ರಾಂಚಿ: ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, ಅವರ ದೇಹದಲ್ಲಿ ಸಕ್ಕರೆ ಪ್ರಮಾಣ ಹಾಗೂ ರಕ್ತದೊತ್ತಡ ಹೆಚ್ಚಳವಾಗಿದ್ದು ನಿಜ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರಿಗೆ ವೈದ್ಯರು ಒಂದು ಮಾವಿನ ಹಣ್ಣು ತಿನ್ನಲು ಅನುಮತಿ ನೀಡಿದ್ದಾರಂತೆ. ಆದರೆ ಲಾಲು ಎರಡು-ಮೂರು ಹಣ್ಣುಗಳನ್ನು ತಿನ್ನುತ್ತಿರುವುದರಿಂದ ಅವರ ದೇಹದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಸಕ್ಕರೆ ಪ್ರಮಾಣ ಹೆಚ್ಚಳವಾಗಿರುವ ಕಾರಣ, ಅವರಿಗೆ ಹೆಚ್ಚು ಮಾತ್ರೆ ನೀಡಲಾಗುತ್ತಿದ್ದು, ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದು, ಪ್ರತಿನಿತ್ಯ ವಿಶೇಷ ತಪಾಸಣೆ ನಡೆಸಲಾಗುತ್ತಿದೆ.
ಡಾ.ಡಿಕೆ ಝಾ ತಿಳಿಸಿರುವ ಪ್ರಕಾರ, ಅವರ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳು ಕಂಡುಬರುತ್ತಿದ್ದು, ಅದಕ್ಕಾಗಿ ಯಾವುದೇ ರೀತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.