ETV Bharat / briefs

ವಿದ್ಯಾ ಬಾಲನ್​ ಅಭಿನಯದ 'ಶೇರ್ನಿ' ಟೀಸರ್​ ಬಿಡುಗಡೆ

author img

By

Published : May 31, 2021, 10:34 PM IST

Updated : May 31, 2021, 10:39 PM IST

ನಟಿ ವಿದ್ಯಾ ಬಾಲನ್ ಅಭಿನಯದ ‘ಶೇರ್ನಿ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. 20 ಸೆಕೆಂಡುಗಳ ಟೀಸರ್‌ನಲ್ಲಿ ವಿದ್ಯಾ ತನ್ನ ತಂಡದೊಂದಿಗೆ ದಟ್ಟವಾದ ಕಾಡಿನಲ್ಲಿ ಅಡ್ಡಾಡುತ್ತಿರುವುದು ಕಂಡುಬರುತ್ತದೆ. ಈ ಚಿತ್ರದಲ್ಲಿ ಅರಣ್ಯ ಅಧಿಕಾರಿಯ ಪಾತ್ರದಲ್ಲಿ ವಿದ್ಯಾ ಬಾಲನ್​ ಅಭಿನಯಿಸಿದ್ದಾರೆ.

sherni movie
sherni movie

ನವದೆಹಲಿ: ಬಾಲಿವುಡ್​ ನಟಿ ವಿದ್ಯಾ ಬಾಲನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಶೇರ್ನಿ’ಯ ಟೀಸರ್ ಬಿಡುಗಡೆಯಾಗಿದೆ. 'ಹುಲಿ ಯಾವಾಗಲೂ ದಾರಿ ತಿಳಿದಿದೆ!' ಎಂಬ ಶೀರ್ಷಿಕೆ ನೀಡಿ ಟೀಸರ್​ ಬಿಡುಗಡೆ ಮಾಡಿದ್ದು, ಬಾಲನ್​ ಅಭಿಮಾನಿಗಳಿಗೆ ಸಂತೋಷ ಹಂಚಿದ್ದಾರೆ.

20 ಸೆಕೆಂಡುಗಳ ಟೀಸರ್‌ನಲ್ಲಿ ವಿದ್ಯಾ ತನ್ನ ತಂಡದೊಂದಿಗೆ ದಟ್ಟವಾದ ಕಾಡಿನಲ್ಲಿ ಅಡ್ಡಾಡುತ್ತಿರುವುದು ಕಂಡುಬರುತ್ತದೆ. ಈ ಚಿತ್ರದಲ್ಲಿ ಅರಣ್ಯ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸುಮಾರು ಒಂದು ವರ್ಷದ ನಂತರ ಬಾಲನ್​ ಅಭಿನಯವನ್ನು ನೋಡುತ್ತಿರುವ ಅಭಿಮಾನಿಗಳಿಗೆ ಈ ಟೀಸರ್ ಅಚ್ಚರಿ ಮೂಡಿಸಿದೆ. 'ನ್ಯೂಟನ್' ಖ್ಯಾತಿಯ ಅಮಿತ್ ಮಸೂರ್ಕರ್ ನಿರ್ದೇಶನದ ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

ವಿದ್ಯಾ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರ ಒಂದು ಕಾಲ್ಪನಿಕ ಕಥೆಯಾಗಿದ್ದು, ಮನುಷ್ಯ - ಪ್ರಾಣಿ ಸಂಘರ್ಷದ ಜಗತ್ತಿನಲ್ಲಿ ಸಮತೋಲನಕ್ಕಾಗಿ ಶ್ರಮಿಸುವ ಅರಣ್ಯ ಅಧಿಕಾರಿಯ ಪ್ರಯಾಣವನ್ನು ತಿಳಿಸುತ್ತದೆ. ಜೂನ್ 2 ರಂದು ಬಿಡುಗಡೆಯಾಗಲಿರುವ ಟ್ರೇಲರ್ ಬಗ್ಗೆ ಕುತೂಹಲ ಮೂಡಿದೆ.

ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ವಿಕ್ರಮ್ ಮಲ್ಹೋತ್ರಾ ಮತ್ತು ಅಮಿತ್ ಮಸುಕರ್ ನಿರ್ಮಿಸಿರುವ ಈ ಚಿತ್ರದಲ್ಲಿ ಶರತ್ ಸಕ್ಸೇನಾ, ಮುಕುಲ್ ಚಡ್ಡಾ, ವಿಜಯ್ ರಾಜ್, ಇಲಾ ಅರುಣ್, ಬ್ರಿಜೇಂದ್ರ ಕಲಾ ಮತ್ತು ನೀರಜ್ ಕಬಿ ಅಭಿನಯಿಸಿದ್ದಾರೆ.

Last Updated : May 31, 2021, 10:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.