ಚಾಮರಾಜನಗರ: ಮೈಸೂರು ವಿವಿಯು 101 ನೇ ಘಟಿಕೋತ್ಸವದ ಅಂಗವಾಗಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದ್ದು, ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಕ್ಕೆ 19 ಚಿನ್ನದ ಪದಕ ಒಲಿದಿವೆ.
ಮೈವಿವಿ ವ್ಯಾಪ್ತಿಗೆ ಒಳಪಡುವ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗ್ರಂಥಾಲಯ ಮತ್ತು ಮಾಹಿತಿ ವಿಭಾಗದಲ್ಲಿ ಕಾವ್ಯ ಮತ್ತು ಕವಿತಾ ಎಂಬ ವಿದ್ಯಾರ್ಥಿಗಳು 7 ಚಿನ್ನದ ಪದಕ ಪಡೆದಿದ್ದಾರೆ. ಇದರೊಟ್ಟಿಗೆ, ಕನ್ನಡ ವಿಭಾಗದಲ್ಲಿ ಟಿ.ಎಸ್.ಮಾದಲಾಂಬಿಕಾ ಎಂಬ ವಿದ್ಯಾರ್ಥಿನಿಗೆ 9, ಆರ್.ಸಂಜಯ್ ಮತ್ತು ಜಿ.ಶಿವು, ಅರ್ಥಶಾಸ್ತ್ರ ವಿಭಾಗದ ಯೋಗೇಶ್ವರಿ ಎಂಬವರಿಗೆ ತಲಾ 1 ಚಿನ್ನದ ಪದಕ ಸಿಕ್ಕಿದೆ.
ಪದಕ ವಿಜೇತರನ್ನು ಕೇಂದ್ರದ ನಿರ್ದೇಶಕ ಪ್ರೊ. ಶಿವಬಸವಯ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಮುಖ್ಯಸ್ಥೆ ಶ್ವೇತಾ, ಡಾ.ಮಹದೇವಮೂರ್ತಿ, ಸವಿತಾ ಅಭಿನಂದಿಸಿದ್ದಾರೆ.
ಮೈಸೂರು ವಿವಿ ಘಟಿಕೋತ್ಸವ; ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಕ್ಕೆ 19 ಚಿನ್ನದ ಪದಕ
ಮೈವಿವಿ ವ್ಯಾಪ್ತಿಗೆ ಒಳಪಡುವ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗ್ರಂಥಾಲಯ ಮತ್ತು ಮಾಹಿತಿ ವಿಭಾಗದಲ್ಲಿ ಕಾವ್ಯ ಮತ್ತು ಕವಿತಾ ಎಂಬ ವಿದ್ಯಾರ್ಥಿಗಳು 7 ಚಿನ್ನದ ಪದಕ ಪಡೆದಿದ್ದಾರೆ.

TAGGED:
Gold,