ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ನಿನ್ನೆ ದಿನ 27 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡ ದೆಹಲಿ ಸರ್ಕಾರ ಈಗ ಲಾಕ್‌ಡೌನ್ ಅನ್ನು ಇನ್ನೂ ಒಂದು ವಾರ ವಿಸ್ತರಣೆ ಮಾಡಿ ನಾಳೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ.
ಸಿಎಂ ಅರವಿಂದ್ ಕೇಜ್ರಿವಾಲ್ ಅದನ್ನು ನಾಳೆ ಮಧ್ಯಾಹ್ನ ಪತ್ರಿಕಾಗೋಷ್ಠಿ ಮೂಲಕ ಪ್ರಕಟಿಸಲಿದ್ದಾರೆ. ಏಪ್ರಿಲ್ 19 ರಿಂದ ದೆಹಲಿಯನ್ನು ಲಾಕ್‌ಡೌನ್ ಮಾಡಲಾಗಿತ್ತು. ಏಪ್ರಿಲ್ 19 ರಿಂದ ಹೆಚ್ಚುತ್ತಿರುವ ಕರೋನಾ ಸರಪಳಿಯನ್ನು ಮುರಿಯುವ ಸಲುವಾಗಿ, ರಾತ್ರಿ 10 ಗಂಟೆಗೆ ಕರ್ಫ್ಯೂ ವಿಧಿಸಲಾಗಿತ್ತು. ಆ ಬಳಿಕ ಲಾಕ್‌ಡೌನ್ ಅನ್ನು ಮೇ 3 ರಂದು ಬೆಳಗ್ಗೆ 5 ಗಂಟೆಗೆವರೆಗೆ ವಿಸ್ತರಿಸಲಾಯಿತು.
ಲಾಕ್‌ಡೌನ್ ಇಂದು ಬೆಳಗ್ಗೆ 5 ಗಂಟೆಗೆ ಮುಕ್ತಾಯಗೊಂಡಿತ್ತು. ಆದರೂ ದೆಹಲಿಯಲ್ಲಿ ಕೊರೊನಾ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ 27,047 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 375 ರೋಗಿಗಳು ಸಾವನ್ನಪ್ಪಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಈಗ ಲಾಕ್‌ಡೌನ್ ಅನ್ನು ಮತ್ತೆ ಒಂದು ವಾರಕ್ಕೆ ವಿಸ್ತರಣೆ ಮಾಡಲಿದೆ.