ETV Bharat / briefs

ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ವ್ಯಕ್ತಿಯಲ್ಲಿ ಪತ್ತೆಯಾಗಿದೆ ಕೋವಿಡ್-19 - ದಕ್ಷಿಣ ಕನ್ನಡ ಜಿಲ್ಲಾ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ ನಂತರ ಕೋವಿಡ್-19 ಸೋಂಕಿರುವುದು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.

One more corona cases found in bhatkal
One more corona cases found in bhatkal
author img

By

Published : Jun 16, 2020, 3:15 PM IST

ಭಟ್ಕಳ : ಮುಂಬೈನಿಂದ ಬಂದ ವ್ಯಕ್ತಿಯೋರ್ವನಲ್ಲಿ 7 ದಿನ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ ನಂತರ ಕೋವಿಡ್-19 ಸೋಂಕು ಇರುವುದು ಪತ್ತೆಯಾಗಿದೆ. ಮುರುಡೇಶ್ವರದ ತೆರ್ನಮಕ್ಕಿ ನಿವಾಸಿಯಾದ 43 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕಿರುವುದು ದೃಢವಾಗಿದೆ.

ಸೋಂಕಿತ ವ್ಯಕ್ತಿ ಜೂನ್ 5ರಂದು ಮುಂಬೈನಿಂದ ಮುರುಡೇಶ್ವರಕ್ಕೆ ಬಂದಿದ್ದು ನಂತರ 7 ದಿನ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಜೂನ್ 12ರಂದು ಮನೆಗೆ ತೆರಳಿದ್ದರು.

ಮೊದಲ ಬಾರಿ ಈತನ ಗಂಟಲು ದ್ರವ ಪರೀಕ್ಷೆ ನೆಗೆಟಿವ್ ಬಂದಿದ್ದು, 2ನೇ ಬಾರಿಯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಈತನೊಂದಿಗೆ ಪ್ರಯಾಣ ಮಾಡಿದ ಇನ್ನೋರ್ವ ವ್ಯಕ್ತಿಯ ವರದಿ ನೆಗೆಟಿವ್ ಬಂದಿದೆ.

ತಾಲೂಕಿನ ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು 6 ಪ್ರಕರಣ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.