ETV Bharat / briefs

8-10 ಮಂದಿ ಸೇರಿ ನಿರ್ದಯವಾಗಿ ನನ್ನ ಮೇಲೆ ಹಲ್ಲೆ ನಡೆಸಿದರು: ಚೋಕ್ಸಿ ದೂರು - ಬಾರ್ಬರಾ ಜಬರಿಕಾ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹ 13,500 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಭಾರತಕ್ಕೆ ಹಸ್ತಾಂತರಗೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಈ ಮಧ್ಯೆ ಡೊಮಿನಿಕಾದ ಹೈಕೋರ್ಟ್‌ನಲ್ಲಿ ಭಾರತಕ್ಕೆ ಗಡೀಪಾರು ಮಾಡುವುದರ ವಿರುದ್ಧ ಕಾನೂನು ಹೋರಾಟ ನಡೆಯುತ್ತಿದೆ.

ಮೆಹುಲ್​ ಚೋಕ್ಸಿ
ಮೆಹುಲ್​ ಚೋಕ್ಸಿ
author img

By

Published : Jun 7, 2021, 9:27 PM IST

ಆ್ಯಂಟಿಗುವಾ: ಡೊಮಿನಿಕಾದ ಹೈಕೋರ್ಟ್‌ನಲ್ಲಿ ಭಾರತಕ್ಕೆ ಗಡೀಪಾರು ಮಾಡುವುದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಉದ್ಯಮಿ ಮೆಹುಲ್ ಚೋಕ್ಸಿ, ಆ್ಯಂಟಿಗುವಾ ಪೊಲೀಸರ ವೇಷದಲ್ಲಿದ್ದ 8-10 ಮಂದಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದೆ ಎಂದು ಹೇಳಿದ್ದಾರೆ.

ದೂರಿನಲ್ಲಿ ಏನಿದೆ: ಕಳೆದ ವರ್ಷದಲ್ಲಿ ನಾನು ಬಾರ್ಬರಾ ಜಬರಿಕಾ ಅವರೊಂದಿಗೆ ಸ್ನೇಹಪರ ಸಂಬಂಧ ಹೊಂದಿದ್ದೇನೆ. ಅವಳು ಮೂಲತಃ ಜಾಲಿ ಹಾರ್ಬರ್‌ನಲ್ಲಿರುವ ನನ್ನ ವಸತಿ ಸಂಕೀರ್ಣದ ಎದುರು ವಾಸಿಸುತ್ತಿದ್ದಳು. ಆದರೆ, ನಂತರ ಕೊಕೊ ಬೇ ಹೋಟೆಲ್‌ಗೆ ಸ್ಥಳಾಂತರಗೊಂಡಳು. ನಾವು ನಿಯಮಿತವಾಗಿ ಭೇಟಿಯಾಗುತ್ತಿದ್ದೆವು. ಮರೀನಾ ಪಕ್ಕದ ರಸ್ತೆಯಲ್ಲಿರುವ ಅವಳ ಮನೆಯಲ್ಲಿ ಆಗಾಗ ಭೇಟಿಯಾಗುತ್ತಿದ್ದೆವು. ಅಂತೆಯೇ ಆ ದಿನ ಅವಳ ಕೋರಿಕೆಯ ಮೇರೆಗೆ, ನಾನು 5 ರಿಂದ 5: 15ರ ಸುಮಾರಿಗೆ ಅವಳ ಮನೆಗೆ ತಲುಪಿದೆ. ಅಲ್ಲಿ ಮಾತನಾಡಿ ನಾವಿಬ್ಬರು ಹೊರಬಂದೆವು. ಆ ಸಮಯದಲ್ಲಿ ಸುಮಾರು 8ರಿಂದ 10 ಮಂದಿ ಪುರುಷರು ನಮ್ಮ ಮೇಲೆ ದಾಳಿ ನಡೆಸಿದರು. ಅವರ ದಾಳಿಯಿಂದ ನಾನು ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ನನ್ನ ಫೋನ್, ರೋಲೆಕ್ಸ್ ವಾಚ್ ಮತ್ತು ವ್ಯಾಲೆಟ್ ಅನ್ನು ಸಹ ತೆಗೆದುಕೊಂಡರು. ಬಳಿಕ ನನ್ನನ್ನು ಗಾಲಿಕುರ್ಚಿಯ ಮೇಲೆ ಕೂರಿಸಿ, ಕೈ, ಕಾಲುಗಳನ್ನು ಕುರ್ಚಿಗೆ ಕಟ್ಟಿದರು. ನನ್ನ ತಲೆಯ ಮೇಲೆ ಮುಖವಾಡವನ್ನು ಹಾಕಿದರು. ಆದ್ದರಿಂದ ನನ್ನ ದೃಷ್ಟಿ ಕೂಡ ಅಸ್ಪಷ್ಟವಾಯಿತು. ಇನ್ನು ಸಣ್ಣ ವಾಟರ್‌ಕ್ರಾಫ್ಟ್‌ನಿಂದ ನನ್ನನ್ನು ದೊಡ್ಡ ದೋಣಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ನನ್ನ ಮುಖವಾಡವನ್ನು ತೆಗೆದರು. ಆಗ ಸೇಂಟ್ ಜಾನ್ಸ್ ಪೊಲೀಸ್ ಠಾಣೆಗೆ ಹೋಗುವ ದಾರಿಯಲ್ಲ ಎಂದು ತಿಳಿಯಿತು. ಏಕೆಂದರೆ ಅಲ್ಲಿಗೆ ಹೋಗಲು ದೋಣಿಯನ್ನು ಬಳಸಿಕೊಳ್ಳುವ ಅಗತ್ಯವಿಲ್ಲ. ನನ್ನನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ನಾನು ಕೇಳಿದ ನಂತರ, ಅವರು ಬಹಳ ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡಿದರು. ಮೌನವಾಗಿರಲು ನನಗೆ ಬೆದರಿಕೆ ಹಾಕಿದರು. ಇನ್ನು ಆ ಹಡಗಿನಲ್ಲಿ ಇಬ್ಬರು ಭಾರತೀಯರು ಮತ್ತು ಕೆರಿಬಿಯನ್ ಮೂಲದ ಮೂವರು ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಸದ್ಯ ಆ್ಯಂಟಿಗುವಾನ್ ಪೊಲೀಸರು ಆತನ ಅಪಹರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಚೋಕ್ಸಿ ಮೇ 23 ರಂದು ಆಂಟಿಗುವಾದಿಂದ ಊಟಕ್ಕೆ ಹೊರಟ ನಂತರ ನಾಪತ್ತೆಯಾಗಿದ್ದರು. ಬಳಿಕ ಡೊಮಿನಿಕಾದಲ್ಲಿ ಸೆರೆಯಾಗಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿದೆ. ಆ್ಯಂಟಿಗುವಾ ಮತ್ತು ಬಾರ್ಬುಡಾದಿಂದ ತಪ್ಪಿಸಿಕೊಂಡ ಆರೋಪದ ಮೇಲೆ ಡೊಮಿನಿಕಾದಲ್ಲಿ ಪೊಲೀಸರು ಅಕ್ರಮ ಪ್ರವೇಶದ ಆರೋಪ ಹೊರಿಸಿದ್ದರು. ಗಡಿಪಾರು ಮಾಡುವಿಕೆಯಿಂದ ಚೋಕ್ಸಿ ರಕ್ಷಿಸುವ ಸಲುವಾಗಿ, ನಾಲ್ಕು ವಕೀಲರ ತಂಡವನ್ನು ಲಂಡನ್‌ನಿಂದ ನೇಮಿಸಲಾಯಿತು.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹ 13,500 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಭಾರತಕ್ಕೆ ಹಸ್ತಾಂತರಗೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಚೋಕ್ಸಿ ಈಗಾಗಲೇ ಆ್ಯಂಟಿಗುವಾದಲ್ಲಿ ಪೌರತ್ವವನ್ನು ಪಡೆದಿದ್ದು, ವಂಚನೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಭಾರತ ಬಿಟ್ಟು ತೆರಳಿದ್ದರು. ಅಲ್ಲದೆ, ಆ್ಯಂಟಿಗುವಾದ ಗಡೀಪಾರು ವಿರೋಧಿ ಕಾನೂನುಗಳ ಅಡಿಯಲ್ಲಿ ಆಶ್ರಯ ಪಡೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.