಬಾಡಾರನ್ನು ಬಿಟ್ಟರೆ, ಉಳಿದ ಯಾವ ಆಟಗಾರರು ತಂಡ ಬಿಟ್ಟು ಹೋಗುತ್ತಿಲ್ಲ. ರಬಾಡಾ ಕೂಡ ಹೋಗುವುದು ಇನ್ನೂ ಖಚಿತವಾಗಿಲ್ಲ. ಇದರಿಂದ ಚೊಚ್ಚಲ ಐಪಿಎಲ್​ ಕನಸು ಕಾಣುತ್ತಿರುವ ಡೆಲ್ಲಿ ಯುವಪಡೆಗೆ ಬೇರೆ ತಂಡಗಳ ಆಟಗಾರರು ಐಪಿಎಲ್​ನಿಂದ ದೂರವಾಗುತ್ತಿರುವುದು ಒಂದು ರೀತಿಯ ಅದೃಷ್ಟ ಸಿಕ್ಕಂತಾಗಿದೆ.

ipl
ತವರಿಗೆ ಮರಳಲಿರುವ ವಿದೇಶಿ ಆಟಗಾರರು

ರಾಜಸ್ಥಾನ ರಾಯಲ್ಸ್​ನಲ್ಲಿ ಈಗಾಗಲೇ ಜಾಸ್​ ಬಟ್ಲರ್​, ಬೆನ್​ಸ್ಟೋಕ್ಸ್​, ಜೋಫ್ರಾ ಆರ್ಚರ್​ ತಂಡದಿಂದ ಹೊರ ನಡೆದಿದ್ದಾರೆ. ಇನ್ನು ಮೇ ಮೊದಲ ವಾರದಲ್ಲಿ ಸ್ಟಿವ್​ ಸ್ಮಿತ್​, ​ ಕೂಡ ತಂಡ ಬಿಡುವ ಸಾಧ್ಯತೆಯಿದೆ.

ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿ ಸ್ಯಾಮ್​ ಬಿಲ್ಲಿಂಗ್ಸ್​, ಡೇವಿಡ್​ ವಿಲ್ಲೆ, ಆರ್​ಸಿಬಿಯಲ್ಲಿ ಮೊಯಿನ್​ ಅಲಿ ಹಾಗೂ ಮಾರ್ಕಸ್​ ಸ್ಟೋಯ್ನಿಸ್​, ಮುಂಬೈನಲ್ಲಿ ಬಹ್ರೆನ್​ಡ್ರಾಫ್​,ಡಿಕಾಕ್​, ಲಸಿತ್​ ಮಲಿಂಗಾ, ಪಂಜಾಬ್​ ತಂಡದಲ್ಲಿ ಮುಜೀಬ್​ ಉರ್​ ರೆಹಮಾನ್, ಕೋಲ್ಕತ್ತಾ ನೈಟ್​ ರೈಡರ್ಸ್​ನಲ್ಲಿ ಜೋ ಡೆನ್ಲಿ, ಸನ್​ರೈಶರ್ಸ್​ ಪರ ಜಾನಿ ಬೈರ್ಸ್ಟೋವ್​, ಶಕಿಬ್​ ಅಲ ಹಸನ್, ರಶೀದ್​ ಖಾನ್​, ಮೊಹಮ್ಮದ್​ ನಬಿ ಪೂರ್ತಿ ಐಪಿಎಲ್​ನಿಂದ ಹೊರ ಹೋಗಲಿದ್ದಾರೆ.

ನ್ಯೂಜಿಲ್ಯಾಂಡ್​, ವೆಸ್ಟ್​ ವಿಂಡೀಸ್​, ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಸಂಪೂರ್ಣ ಐಪಿಎಲ್​ ಆಡಲು ಅನುಮತಿ ನೀಡಿವೆ. ಅಫ್ಘಾನಿಸ್ತಾನ ಪೂರ್ಣ ಐಪಿಎಲ್​ ಆಡುವುದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ರಾಷ್ಟ್ರೀಯ ತಂಡದಿಂದ ಕರೆ ಬಂದರೆ ಮೂವರು ಅಫ್ಘನ್​ ಆಟಗಾರರಾದ ರಶೀದ್​, ನಬಿ ಹಾಗೂ ಮುಜೀಬ್ ಸ್ವದೇಶಕ್ಕೆ ತೆರಳಲಿದ್ದಾರೆ.

ವಿದೇಶಿ ಆಟಗಾರರನ್ನೇ ನಂಬಿಕೊಂಡಿದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡ ಹಾಗೂ ರಾಜಸ್ಥಾನ ತಂಡಗಳು ತೀವ್ರ ಹಿನ್ನಡೆ ಅನುಭವಿಸಲಿವೆ. ಉಳಿದ ತಂಡಗಳಿಗೆ ಬದಲಿ ಆಟಗಾರರ ಲಭ್ಯತೆ ಇರುವುದರಿಂದ ಹೆಚ್ಚು ಹೊಡೆತ ಬೀಳುವುದಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್​ ಮಾತ್ರ ಯಾವ ಆಟಗಾರನೂ ಹೋಗದಿರುವುದರಿಂದ ತಂಡಕ್ಕೆ ಹೆಚ್ಚಿನ ಬಲ ಬರಲಿದೆ. ಈ ಮೂಲಕ ಚೊಚ್ಚಲ ಐಪಿಎಲ್​ ಕಪ್​ ಗೆಲ್ಲಲು ಅದ್ಭುತ ಅವಕಾಶ ದೊರೆತಿದೆ.​

Intro:Body:

ವಿದೇಶಿ ಪ್ಲೇಯರ್ಸ್ ತವರಿಗೆ ಮರಳಿದರೆ ಡೆಲ್ಲಿಗೆ ಕಪ್​ ಗೆಲ್ಲುವ ಅವಕಾಶ!... ಹೇಗೆ ಗೊತ್ತಾ?

ನವದೆಹಲಿ: ವಿಶ್ವಕಪ್​ ಹತ್ತಿರವಾಗುತ್ತಿದ್ದಂತೆ ರಾಷ್ಟ್ರೀಯ ತಂಡದಿಂದ ಕರೆ ಬಂದಿರುವ ಹಿನ್ನಲೆ ಇಂಗ್ಲೆಂಡ್​, ದ.ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಸ್ವದೇಶಕ್ಕೆ ಮರಳುತ್ತಿರುವುದು ಐಪಿಎಲ್​ ತಂಡಗಳಿಗೆ ತುಂಬಲಾರದ ನಷ್ಟವಾಗುತ್ತಿದ್ದರೆ, ಡೆಲ್ಲಿ ಕ್ಯಾಪಿಟಲ್​ ಮಾತ್ರ ಒಳಗೊಳಗೆ ಹಿಗ್ಗುತ್ತಿದೆ.

ಹೌದು, ಬೇರೆ ತಂಡಗಳ ವಿದೇಶಿ ಆಟಗಾರರು ಅವರ ತವರಿಗೆ ವಾಪಾಸ್​ ಹೋಗಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ವಿಶ್ವಕಪ್​ಗೂ ಮುನ್ನ ನಡೆಯುವ ತರಬೇತಿ ಹಾಗೂ ಕೆಲವು ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಐಪಿಎಲ್​ನ ಮೊಟಕುಗೊಳಿಸಲೇಬೇಕಾಗಿದೆ. ಐಪಿಎಲ್​ನಲ್ಲಿ ಇದರ ಪರಿಣಾಮ ಹೆಚ್ಚು ಬೀರುತ್ತಿರುವುದು ಸನ್​ರೈಸರ್ಸ್​ ಹೈದರಾಬಾದ್​, ರಾಜಸ್ಥಾನ ರಾಯಲ್ಸ್​, ಆರ್​ಸಿಬಿಗೆ ಮಾತ್ರ, ಇನ್ನು ಮುಂಬೈ, ಚೆನ್ನೈ, ಪಂಜಾಬ್​ ಹಾಗೂ ಕೆಕೆಆರ್​ ತಂಡಗಳಲ್ಲಿ ಕೆಲವೇ ಕೆಲವು ಆಟಗಾರರು ಹೋದರೂ ಇನ್ನು ಸ್ಟಾರ್​ ಆಟಗಾರರ ದಂಡೇ ಇರುವುದರಿಂದ  ತಂಡಗಳಲ್ಲಿ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ.

ಆದರೆ ಈ ಸಮಸ್ಯೆಯಿಂದ ಡೆಲ್ಲಿ ತಂಡ ಮುಕ್ತವಾಗಿದೆ. ಏಕೆಂದರೆ ಡೆಲ್ಲಿ ತಂಡದಲ್ಲಿರುವ ರಬಾಡಾರನ್ನು ಬಿಟ್ಟರೆ, ಉಳಿದ ಯಾವ ಆಟಗಾರರು ತಂಡ ಬಿಟ್ಟು ಹೋಗುತ್ತಿಲ್ಲ. ರಬಾಡಾ ಕೂಡ ಹೋಗುವುದು ಇನ್ನು ಖಚಿತವಾಗಿಲ್ಲ. ಇದರಿಂದ ಚೊಚ್ಚಲ ಐಪಿಎಲ್​ ಕನಸು ಕಾಣುತ್ತಿರುವ ಡೆಲ್ಲಿ ಯುವಪಡೆಗೆ ಬೇರೆ ತಂಡಗಳ ಆಟಗಾರರು ಐಪಿಎಲ್​ನಿಂದ ದೂರವಾಗುತ್ತಿರುವುದು ಒಂದು ರೀತಿಯ ಅದೃಷ್ಟ ಸಿಕ್ಕಂತಾಗಿದೆ.

ರಾಜಸ್ಥಾನ ರಾಯಲ್ಸ್​ನಲ್ಲಿ ಹೀಗಾಗಲೆ  ಜಾಸ್​ ಬಟ್ಲರ್​, ಬೆನ್​ಸ್ಟೋಕ್ಸ್​,ಜೋಫ್ರಾ ಆರ್ಚರ್​ ತಂಡದಿಂದ ಹೊರ ನಡೆದಿದ್ದಾರೆ, ಇನ್ನು ಮೇ ಮೊದಲ ವಾರದಲ್ಲಿ ಸ್ಟಿವ್​ ಸ್ಮಿತ್​, ​ ಕೂಡ ತಂಡ ಬಿಡುವ ಸಾಧ್ಯತೆಯಿದೆ. 

ಚೆನ್ನೈ ಸೂಪರ್​ಕಿಂಗ್ಸ್​ನಲ್ಲಿ ಸ್ಯಾಮ್​ ಬಿಲ್ಲಿಂಗ್ಸ್​,ಡೇವಿಡ್​ ವಿಲ್ಲೆ, ಆರ್​ಸಿಬಿಯಲ್ಲಿ ಮೊಯಿನ್​ ಅಲಿ ಹಾಗೂ ಮಾರ್ಕಸ್​ ಸ್ಟೋಯ್ನಿಸ್​, ಮುಂಬೈನಲ್ಲಿ ಬಹ್ರೆನ್​ಡ್ರಾಫ್​,ಡಿಕಾಕ್​, ಲಸಿತ್​ ಮಲಿಂಗಾ, ಪಂಜಾಬ್​ ತಂಡದಲ್ಲಿ ಮುಜೀಬ್​ ಉರ್​ ರೆಹಮಾನ್, ಕೋಲ್ಕತ್ತಾ ನೈಟ್​ರೈಡರ್ಸ್​ನಲ್ಲಿ ಜೋ ಡೆನ್ಲಿ, ಸನ್​ರೈಶರ್ಸ್​ ಪರ ಜಾನಿ ಬೈರ್ಸ್ಟೋವ್​, ಶಕಿಬ್​ ಅಲ ಹಸನ್, ರಶೀದ್​ ಖಾನ್​, ಮೊಹಮ್ಮದ್​ ನಬಿ ಪೂರ್ತಿ ಐಪಿಎಲ್​ನಿಂದ ಹೊರ ಹೋಗಲಿದ್ದಾರೆ.

ನ್ಯೂಜಿಲ್ಯಾಂಡ್​, ವೆಸ್ಟ್​ ಇಂಡೀಸ್​, ದ.ಆಫ್ರಿಕಾ ಕ್ರಿಕೆಟ್​ ಮಂಡಳಿ ಸಂಪೂರ್ಣ ಐಪಿಎಲ್​ ಆಡಲು ಅನುಮತಿ ನೀಡಿವೆ, ಇನ್ನು ಅಫ್ಘಾನಿಸ್ತಾನ ಪೂರ್ಣ ಐಪಿಎಲ್​ ಆಡುವುದರ ಬಗ್ಗೆ ಇನ್ನು ಯಾವುದೇ ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ರಾಷ್ಟ್ರೀಯ ತಂಡದಿಂದ ಕರೆ ಬಂದರೆ ಮೂವರು ಅಫ್ಘನ್​ ಆಟಗಾರರಾದ ರಶೀದ್​,ನಬಿ ಹಾಗೂ ಮುಜೀಬ್ ಸ್ವದೇಶಕ್ಕೆ ತೆರಳಲಿದ್ದಾರೆ. 

ವಿದೇಶಿ ಆಟಗಾರರನ್ನೇ ನಂಬಿಕೊಂಡಿದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡ ಹಾಗೂ ರಾಜಸ್ಥಾನ ತಂಡಗಳು ತೀವ್ರ ಹಿನ್ನಡೆ ಅನುಭವಿಸಲಿವೆ. ಉಳಿದ ತಂಡಗಳಿಗೆ ಬದಲಿ ಆಟಗಾರರ ಲಭ್ಯತೆ ಇರುವುದರಿಂದ ಹೆಚ್ಚು ಹೊಡೆತ ಬೀಳುವುದಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್​ ಮಾತ್ರ ಯಾವ ಆಟಗಾರನು ಹೋಗದಿರುವುದರಿಂದ  ತಂಡಕ್ಕೆ ಹೆಚ್ಚಿನ ಬಲ ಬರಲಿದ್ದು, ಚೊಚ್ಚಲ ಐಪಿಎಲ್​ ಕಪ್​ ಗೆಲ್ಲಲು ಅದ್ಭುತ ಅವಕಾಶ ದೊರೆತಿದೆ.​ 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.