ಸೌತಾಂಪ್ಟನ್: ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿದ್ದು, ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಮಾಹಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ವಿಶ್ವಕಪ್ ಎನ್ನುವುದು ವಿಶೇಷ ಅನುಭವ. 2011ರಲ್ಲಿ ನಾನು ಯುವ ಆಟಗಾರನಾಗಿದ್ದೆ, ಅದೇ 2015ರ ವೇಳೆಗೆ ಒಂದಷ್ಟು ಅನುಭವ ಬಂದಿತ್ತು. ಇದೀಗ ತಂಡವನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯದೊಂದಿಗೆ ಹೃದಯ ಗೆಲ್ಲಿ, ಕೊಹ್ಲಿ ಟೀಂಗೆ ವಿಶ್ ಮಾಡಿದ ಪ್ರಧಾನಿ ಮೋದಿ
ನನ್ನ ಕ್ರಿಕೆಟ್ ಕರಿಯರ್ನಲ್ಲಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ನೀಡಿದ್ದೇ ಧೋನಿ. ಧೋನಿ ಮೇಲಿರುವ ನನ್ನ ಗೌರವವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಧೋನಿ ನಾಯಕತ್ವದಲ್ಲಿ ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಆರಂಭವಾಯಿತು. ಹೀಗಾಗಿ ನನ್ನ ಪಾಲಿಗೆ ಧೋನಿಯೇ ಸಾರ್ವಕಾಲಿಕ ನಾಯಕ. ಧೋನಿಯ ಸಲಹೆ, ಸೂಚನೆಗಳನ್ನು ನಾನು ಸಂಪೂರ್ಣವಾಗಿ ಪಾಲಿಸುತ್ತೇನೆ. ನಮ್ಮಿಬ್ಬರ ಮಧ್ಯೆ ಉತ್ತಮ ಬಾಂಧವ್ಯವಿದೆ. ತಂಡದಲ್ಲಿ ನಮ್ಮಿಬ್ಬರ ಅವಶ್ಯಕತೆಗಳನ್ನು ನಾವು ಅರಿತಿದ್ದೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.