ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ತಮಗೆ ಬರಬೇಕಿರುವ 40 ಕೋಟಿ ರೂ ಬ್ರಾಂಡ್ ಅಂಬಾಸಿಡರ್ ಹಣಕ್ಕಾಗಿ ಅಮ್ರಪಾಲಿ ಕಂಪನಿ ವಿರುದ್ಧ ಸುಪ್ರಿಂ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
2009ರಲ್ಲಿ ಅಮ್ರಪಾಲಿ ರಿಯಲ್ ಎಸ್ಟೇಟ್ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದರು, ಈ ವೇಳೆ ಕಂಪನಿಯ 5 ಬೆಡ್ರೂಮ್ಗಳ ಪೆಂಟ್ಹೌಸ್ ಕೂಡ ಬುಕ್ ಮಾಡಿದ್ದರು. ಆದರೆ ಅಮ್ರಪಾಲಿ ಸಂಸ್ಥೆ ಸದ್ಯ 46 ಸಾವಿರ ಗ್ರಾಹಕರಿಗೆ ವಂಚನೆ ಮಾಡಿದ ಆರೋಪ ಕೇಳಿ ಬಂದ ಹಿನ್ನಲೆ ಕಂಪನಿಯ ಜೊತೆಗಿದ್ದ ಒಪ್ಪಂದವನ್ನು ರದ್ದುಪಡಿಸಿಕೊಂಡಿದ್ದರು.
-
Cricketer MS Dhoni ends his contract with Amrapali Group, he will no longer be the brand ambassador of the real estate company
— ANI (@ANI) April 15, 2016 " class="align-text-top noRightClick twitterSection" data="
">Cricketer MS Dhoni ends his contract with Amrapali Group, he will no longer be the brand ambassador of the real estate company
— ANI (@ANI) April 15, 2016Cricketer MS Dhoni ends his contract with Amrapali Group, he will no longer be the brand ambassador of the real estate company
— ANI (@ANI) April 15, 2016
ಆದರೆ ಒಪ್ಪಂದ ರದ್ದುಪಡಿಸಿಕೊಂಡ ಧೋನಿ ಅಂದು ಕಂಪನಿ ಲಾಸ್ನಲ್ಲಿದ್ದ ಕಾರಣ ತಮಗೆ ಬರಬೇಕಿದ್ದ ಹಣಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ. ಇದೀಗ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಕ್ಕೆ ಕಂಪನಿಯಿಂದ ತಮಗೆ ಬರಬೇಕಿರುವ 40 ಕೋಟಿ ರೂಗಳಿಗಾಗಿ ಧೋನಿ ಅಮ್ರಪಾಲಿ ಕಂಪನಿ ವಿರುದ್ಧ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಘಟನೆ ಹಿನ್ನಲೆ:
ನೊಯ್ಡಾದಲ್ಲಿ ಆಮ್ರಪಾಲಿ ಗ್ರೂಪ್ ಸಫೈರ್ ಯೋಜನೆಯಡಿ ಅಪಾರ್ಟ್ಮೆಂಟ್ ನಿರ್ಮಿಸುವ ಕಾರ್ಯ ಕೈಗೆತ್ತಿಕೊಂಡಿತ್ತು. 46 ಸಾವಿರ ಫ್ಲಾಟ್ಗಳನ್ನು ಆಗಾಗಲೇ ಜನರು ಬುಕ್ ಸಹ ಮಾಡಿದ್ದರು. ಆದರೆ ಆ ಅಪಾರ್ಟ್ಮೆಂಟ್ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾದ್ದರಿಂದ ಫ್ಲಾಟ್ಗಳನ್ನು ಬುಕ್ ಮಾಡಿದ್ದ ಮಂದಿ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲವಾದರೆ ರಾಯಭಾರತ್ವವನ್ನು ತ್ಯಜಿಸಿ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿ ಧೋನಿಗೆ ಟ್ಯಾಗ್ ಸಹ ಮಾಡಿದ್ದರು.
-
Former Indian cricket captain MS Dhoni has approached the Supreme Court seeking a direction to the Amrapali Group to give him Rs 40 Crore due towards his service to the real estate company as brand ambassador. (file pic) pic.twitter.com/l7hjAfdvXK
— ANI (@ANI) March 27, 2019 " class="align-text-top noRightClick twitterSection" data="
">Former Indian cricket captain MS Dhoni has approached the Supreme Court seeking a direction to the Amrapali Group to give him Rs 40 Crore due towards his service to the real estate company as brand ambassador. (file pic) pic.twitter.com/l7hjAfdvXK
— ANI (@ANI) March 27, 2019Former Indian cricket captain MS Dhoni has approached the Supreme Court seeking a direction to the Amrapali Group to give him Rs 40 Crore due towards his service to the real estate company as brand ambassador. (file pic) pic.twitter.com/l7hjAfdvXK
— ANI (@ANI) March 27, 2019
ಇಷ್ಟೆಲ್ಲಾ ಸಮಸ್ಯೆ ಕಂಡುಬಂದ ಮೇಲೆ ಧೋನಿ ರಿಯಲ್ ಎಸ್ಟೇಟ್ ಕಂಪನಿಯೊಂದಿಗಿನ ಬ್ರಾಂಡ್ ಅಂಬಾಸಿಡರ್ ಒಪ್ಪಂದದಿಂದ ಹಾಗೂ ಅದೇ ಸಂಸ್ಥೇಯ ಚಾರಿಟೇಬಲ್ ಟ್ರಸ್ಟ್ನಲ್ಲಿ ನಿರ್ದೇಶಕರಾಗಿದ್ದ ಪತ್ನಿ ಸಾಕ್ಷಿ ಸಿಂಗ್ ಕೂಡ ರಾಜಿನಾಮೆ ನೀಡಿದ್ದರು. ಇದೀಗ ತಮಗೆ ಬರಬೇಕಿರುವ 40 ಕೋಟಿರೂ ಹಣಕ್ಕಾಗಿ ಧೋನಿ ಸುಪ್ರಿಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ತಿಂಗಳಷ್ಟೆ ಸುಪ್ರೀಂಕೋರ್ಟ್ ಕಂಪನಿಯ ಸಿಎಂಡಿ ಅನಿಲ್ ಶರ್ಮ ಹಾಗೂ ಇಬ್ಬರು ನಿರ್ದೇಶಕರನ್ನು ಕ್ರಿಮಿನಲ್ ದೂರಿನಡಿ ಬಂಧಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿತ್ತು. ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಸೂಚನೆ ನೀಡಿದೆ.