ETV Bharat / briefs

ಬಿಬಿಎಂಪಿ ಆಯುಕ್ತರನ್ನು ಹೊಗಳಿದ ವಿರೋಧ ಪಕ್ಷದ ನಾಯಕ... ಕೈ ಸದಸ್ಯರು ಗರಂ - manjunath prasadh

ನಗರದ ಬಿ ಖಾತೆಗಳನ್ನು ಎ ಖಾತೆಯಾಗಿ ಪರಿವರ್ತಿಸುವ ಕುರಿತು ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ನಡುವೆ ಮಾತಿನ ಚಕಮಕಿ ನಡಿಯಿತು.

ಬೆಂಗಳೂರಿನಲ್ಲಿ ನಡೆದ ಬಜೆಟ್ ಮೇಲಿನ ಖಾತಾ ವಿಚಾರದ ಚರ್ಚೆ
author img

By

Published : Feb 24, 2019, 9:54 AM IST

ಬೆಂಗಳೂರು: ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ನಗರದ ಬಿ ಖಾತೆಗಳನ್ನು ಎ ಖಾತೆಯಾಗಿ ಪರಿವರ್ತಿಸುವ ಬಗ್ಗೆ ಘೋಷಿಸಿದ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಕೊಂಡಾಡಿ, ದುಃಖದ ಮನೆಯಲ್ಲಿ ಆಯುಕ್ತರು ಬೆಂಗಳೂರಿಗರಿಗೆ‌ ಬಜೆಟ್​ನಲ್ಲಿ ಖಾತಾವೊಂದೇ ನೀಡಿದ್ದು,‌ ಆಡಳಿತ ಪಕ್ಷ ನೀಡಿದ್ದು ಏನೂ ಇಲ್ಲ ಎಂದು ವ್ಯಂಗ್ಯವಾಡಿದರು.

ಇದರಿಂದ ಕೆರಳಿದ ಕಾಂಗ್ರೆಸ್‍ನ ಮಾಜಿ ಮೇಯರ್ ಮಂಜುನಾಥ ರೆಡ್ಡಿ, ಮೇಯರ್ ಇರುವಾಗ ಆಯುಕ್ತರನ್ನು ಸುಪ್ರೀಂ ಮಾಡುವುದು ಸರಿಯಲ್ಲ. ಎಲ್ಲರ ಪ್ರಯತ್ನದಿಂದಾಗಿ ಈ ತೀರ್ಮಾನವಾಗಿದೆ. ಪದ್ಮನಾಭ ರೆಡ್ಡಿ ಮಾತುಗಳನ್ನು ಕಡತದಿಂದ ತೆಗೆದು ಹಾಕುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮೇಯರ್ ಗಂಗಾಂಬಿಕೆ ಕಡತದಿಂದ ಪದ್ಮನಾಭ ರೆಡ್ಡಿ ಆಡಿರುವ ಮಾತುಗಳನ್ನು ತೆಗೆದು ಹಾಕಲು ಸೂಚಿಸಿದರು. ಇದರಿಂದ ಕೆರಳಿದ ಪದ್ಮನಾಭ ರೆಡ್ಡಿ, ನನಗೆ ನೀತಿ ನಿಯಮಗಳು ಗೊತ್ತಿವೆ. ಯಾವುದೇ ಅಸಂವಿಧಾನಿಕ ಪದಗಳನ್ನು ನಾನು ಆಡಿಲ್ಲ. ಹೀಗಾಗಿ ಅದನ್ನು ತೆಗೆದು ಹಾಕದಂತೆ ಒತ್ತಾಯಿಸಿದರು. ಕೆಲಕಾಲ ಸಭಾಂಗಣದ ಒಳಗೆ ಮಾತಿನ ಚಕಮಕಿಯೂ ನಡೆಯಿತು.

Intro:ಸ್ಕ್ರಿಪ್ಟ್ ಎಫ್ ಟಿ  ಪಿ ಮೂಲಕ ಕಳುಹಿಲಾಗಿದೆ

Body:ಸ್ಕ್ರಿಪ್ಟ್ ಎಫ್ ಟಿ  ಪಿ ಮೂಲಕ ಕಳುಹಿಲಾಗಿದೆ

Conclusion:ಸ್ಕ್ರಿಪ್ಟ್ ಎಫ್ ಟಿ  ಪಿ ಮೂಲಕ ಕಳುಹಿಲಾಗಿದೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.