ಬಂಟ್ವಾಳ: ಮೇಲ್ಕಾರ್ ಬಳಿಯ ಗುಡ್ಡೆ ಅಂಗಡಿಯಲ್ಲಿ ಯುವಕನನ್ನು ಮಾರಕಾಯುಧದಿಂದ ಇರಿದು ಕೊಲೆ ಮಾಡಿದ ಆರೋಪಿಯೊಬ್ಬನಿಗೆ ಬಂಟ್ವಾಳ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಈ ಘಟನೆ ಶನಿವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮತ್ತು ಗುಂಡ್ಯ ಮಧ್ಯೆ ನಡೆದಿದೆ.
ಶುಕ್ರವಾರ ಸಂಜೆ ಮೇಲ್ಕಾರಿನಲ್ಲಿ ಉಮರ್ ಫಾರೂಕ್ ಎಂಬಾತನ ಭೀಕರ ಹತ್ಯೆಯಾಗಿತ್ತು. ಈ ಸಂಬಂಧ ನಂದಾವರ ನಿವಾಸಿ ಖಲೀಲ್ ಎಂಬಾವನನ್ನು ಬಂಧಿಸಲು ಖಚಿತ ಮಾಹಿತಿ ಮೇರೆಗೆ ಪೊಲೀಸರು ತೆರಳಿದ್ದರು. ನೆಲ್ಯಾಡಿ, ಗುಂಡ್ಯ ಮಧ್ಯೆ ಆರೋಪಿಗಳು ಕಂಡು ಬಂದಿದ್ದು, ಅವರನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಲಾಗಿದೆ.
ಈ ವೇಳೆ ಗುಂಡು ಹಾರಿಸಿದ ಸಂದರ್ಭ ಆರೋಪಿಗೆ ಗಾಯಗಳಾಗಿವೆ. ಇದೇ ವೇಳೆ ಎಸ್ಐ ಪ್ರಸನ್ನ ಅವರು ಗಾಯಗೊಂಡಿದ್ದಾರೆ.