ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ನಡೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಬರೆಯಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ.. ಈ ಸಂಬಂಧ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಬೆಳಗ್ಗೆ 6.30ಕ್ಕೆ ಬೆಂಗಳೂರು ತಲುಪಬೇಕಿದ್ದ ರೈಲು ಮಧ್ಯಾಹ್ನ 2.30ಕ್ಕೆ ತಲುಪಿತ್ತು. ರೈಲು ಸುಮಾರು 7 ಗಂಟೆಗಳಷ್ಟು ತಡವಾದ ಕಾರಣ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ರೈಲ್ವೆ ಇಲಾಖೆಯ ಬೇಜವಾಬ್ದಾರಿತನವೇ ಎಲ್ಲದಕ್ಕೂ ಕಾರಣ ಎನ್ನುವ ಭಾರಿ ಆಕ್ರೋಶ ಕೇಳಿಬಂದಿತ್ತು. ಜೊತೆಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎನ್ನುವ ಕೂಗು ಜೋರಾಗಿ ಕೇಳಿಬಂದಿತ್ತು.
-
Happy to announce that #Karnataka Students who missed #NEET exam , due to railway delay will get another chance.@MoHFW_INDIA @HRDMinistry @PIB_India @MIB_India @DG_NTA @cbseindia29 @ciet_ncert @DDNewsLive @airnewsalerts @DVSBJP@CMofKarnataka
— Chowkidar Prakash Javadekar (@PrakashJavdekar) May 6, 2019 " class="align-text-top noRightClick twitterSection" data="
">Happy to announce that #Karnataka Students who missed #NEET exam , due to railway delay will get another chance.@MoHFW_INDIA @HRDMinistry @PIB_India @MIB_India @DG_NTA @cbseindia29 @ciet_ncert @DDNewsLive @airnewsalerts @DVSBJP@CMofKarnataka
— Chowkidar Prakash Javadekar (@PrakashJavdekar) May 6, 2019Happy to announce that #Karnataka Students who missed #NEET exam , due to railway delay will get another chance.@MoHFW_INDIA @HRDMinistry @PIB_India @MIB_India @DG_NTA @cbseindia29 @ciet_ncert @DDNewsLive @airnewsalerts @DVSBJP@CMofKarnataka
— Chowkidar Prakash Javadekar (@PrakashJavdekar) May 6, 2019
ಸದ್ಯ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮರು ಪರೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ. ಪರೀಕ್ಷೆ ಬರೆಯಲು ಸಾಧ್ಯವಾಗದೇ ನಿರಾಸೆಯಾಗಿದ್ದ ಅಭ್ಯರ್ಥಿಗಳಿಗೆ ಖುಷಿಯ ವಿಚಾರ ಎನ್ನಬಹುದು.