ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಅರ್ಡೆನ್ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದು, ತಮ್ಮ ಬಹುಕಾಲದ ಗೆಳೆಯನನ್ನು ವರಿಸಲು ಮುಂದಾಗಿದ್ದಾರೆ.
ಈಗಾಗಲೇ ವರ್ಷದ ಮಗು ಹೊಂದಿರುವ ಪ್ರಧಾನಿ ಇದೀಗ ಈ ಮಾಹಿತಿ ಹೊರಹಾಕಿದ್ದು, ಇಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಮದುವೆಯಾಗಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಕ್ಲಾರ್ಕ್ ಗೇಪೋರ್ಡ್ ಟಿವಿ ರಿಪೋರ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
38 ವರ್ಷದ ಜಸಿಂದಾ ಕಳೆದ ವರ್ಷ ಜೂನ್ ತಿಂಗಳಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಈ ಹಿಂದೆ ತಮ್ಮ ಮಗುವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಕರೆತರುವ ಮೂಲಕ ವಿಶಿಷ್ಟ ದಾಖಲೆಯನ್ನೂ ಮಾಡಿದ್ದರು. ನ್ಯೂಯಾರ್ಕ್ನಲ್ಲಿ ನಡೆದ ಸಭೆಗೆ ಮಗುವಿನೊಂದಿಗೆ ಆಗಮಿಸಿದ ಅವರು ಈ ದಾಖಲೆ ಬರೆದಿದ್ದರು. ಜತೆಗೆ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮಗುವಿಗೆ ಜನ್ಮ ನೀಡಿದ ಜಗತ್ತಿನ ಕೆಲವೇ ಕೆಲವು ನಾಯಕರ ಸಾಲಿಗೆ ಜಸಿಂದಾ ಅರ್ಡೆನ್ ಸೇರಿದ್ದಾರೆ.