ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕಿನ 14 ಗ್ರಾಮ ಪಂಚಾಯತ್‌ಗೆ ಸ್ವಚ್ಛ ಭಾರತ ಯೋಜನೆಯಡಿ ಘನತ್ಯಾಜ್ಯ ಸಾಗಣೆ ವಾಹನಗಳನ್ನು ಶಾಸಕ ಡಿ ಎಸ್ ಹೂಲಗೇರಿ ಹಸ್ತಾಂತರಿಸಿದರು.
ಶಾಸಕ ಹೂಲಗೇರಿ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಮಾಡಲು ಸ್ಥಳಾವಕಾಶ ಇರುವ ಗ್ರಾಮ ಪಂಚಾಯತ್‌ಗೆ ಮೊದಲ ಹಂತದಲ್ಲಿ ವಾಹನಗಳು ಬಂದಿವೆ. ಮನೆ ಮನೆಗೆ ಕಸ ಸಂಗ್ರಹಣ ಬಕೆಟ್ ಕೂಡ ನೀಡಲಾಗುತ್ತಿದ್ದು, ಜನತೆ ಸಹಕಾರ ನೀಡಲು ಮುಂದೆ ಬರಬೇಕು ಎಂದರು.
ಪ್ರತಿ ಗ್ರಾಮ್ ಪಂಚಾಯತ್ ಮಟ್ಟದಲ್ಲಿ 1 ಎಕರೆ ಪ್ರದೇಶದಲ್ಲಿ ಶೆಡ್ ನಿರ್ಮಿಸಿ, ಹಸಿ ಮತ್ತು ಒಣ ಕಸ ಬೇರ್ಪಡಿಸಿ ಸಾವಯವ ಗೊಬ್ಬರ ತಯಾರಿಕೆಗೆ ಆದ್ಯತೆ ನೀಡಲಾಗುತ್ತಿದೆ. ಕಾರಣ ಗ್ರಾಮೀಣ ಪ್ರದೇಶದ ಜನತೆ ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಎಂದು ಮನವಿ ಮಾಡಿದರು.