ನವದೆಹಲಿ: ಇದೇ ಗುರುವಾರದಂದು ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಲಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜಿನಿಕಾಂತ್ ಹಾಗೂ ನಟ ಕಮಲ್ ಹಾಸನ್ಗೆ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೊದಲ ಹಂತದಲ್ಲಿ ಆಹ್ವಾನ ಹೋಗಿದೆ. ಆದರೆ ಈ ಇಬ್ಬರೂ ನಟರು ಈ ಕುರಿತಂತೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಮೋದಿ ಮತ್ತೊಮ್ಮೆ: ಹೂಡಿಕೆದಾರರಿಗೆ ಹರ್ಷ ತಂದ ಮಹಾ ಫಲಿತಾಂಶ..!
ಮಕ್ಕಳ್ ನೀದಿ ಮೈಯ್ಯಮ್ ಪಕ್ಷವನ್ನು ಸ್ಥಾಪಿಸಿರುವ ಕಮಲ್ ಹಾಸನ್, ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷ ಸ್ಪರ್ಧೆ ನಡೆಸಿತ್ತು. ರಜಿನಿಕಾಂತ್ ಸಹ ಆಗಾಗ್ಗೆ ರಾಜಕೀಯ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಬಂದಿದ್ದಾರೆ.
ಸ್ವಿಸ್ ಬ್ಯಾಂಕ್ನಲ್ಲಿ ಹಣವಿಟ್ಟ 25 ಭಾರತೀಯರಿಗೆ ಸ್ವಿಜರ್ಲೆಂಡ್ ನೋಟಿಸ್!
ಮೇ 30ರಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಜೊತೆಯಲ್ಲಿ ಸಂಪುಟ ಸದಸ್ಯರೂ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮ ಗುರುವಾರ ಸಂಜೆ 7 ಗಂಟೆಗೆ ನಡೆಯಲಿದೆ.