ಕೋಲ್ಕತ್ತಾ: ಐಪಿಎಲ್ ಮೊದಲ ವಾರದಲ್ಲಿ ಅಬ್ಬರಿಸಿ ಸವಾಲಿನ ಪಂದ್ಯಗಳನ್ನೂ ಬ್ಯಾಟಿಂಗ್ ಬಲದಿಂದ ಗೆದ್ದು ಬೀಗಿದ ಕೆಕೆಆರ್ ಸತತ 6 ಸೋಲುಂಡು ಮಂಕಾಗಿದ್ದು, ಇಂದು ತವರಿನಲ್ಲೇ ಬಲಿಷ್ಠ ಮುಂಬೈ ವಿರುದ್ದ ಸೆಣಸಲಿದೆ.
ಪ್ಲೇ ಆಫ್ ದೃಷ್ಠಿಯಿಂದ ಈ ಪಂದ್ಯ ಕೆಕೆಆರ್‌ಗೆ ಮಹತ್ವದ್ದಾಗಿದೆ. ಆದರೆ ಎದುರಾಳಿ ಮುಂಬೈಗೆ ಈ ಪಂದ್ಯವೂ ಸೇರಿದಂತೆ ಇನ್ನೂ 3 ಪಂದ್ಯಗಳಿದ್ದು, ಯಾವುದಾದರೊಂದು ಮ್ಯಾಚ್ ಗೆದ್ದರೆ ಸಾಕು ಪ್ಲೆ ಆಫ್ ಖಚಿತಪಡಿಸಿಕೊಳ್ಳಲಿದೆ.
ಕಳೆದ ಪಂದ್ಯದಲ್ಲಿ ಧೋನಿಯಿಲ್ಲದ ಸಿಎಸ್ಕೆಯನ್ನು ಮಣಿಸಿರುವ ಮುಂಬೈ, ಇಂದು ಕೂಡ ಗೆಲ್ಲುವ ಫೇವರಿಟ್ ತಂಡವಾಗಿದೆ. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ರೋಹಿತ್ ಫಾರ್ಮ್ ಕಂಡುಕೊಂಡಿರುವುದು ಮುಂಬೈಗೆ ಆನೆ ಬಲ ಬಂದಂತಾಗಿದೆ.
ಇನ್ನುಡಿಕಾಕ್, ಪಾಂಡ್ಯ ಬ್ರದರ್ಸ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಬೌಲರ್ಗಳಲ್ಲಿ ಮಲಿಂಗಾ,ಬೂಮ್ರಾ,ರಾಹುಲ್, ಚಹಾರ್ ಕೂಡ ಉತ್ತಮ ಲಯದಲ್ಲಿದ್ದಾರೆ.
ಇನ್ನೊಂದೆೆೆಡೆ ಕೋಲ್ಕತ್ತಾದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಸ್ಥಿರವಾಗಿಲ್ಲ. ಕಳೆದ 3 ಪಂದ್ಯಗಳಿಂದ ಉತ್ತಪ್ಪರನ್ನು ತಂಡದಿಂದ ಕೈಬಿಟ್ಟಿರುವುದು ಕೂಡ ದೊಡ್ಡ ಹೊಡೆತ ನೀಡಿದೆ. ಇನ್ನು ಆರಂಭಿಕ ಆಟಗಾರರು ಉತ್ತಮ ಆರಂಭ ಒದಗಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಇದನ್ನು ಹೊರತುಪಡಿಸಿದರೆ ರಾಣಾ ಮತ್ತು ರಸೆಲ್ ಮಾತ್ರ ಅಮೋಘ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಆದರೆ ರಸೆಲ್ಗೆ ಕೆಳ ಕ್ರಮಾಂಕ ನೀಡಿರುವುದು ಕೂಡ ತಂಡದ ಸೋಲಿಗೆ ಕಾರಣವಾಗಿದೆ. ಇದರ ಜೊತೆಗೆ ಡೆತ್ ಬೌಲಿಂಗ್ ತೀರ ಕಳೆಪೆಯಾಗಿದೆ. ಇದುವರೆಗೆ ಸ್ಪಿನ್ನರ್ಗಳನ್ನು ಹೊರತುಪಡಿಸಿದರೆ ವೇಗದ ವಿಭಾಗ ಮಾತ್ರ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ.
ಮುಖಾಮುಖಿ:
ಎರಡು ತಂಡಗಳು 23 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ 18 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಕೆಕೆಆರ್ ಕೇವಲ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಕೋಲ್ಕತ್ತಾದಲ್ಲಿ ನಡೆದಿರುವ 9 ಪಂದ್ಯಗಳಲ್ಲಿ ಮುಂಬೈ 7 ಕೋಲ್ಕತ್ತಾ 2 ರಲ್ಲಿ ಜಯಸಾಧಿಸಿದೆ.
ಕೆಕೆಆರ್ ಕೊನೆಯ ಬಾರಿ ಮುಂಬೈ ತಂಡವನ್ನು ಮಣಿಸಿದ್ದು 2015ರಲ್ಲಿ. 2015ರಿಂದ ಆಡಿರುವ 8 ಪಂದ್ಯಗಳಲ್ಲಿ ಕೆಕೆಆರ್ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆೆ.
ಸಂಭಾವ್ಯ ತಂಡ
ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಕೀರನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಮಲಿಂಗಾ, ರಾಹುಲ್ ಚಹಾರ್, ಬೂಮ್ರಾ, ಇವಿನ್ ಲೆವಿಸ್, ಮಯಾಂಕ್ ಮಾರ್ಕಂಡೆ
ಕೋಲ್ಕತ್ತಾ ನೈಟ್ ರೈಡರ್ಸ್:
ದಿನೇಶ್ ಕಾರ್ತಿಕ್(ನಾಯಕ) ಆ್ಯಂಡ್ರ್ಯೂ ರಸೆಲ್, ಸುನೀಲ್ ನರೈನ್, ಕ್ರಿಸ್ ಲಿನ್, ರಾಬಿನ್ ಉತ್ತಪ್ಪ/ರಿಂಕು ಸಿಂಗ್ , ಶುಬ್ಮನ್ ಗಿಲ್, ನಿತಿಶ್ ರಾಣಾ, ಪ್ರಸಿದ್ಧ ಕೃಷ್ಣ, ಲೂಕಿ ಫರ್ಗ್ಯುಸನ್, ಪಿಯುಷ್ ಚಾವ್ಲಾ, ಕುಲ್ದೀಪ್ ಯಾದವ್/ಅನುಕುಲ್ ರಾಯ್