ಕಾರ್ಡಿಫ್: 2019ರ ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲಿ ಟಾಸ್ಗೆದ್ದ ಕಿವೀಸ್ ನಾಯಕ ವಿಲಿಯಮ್ಸನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಕಳೆದ ಬಾರಿ ಉತ್ತಮ ಪ್ರದರ್ಶನ ತೋರಿ ಫೈನಲ್ಗೇರಿದ್ದ ಕಿವೀಸ್ ಪೈನಲ್ನಲ್ಲಿ ಆಸೀಸ್ ವಿರುದ್ಧ ಸೋಲುಕಂಡು ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿಯಾದರು ಚಾಂಪಿಯನ್ ಆಗಬೇಕೆಂಬ ಕನಸಿನೊಂದಿಗೆ ಇಂದು ಲಂಕಾ ವಿರುದ್ಧ ಕಾರ್ಡಿಫ್ನಲ್ಲಿ ಕಣಕ್ಕಿಳಿಯುತ್ತಿದೆ. ಗಪ್ಟಿಲ್, ಮನ್ರೊರಂತಹ ಸ್ಫೋಟಕ ಆಟಗಾರರ ಜೊತೆಗೆ ಟೇಲರ್, ವಿಲಿಯಮ್ಸನ್ ಹಾಗೂ ಲ್ಯಾಥಮ್ರಂತಹ ಸ್ಥಿರತೆಯುಳ್ಳ ಆಟಗಾರರ ಬಲ ಕಿವೀಸ್ಗಿದೆ. ಜೊತೆಗೆ ಬೌಲ್ಟ್,ಹೆನ್ರಿ ಹಾಗೂ ಬೌಲರ್ಗಳು, ನಿಶಾಮ್ ಸ್ಯಾಂಟ್ನರ್,ಹ್ರಯಾಂಡ್ಹೋಮ್ರಂತ್ ಬಲಿಷ್ಠ ಆಲ್ರೌಂಡರ್ಗಳಿರುವುದರಿಂದ ಈ ಪಂದ್ಯದಲ್ಲಿ ಕಿವೀಸ್ ಮೇಲುಗೈ ಸಾಧಿಸಲಿದೆ.
ಲಂಕಾ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿದೆ. ಆದರೂ ಟೆಸ್ಟ್ ತಂಡದ ಯಶಸ್ವಿನಾಯಕ, ಹಿರಿಯ ಆಟಗಾರರಾದ ಮಲಿಂಗಾ , ತಿರುಮನ್ನೆ, ಮ್ಯಾಥ್ಯೂಸ್, ಹಾಗೂ ಯುವ ಆಟಗಾರರಾದ ಕುಶಾಲ್ ಮೆಂಡಿಸ್, ಕುಶಾಲ್ ಪರೆರಾ ರಂತಹ ಆಟಗಾರರಿರುವುದರಿಂದ ಲಂಕಾ ಸುಲಭವಾಗಿ ಸೋಲೊಪ್ಪಲು ತಯಾರಿಲ್ಲ.
ಒಟ್ಟಾರೆ ಎರಡು ತಂಡಗಳು ತಮ್ಮ ಮೊದಲ ಗೆಲವಿಗಾಗಿ ಹಾತೊರೆಯುತ್ತಿದ್ದು, ವಿಜಯಲಕ್ಷ್ಮಿ ಯಾರಪಾಲಾಗಲಿದೆ ಎಂದು ಕಾದುನೋಡಬೇಕಿದೆ.
ಮುಖಾಮುಖಿ:
ವಿಶ್ವಕಪ್ನಲ್ಲಿ 10 ಪಂದ್ಯಗಳಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು ಲಂಕಾ 6ರಲ್ಲಿ ನ್ಯೂಜಿಲ್ಯಾಂಡ್ 4 ರಲ್ಲಿ ಜಯ ಸಾಧಿಸಿದೆ.
ತಂಡಗಳು ಇಂತಿವೆ
ನ್ಯೂಜಿಲೆಂಡ್:
ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಲೂಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಕಾಲಿನ್ ಮನ್ರೊ, ಜಿಮ್ಮಿ ನಿಶಾಮ್, ಮಿಚೆಲ್ ಸ್ಯಾಂಟ್ನರ್, ರಾಸ್ ಟೇಲರ್.
ಶ್ರೀಲಂಕಾ:
ದಿಮುತ ಕರುಣಾರತ್ನೆ (ನಾಯಕ), ಧನಂಜಯ್ ಡಿ ಸಿಲ್ವಾ, ಸುರಂಗ ಲಕ್ಮಲ್, ಲಸಿತ್ ಮಲಿಂಗ, ಏಂಜೆಲೊ ಮ್ಯಾಥ್ಯೂಸ್, ಕುಶಾಲ್ ಮೆಂಡಿಸ್, ಜೀವನ್ ಮೆಂಡಿಸ್, ಕುಶಾಲ್ ಪರೇರ, ತಿಸಾರ ಪೆರೆರ, ಲಾಹಿರು ತಿರುಮನ್ನೆ, ಇಸುರು ಉಡಾನ, ಜೆಫ್ರಿ ವಾಂಡರ್ಸೆ