ಲುಧಿಯಾನ(ಪಂಜಾಬ್): ಕೊರೊನಾ ಜನರಲ್ಲಿ ಎಂತಹ ಭಯವನ್ನು ಹುಟ್ಟುಹಾಕಿದೆ ಅಂದ್ರೆ ಜನರು ತಮ್ಮ ಪ್ರೀತಿಪಾತ್ರರ ಶವಸಂಸ್ಕಾರ ಮಾಡಲು ಸಹ ಹಿಂಜರಿಯುತ್ತಿದ್ದಾರೆ. ಕೋವಿಡ್ ಮೃತದೇಹಗಳು ವಿಶ್ರಾಂತಿಗಾಗಿ ಕಾಯುತ್ತಿವೆ ಎಂಬುದು ಇತ್ತೀಚೆಗೆ ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವ ಶೀರ್ಷಿಕೆಯಾಗಿದೆ.
ಅನೇಕ ಜನರು ಕೊರೊನಾದೊಂದಿಗೆ ಯುದ್ಧ ಸೋತಿರುವುದರಿಂದ, ಸ್ಮಶಾನಗಳಲ್ಲಿ ಭಾರಿ ಜಾಗದ ಬಿಕ್ಕಟ್ಟಿನ ಸಮಸ್ಯೆ ಎದುರಾಗಿದೆ. ಅವರ ಕುಟುಂಬ ಸದಸ್ಯರು ಗೌರವಯುತವಾಗಿ ವಿದಾಯ ಹೇಳುವುದು ಸಹ ಸವಾಲಾಗಿ ಪರಿಣಮಿಸುತ್ತಿದೆ.
ಇಂತಹ ಹತಾಶೆ, ದುಃಖದ ಸ್ಥಿತಿಯ ಮಧ್ಯೆ ಕೆಲವು ಸಹೃದಯರು, ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ಕುಟುಂಬಗಳಿಗೆ ಸಹಾಯ ಮಾಡಲು ತಮ್ಮ ಕೈಲಾದಷ್ಟು ಮುಂದಾಗಿದ್ದಾರೆ.
ಲುಧಿಯಾನದಲ್ಲಿ ಸಂಸ್ಕಾರ್ ತಂಡದ ಟ್ರಾಫಿಕ್ ಮಾರ್ಷಲ್ಸ್ (ಪಂಜಾಬ್ ಪೊಲೀಸ್ ಸ್ವಯಂಸೇವಕರು) ಎಂದು ಕರೆಯಲ್ಪಡುವ ಕೋವಿಡ್ ಯೋಧರಿದ್ದಾರೆ. ಅವರು ಭಾರತದಲ್ಲಿ ಸಾಂಕ್ರಾಮಿಕ ರೋಗ ಹರಡಿದಾಗಿನಿಂದ ಸುಮಾರು 1000 ಕ್ಕೂ ಹೆಚ್ಚು ಕೋವಿಡ್ ರೋಗಿಗಳ ಶವ ಸಂಸ್ಕಾರಗಳನ್ನು ಮಾಡಿದೆ.
ತಂಡದ ಮುಖ್ಯಸ್ಥ ಮಂದೀಪ್ ಕೇಶವ್ ಗುಡ್ಡು ಅವರು ಈಟಿವಿ ಭಾರತ್‌ಗೆ ಮಾಹಿತಿ ನೀಡಿ, ಇಲ್ಲಿಯವರೆಗೆ ತಂಡವು ಸುಮಾರು 1,000 ಕ್ಕೂ ಹೆಚ್ಚು ಶವಸಂಸ್ಕಾರಗಳನ್ನು ಮಾಡಿದೆ.
ಅವರಲ್ಲಿ ಕೆಲ ಕುಟುಂಬಗಳು ಅವರಿಗೆ ಅಂತಿಮ ವಿಧಿಗಳನ್ನು ಮಾಡಲು ನಿರಾಕರಿಸಿದರು. ಕಳೆದ ಮೂರು ತಿಂಗಳುಗಳಲ್ಲಿ, ನಾವು ಸುಮಾರು 600 ಶವಸಂಸ್ಕಾರಗಳನ್ನು ಮಾಡಿದ್ದೇವೆ. ಕೆಲ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕೊರೊನಾಗೆ ಕಳೆದು ಕೊಂಡಿರುವುದನ್ನು ನೋಡುವುದು ವಿನಾಶಕಾರಿಯಾಗಿದೆ. ಹಾಗಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ನಾನು ಜನರನ್ನು ವಿನಂತಿಸುತ್ತೇನೆ ಎಂದರು.
ಇನ್ನು ತಮ್ಮ ಶವಸಂಸ್ಕಾರ ತಂಡವು ಜಿಲ್ಲಾಡಳಿತದಿಂದ ಯಾವುದೇ ಸಹಾಯವನ್ನು ಪಡೆಯುತ್ತಿಲ್ಲ. ಮೇಯರ್ ನಮಗೆ ಸಹಾಯ ಮಾಡಿ, ಪೆಟ್ರೋಲ್ ಮತ್ತು ಡೀಸೆಲ್ಗಾಗಿ ಹಣವನ್ನು ಒದಗಿಸಿದರು. ಕೆಲ ಕುಟುಂಬಗಳು ಶವಸಂಸ್ಕಾರ ಮಾಡಲು ನಿರಾಕರಿಸಿದಾಗಿನಿಂದ ನಾವು ಮೊದಲ ದಿನದಿಂದ ಕೆಲಸ ಮಾಡುತ್ತಿದ್ದೇವೆ. ಶವ ಸಂಸ್ಕಾರ ಮಾಡುವಾಗ ನಾವು ಎಲ್ಲಾ ಆಚರಣೆಗಳನ್ನು ಅನುಸರಿಸುತ್ತೇವೆ, ಎಂದು ಅವರು ಹೇಳಿದರು.
ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಮಾರಕವಾಗಿದೆ. ಮೊದಲ ಅಲೆಗೆ ಹೋಲಿಸಿದರೆ ನಾವು ಈ ಬಾರಿ ಹೆಚ್ಚಿನ ಶವಸಂಸ್ಕಾರಗಳನ್ನು ಮಾಡಿದ್ದೇವೆ. ಅದರಲ್ಲಿ ಹಿರಿಯ ಅಧಿಕಾರಿಗಳು, ವಕೀಲರು, ಪೊಲೀಸ್ ಸಿಬ್ಬಂದಿ, ಪತ್ರಕರ್ತರು ಮತ್ತು ವೈದ್ಯರ ಕುಟುಂಬ ಸದಸ್ಯರನ್ನು ನಾವು ಅಂತ್ಯಸಂಸ್ಕಾರ ಮಾಡಿದ್ದೇವೆ, ಎಂದು ಹೇಳುತ್ತಾರೆ ಮಂದೀಪ್.