ETV Bharat / briefs

ಐಸಿಸ್​ ಬರಹದಲ್ಲಿ ಧೋನಿ, ಕೇಜ್ರಿವಾಲ್​ ಹೆಸರು.. ನವೀ ಮುಂಬೈನಲ್ಲಿ ಹೈ-ಅಲರ್ಟ್​ ಘೋಷಣೆ! - ಉಗ್ರ ಸಂಘಟನೆ

ರಾಯ್‌ಗಢ್ ಜಿಲ್ಲೆಯ ಉರನ್ ಪ್ರದೇಶದ ಖೋಪ್ಟೆ ಸೇತುವೆಯ ಪಿಲ್ಲರ್​​ನಲ್ಲಿ ಐಸಿಸ್ ವಿರುದ್ಧ ಭಾರತೀಯ ಸೇನೆ ಹೋರಾಡುವ ಚಿತ್ರ ಬಿಡಿಸಲಾಗಿದೆ. ಜೊತೆಗೆ ಉಗ್ರ ಹಫೀಜ್ ಸಯೀದ್​ ಹೆಸರೂ ಇಲ್ಲಿ ಉಲ್ಲೇಖವಾಗಿದ್ದು, ರಾಕೆಟ್ ಚಿತ್ರಗಳನ್ನೂ ಇಲ್ಲಿ ಚಿತ್ರಿಸಲಾಗಿದೆ.

ಹೈ ಅಲರ್ಟ್
author img

By

Published : Jun 4, 2019, 8:26 PM IST

ನವದೆಹಲಿ: ಐಸಿಸ್ ಉಗ್ರ ಸಂಘಟನೆಯದ್ದು ಎನ್ನಲಾದ ಬರಹಗಳು ನವೀ ಮುಂಬೈನ ಉರನ್ ಪ್ರದೇಶದಲ್ಲಿ ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ಹೈ-ಅಲರ್ಟ್​ ಘೋಷಿಸಲಾಗಿದೆ.

ರಾಯ್‌ಗಢ್‌ ಜಿಲ್ಲೆಯ ಉರನ್ ಪ್ರದೇಶದ ಖೋಪ್ಟೆ ಸೇತುವೆಯ ಪಿಲ್ಲರ್​​ನಲ್ಲಿ ಐಸಿಸ್ ವಿರುದ್ಧ ಭಾರತೀಯ ಸೇನೆ ಹೋರಾಡುವ ಚಿತ್ರ ಬಿಡಿಸಲಾಗಿದೆ. ಜೊತೆಗೆ ಉಗ್ರ ಹಫೀಜ್ ಸಯೀದ್​ ಹೆಸರೂ ಇಲ್ಲಿ ಉಲ್ಲೇಖವಾಗಿದ್ದು, ರಾಕೆಟ್ ಚಿತ್ರಗಳನ್ನೂ ಇಲ್ಲಿ ಚಿತ್ರಿಸಲಾಗಿದೆ.

high alert
ಐಸಿಸ್​ಗೆ ಸೇರಿದ್ದು ಎನ್ನಲಾದ ಬರಹ

"ಪಿಲ್ಲರ್​ನಲ್ಲಿ ಗೀಚಲಾಗಿರುವ ಬರಹದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಟೀಂ ಇಂಡಿಯಾ ಹಿರಿಯ ಆಟಗಾರ ಎಂ ಎಸ್ ಧೋನಿ ಹಾಗೂ ಐಸಿಸ್ ಮುಖ್ಯಸ್ಥ ಅಬುಬಕರ್ ಅಲ್​ ಬಗ್ದಾದಿ ಹೆಸರುಗಳಿವೆ" ಎಂದು ನವೀ ಮುಂಬೈನ ಪೊಲೀಸ್ ಕಮೀಷನರ್​​​​ ಸಂಜಯ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

high alert
ಐಸಿಸ್​ಗೆ ಸೇರಿದ್ದು ಎನ್ನಲಾದ ಬರಹ

"ಸ್ಥಳದಲ್ಲಿ ಪತ್ತೆಯಾದ ಬಿಯರ್​ ಬಾಟಲ್​​, ಗ್ಲಾಸ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯರ ಪ್ರಕಾರ ಈ ಜಾಗದಲ್ಲಿ ಒಂದಷ್ಟು ಯುವಕರು ಪ್ರತಿನಿತ್ಯ ಇಲ್ಲಿ ಮದ್ಯ ಸೇವಿಸುತ್ತಾರೆ" ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.​​

Intro:Body:

ಐಸಿಸ್​ ಬರಹದಲ್ಲಿ ಧೋನಿ, ಕೇಜ್ರಿವಾಲ್​ ಹೆಸರು... ನವೀ ಮುಂಬೈನಲ್ಲಿ ಹೈ ಅಲರ್ಟ್​ ಘೋಷಣೆ..!

ನವದೆಹಲಿ: ಐಸಿಸ್ ಉಗ್ರ ಸಂಘಟನೆಯದ್ದು ಎನ್ನಲಾದ ಬರಹಗಳು ನವೀ ಮುಂಬೈನ ಉರನ್ ಪ್ರದೇಶದಲ್ಲಿ ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

ರಾಯಘಡ ಜಿಲ್ಲೆಯ ಉರನ್ ಪ್ರದೇಶದ ಖೋಪ್ಟೆ ಸೇತುವೆಯ ಪಿಲ್ಲರ್​​ನಲ್ಲಿ ಐಸಿಸ್ ವಿರುದ್ಧ ಭಾರತೀಯ ಸೇನೆ ಹೋರಾಡುವ ಚಿತ್ರ ಬಿಡಿಸಲಾಗಿದೆ. ಜೊತೆಗೆ ಉಗ್ರ ಹಫೀಜ್ ಸಯೀದ್​ ಹೆಸರೂ ಇಲ್ಲಿ ಉಲ್ಲೇಖವಾಗಿದ್ದು, ರಾಕೆಟ್ ಚಿತ್ರಗಳನ್ನೂ ಇಲ್ಲಿ ಚಿತ್ರಿಸಲಾಗಿದೆ.

"ಪಿಲ್ಲರ್​ನಲ್ಲಿ ಗೀಚಲಾಗಿರುವ ಬರಹದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಟೀಮ್ ಇಂಡಿಯಾ ಹಿರಿಯ ಆಟಗಾರ ಎಂ.ಎಸ್.ಧೋನಿ ಹಾಗೂ ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್​ ಬಗ್ದಾದಿ ಹೆಸರುಗಳಿವೆ" ಎಂದು ನವೀ ಮುಂಬೈನ ಪೊಲೀಸ್ ಕಮೀಷನರ್​​​​ ಸಂಜಯ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

"ಸ್ಥಳದಲ್ಲಿ ಪತ್ತೆಯಾದ ಬಿಯರ್​ ಬಾಟಲ್​​, ಕಾಫಿ ಮಗ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯರ ಪ್ರಕಾರ ಈ ಜಾಗದಲ್ಲಿ ಒಂದಷ್ಟು ಯುವಕರು ಪ್ರತಿನಿತ್ಯ ಇಲ್ಲಿ ಮದ್ಯ ಸೇವಿಸುತ್ತಾರೆ" ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.​​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.