ನವದೆಹಲಿ: ಲೋಕಸಭಾ ಚುನಾವಣೆಯ 6ನೇ ಹಂತದ ವೋಟಿಂಗ್ ಇಂದು ನಡೆಯಲಿದ್ದು, 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 10 ಕೋಟಿ ಮತದಾರರು ಒಟ್ಟು 979 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧರಿಸಲಿದ್ದಾರೆ.
ಬಿಹಾರ,ಜಾರ್ಖಂಡ್,ಮಧ್ಯಪ್ರದೇಶ,ಉತ್ತರಪ್ರದೇಶ,ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ದೆಹಲಿಯಲ್ಲಿ ಮತದಾನ ನಡೆಯಲಿದೆ. ಪ್ರಮುಖವಾಗಿ ಕಣದಲ್ಲಿ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್,ಕೇಂದ್ರ ಸಚಿವೆ ಮನೇಕಾ ಗಾಂಧಿ, ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, ದೆಹಲಿ ಮಾಜಿ ಸಿಎಂ ಶೀಲಾ ದಿಕ್ಷಿತ್, ಸಾಧ್ವಿ ಪ್ರಗ್ಯಾ ಠಾಕೂರ್, ಮನೋಜ್ ತಿವಾರಿ,ಹರ್ಷವರ್ಧನ್,ಗೌತಮ್ ಗಂಭೀರ್ ಹಾಗೂ ಬಾಕ್ಸರ್ ವಿಜೇಂದರ್ ಸಿಂಗ್ ಸೇರಿದಂತೆ ಪ್ರಮುಖ ನಾಯಕನ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಪ್ರಮುಖವಾಗಿ ಉತ್ತರಪ್ರದೇಶದ 14 ಕ್ಷೇತ್ರ,ಹರಿಯಾಣದ 10ಕ್ಷೇತ್ರ, ಪಶ್ಚಿಮ ಬಂಗಾಳದ 8, ಬಿಹಾರ ಹಾಗೂ ಮಧ್ಯಪ್ರದೇಶದ 8ಕ್ಷೇತ್ರ, ದೆಹಲಿಯ ಎಲ್ಲ 7ಕ್ಷೇತ್ರ ಹಾಗೂ ಜಾರ್ಖಂಡ್ನ 4ಕ್ಷೇತ್ರಗಳಲ್ಲಿ ಮತದಾನವಾಗಲಿದೆ.
ವಿಶೇಷವೆಂದರೆ 2014ರ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲ 7ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲು ಮಾಡಿತ್ತು. ಇದೀಗ ಮತ್ತೊಮ್ಮೆ ಕೇಸರಿ ಪಡೆ ಈ ದಾಖಲೆ ನಿರ್ಮಾಣ ಮಾಡಲು ಮುಂದಾಗಿದ್ದು, ಆಪ್ ಹಾಗೂ ಕಾಂಗ್ರೆಸ್ ತೀವ್ರ ಫೈಟ್ ನೀಡಲಿದೆ.