ನವದೆಹಲಿ: ಮಧ್ಯಮ ವರ್ಗದ ಡಾರ್ಲಿಂಗ್ ಎಂದೇ ಕರೆಯಿಸಿಕೊಳ್ಳುವ ಮಾರುತಿ ಆಲ್ಟೋ ಇನ್ಮೇಲೆ ಕಹಿ ಆಗಲಿದೆ. ಕಾರಣ ಏನೆಂದರೆ ನಿನ್ನೆಯಿಂದ ಮಾರುತಿ ಸುಜೂಕಿ ಈ ಕಾರಿನ ಬೆಲೆಯನ್ನ ಸುಮಾರು 23 ಸಾವಿರ ರೂ. ಹೆಚ್ಚಳ ಮಾಡಿದೆ.
ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಈ ಕಾರಿನ ಎಕ್ಸ್ ಶೋರೂಮ್ನ ಬೆಲೆ 3.65 ಲಕ್ಷದಿಂದ 4.44 ಲಕ್ಷದವರೆಗೂ ನಿಗದಿ ಮಾಡಲಾಗಿತ್ತು. ಅದೀಗ 3.75 ಲಕ್ಷ ರೂ. ನಿಂದ 4.54 ಲಕ್ಷ ರೂವರೆಗೂ ಹೆಚ್ಚಳವಾಗಿದೆ ಎಂದು ಕಂಪನಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾರುತಿ ಸುಜೂಕಿ ಕಂಪನಿ ತನ್ನ ಆಲ್ಟೋ ಕೆ10 ಕಾರಿನ ಬೆಲೆಯಲ್ಲಿ ಭಾರಿ ಹೆಚ್ಚಳ ಮಾಡಿದೆ. ಇದು ಮಧ್ಯಮ ವರ್ಗದ ಗ್ರಾಹಕನಿಗೆ ತುಸು ಹೊರೆ ಎನಿಸಿದೆ. ಇದು ಏನೇ ಇದ್ದರೂ ಕಾರಿನಲ್ಲಿ ಹೊಸ ಸುರಕ್ಷತಾ ಕ್ರಮಗಳನ್ನು ಅಳವಡಿಕೆ ಮಾಡಿರುವುದರಿಂದ 23 ಸಾವಿರ ರೂ ಹೆಚ್ಚಳ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಬೆಲೆ ಹೆಚ್ಚಳಕ್ಕೆ ಕಾರಣವೇನು?
ಹೈ ಎಂಡ್ ಕಾರುಗಳಲ್ಲಿ ಇರುವಂತೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್( ಎಬಿಎಸ್) ಹಾಗೂ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್) ವ್ಯವಸ್ಥೆ ಜೊತೆಗೆ ಡ್ರೈವರ್ ಏರ್ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಅಲರ್ಟ್ ಸಿಸ್ಟಮ್ ಹಾಗೂ ಡ್ರೈವರ್, ಕೋ ಡ್ರೈವರ್ ಸೀಟ್ ಬೆಲ್ಟ್ ರಿಮೆಂಡರ್ಗಳನ್ನ ಹೊಸ ಆಲ್ಟೋ ಕೆ 10 ಮಾಡೆಲ್ನಲ್ಲಿ ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಕಾರಿನ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.