ಅಲಹಾಬಾದ್: ಒಂದು ಮನೆಯಲ್ಲಿ ಹೆಚ್ಚೆಂದರೆ ನಾಲ್ಕೋ, ಐದೋ ಮಂದಿ ಮತದಾರರಿವುದು ಸಾಮಾನ್ಯ. ಆದರೆ ಇಲ್ಲೊಂದು ಮನೆಯಲ್ಲಿ ಬರೋಬ್ಬರಿ 66 ಮಂದಿ ಮತದಾರರಿದ್ದಾರೆ. ಕುತೂಹಲಕಾರಿ ಮಾಹಿತಿ ಇಲ್ಲಿದೆ..
ಉತ್ತರ ಪ್ರದೇಶದ ಅಲಹಾಬಾದ್ನ ಬಹ್ರೈಚಾ ಗ್ರಾಮದ ಒಂದೇ ಮನೆಯಲ್ಲಿ 66 ಮಂದಿ ಮತದಾರರಿದ್ದಾರೆ. 98 ವರ್ಷದ ರಾಮ್ ನರೇಶ್ ಭುರ್ತಿಯಾ ಈ ಮನೆಯ ಯಜಮಾನ. ಕೃಷಿಯಲ್ಲೇ ಜೀವನ ಸಾಗಿಸುತ್ತಿರುವ ಈ ಕುಟುಂಬದಲ್ಲಿ ಇಬ್ಬರು ಮುಂಬೈನಲ್ಲಿ ಉದ್ಯೋಗದಲ್ಲಿದ್ದಾರೆ.
82 ಮಂದಿ ಇರುವ ರಾಮ್ ನರೇಶ್ ಕುಟುಂಬದಲ್ಲಿ 66 ಮಂದಿ ಮತದಾನದ ಹಕ್ಕನ್ನು ಹೊಂದಿದ್ದಾರೆ. ವಿಶೇಷವೆಂದರೆ ಇಷ್ಟೊಂದು ಮಂದಿ ಮತದಾರರಿದ್ದರೂ ಪ್ರತ್ಯೇಕ ವಾಹನದಲ್ಲಿ ಮತಗಟ್ಟೆಗೆ ತೆರಳುವುದಿಲ್ಲ. ಹಿರಿಯರು ಬೈಕಿನಲ್ಲಿ ಹೋದರೆ ಉಳಿದವರು ಕಾಲ್ನಡಿಗೆಯಲ್ಲೇ ಮತದಾನ ಕೇಂದ್ರಕ್ಕೆ ಹೋಗುತ್ತಾರೆ ಎಂದು ರಾಮ್ ನರೇಶ್ ಹೇಳುತ್ತಾರೆ.
ಈ ಸಂಪೂರ್ಣ ಕುಟುಂಬಕ್ಕೆ ಇರುವುದು ಒಂದೇ ಕಿಚನ್. 15 ಕೆ.ಜಿ ಅನ್ನ, 10 ಕೆ.ಜಿ ಗೋಧಿ ಹಾಗೂ 20 ಕೆ.ಜಿ ತರಕಾರಿಯನ್ನು ಪ್ರತಿನಿತ್ಯ ಮನೆಯಲ್ಲಿ ಬೇಯಿಸಲಾಗುತ್ತದೆ.