ನವದೆಹಲಿ: ಕಿರ್ಗಿಸ್ತಾನದ ಬಿಶೆಕ್ನಲ್ಲಿ ಮುಂದಿನ ವಾರ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿ ಪಾಕ್ ಪಿಎಂ ಇಮ್ರಾನ್ ಖಾನ್ ಹಾಗೂ ಪ್ರಧಾನಿ ಮೋದಿ ನಡುವೆ ಯಾವುದೇ ಮಾತುಕತೆ ಆಯೋಜನೆಯಾಗಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
"ನನಗೆ ತಿಳಿದಿರುವ ಪ್ರಕಾರ ಭಾರತ ಹಾಗೂ ಪಾಕ್ ಪ್ರಧಾನಿಗಳ ನಡುವೆ ಯಾವುದೇ ಮಾತುಕತೆ ಬಿಶೆಕ್ನಲ್ಲಿ ಆಯೋಜನೆಯಾಗಿಲ್ಲ" ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನವೇ ಮೋದಿಯೇ ಎರಡನೇ ಬಾರಿಗೆ ಪ್ರಧಾನಿಯಾಗಲಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಮೋದಿ ಮತ್ತೆ ಅಧಿಕಾರಕ್ಕೇರಿದ ಬಳಿಕ ಇಮ್ರಾನ್ ಖಾನ್ ಶುಭಾಶಯ ಸಹ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.