ಗಂಗಾವತಿ : 1983ರಲ್ಲಿ ಕಂಪ್ಲಿಯಲ್ಲಿ ಪಿಎಸ್ಐ ಆಗಿದ್ದಾಗ ನಿತ್ಯವೂ ಟೆನ್ನಿಸ್ ಆಡಲು ಗಂಗಾವತಿಗೆ ಬರುತ್ತಿದ್ದೆ ಅಂತ ಬಿ ಸಿ ಪಾಟೀಲ್ ಹೇಳಿಕೊಂಡ್ರೇ, ನನ್ನ ಬಾಲ್ಯದ ದಿನಗಳ ಬಹುತೇಕ ಸಮಯ ಇಲ್ಲಿನ ದುರುಗಮ್ಮನ ಹಳ್ಳದ ಮೇಲೆ ಕಳೆದಿರುವೆ ಅಂತಾ ಆನಂದ್ ಸಿಂಗ್ ಹೇಳಿದರು. ಹೀಗೆ ಗಂಗಾವತಿಯೊಂದಿಗಿನ ಬಾಂಧವ್ಯವನ್ನ ರಾಜ್ಯ ಸಚಿವ ಸಂಪುಟದ ಇಬ್ಬರು ಪ್ರಭಾವಿ ಸಚಿವರು ಮೆಲುಕು ಹಾಕಿದ್ದಾರೆ.
ಗಂಗಾವತಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷಿ ಸಚಿವ ಬಿ ಸಿ ಪಾಟೀಲ್ ಹಾಗೂ ಅರಣ್ಯ ಸಚಿವ ಆನಂದ್ ಸಿಂಗ್ ತಮ್ಮ ಹಿಂದಿನ ದಿನಗಳ ನೆನಪನ್ನು ಹಾಗೂ ಗಂಗಾವತಿಯೊಂದಿಗಿನ ಬಾಂಧವ್ಯವನ್ನು ಸ್ಮರಿಸಿಕೊಂಡರು.
1983ರಲ್ಲಿ ಕಂಪ್ಲಿ ಪಿಎಸ್ಐ ಆಗಿದ್ದಾಗ ನಿತ್ಯ ಗಂಗಾವತಿಗೆ ಬರುತ್ತಿದ್ದೆ. ಇಲ್ಲಿ ಗಸ್ತಿಗೂ ಓಡಾಡಿದ್ದೀನಿ. ಹೀಗಾಗಿ ಗಂಗಾವತಿಗೂ ನನಗೂ ನಾಲ್ಕು ದಶಕದ ನಂಟಿದೆ ಎಂದು ಬಿ ಸಿ ಪಾಟೀಲ್ ಹೇಳಿದರು.
ಉಪ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶೇ.40ರಷ್ಟು ಗಂಗಾವತಿ ಕಾರ್ಯಕರ್ತರು, ಮುಖಂಡರ ಶ್ರಮವಿದೆ. ಅಲ್ಲದೇ ಎಸ್ವಿಕೆ ಸಾರಿಗೆ ಸಂಸ್ಥೆ ನಡೆಸುವಾಗ ತಾಲೂಕಿನ ಬಹುತೇಕ ಗ್ರಾಮಕ್ಕೆ ಓಡಾಡಿದ್ದೇನೆ. ಹೊಸಪೇಟೆಗೂ ಗಂಗಾವತಿಗೂ ಬಿಡಿಸಲಾಗದ ನಂಟು ಎಂದು ಆನಂದ್ ಸಿಂಗ್ ಹಳೆಯ ನೆನಪಿಗೆ ಜಾರಿದರು.