ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭಾ ಫಲಿತಾಂಶ ಗುರುವಾರ ಹೊರ ಬಿದ್ದಿದ್ದು, ಬಿಜೆಪಿ ಮತ್ತೊಮ್ಮೆ ಅಧಿಕಾರ ವಹಿಸಲು ಸಕಲ ಸನ್ನದ್ಧವಾಗಿದೆ. ಇದೇ ಖುಷಿಯಲ್ಲಿ ಮೋದಿ ಅಭಿಮಾನಿ ಒಬ್ಬರು ನಗರದಲ್ಲಿ ಜನರಿಗೆ ಉಚಿತ ಹಾಲು ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು.
ಸದಾಶಿವನಗರದ ಹಾಲಿನ ಡೈರಿ ಮಾಲೀಕ ಧನರಾಜ್ ದಾವಲೆ ಎಂಬುವವರು ನರೇಂದ್ರ ಮೋದಿ ಪ್ರಧಾನಿಯಾಗಿರುವ ಸಂತೋಷದಲ್ಲಿ ಸುಮಾರು 100 ಲೀಟರ್ ಹಾಲೂ ಹಾಗೂ 25 ಕೆಜಿ ಜಿಲೇಬಿ ಹಂಚುವ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
2014ರಲ್ಲಿಯೂ ಮೋದಿ ಪ್ರಧಾನಿಯಾದಾಗ ಇದೇ ರೀತಿ ಹಾಲು ಹಂಚಿದ್ದರಂತೆ.