ETV Bharat / briefs

ಖಾಕಿ ಕಣ್ಣಿಗೆ ಮಣ್ಣೆರಚಿ ಮನೆಗಳ್ಳತನ ಮಾಡುತ್ತಿದ್ದ ಖದೀಮ ಅಂದರ್

ಪೊಲೀಸರಿಗೆ ಸುಳಿವು ಸಿಗದಿರಲಿ ಎಂದು ಒಬ್ಬಂಟಿಯಾಗಿ ಮನೆಗಳ್ಳತನ ಮಾಡುತ್ತಿದ್ದ‌ ಖತರ್ ನಾಕ್ ಆರೋಪಿಯನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಕೋರಮಂಗಲ ಪೋಲೀಸರು ಯಶಸ್ವಿಯಾಗಿದ್ದಾರೆ.

Koramangala home thief arrested
Koramangala home thief arrested
author img

By

Published : Jun 5, 2020, 7:45 PM IST

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಪೊಲೀಸರಿಗೆ ಸುಳಿವು ಸಿಗದಿರಲಿ ಎಂದು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಒಬ್ಬಂಟಿಯಾಗಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನನ್ನು ಕೋರಮಂಗಲ‌‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜ ಅಲಿಯಾಸ್ ಪುಳಂಗ ಮಂಜ ಬಂಧಿತ ಆರೋಪಿಯಾಗಿದ್ದು ಈತನಿಂದ 25 ಲಕ್ಷ ಹಣ ಮೌಲ್ಯದ ಚಿನ್ನಾಭರಣ, ಐದು ಬೈಕ್, 1 ಕಾರು ವಶಪಡಿಸಿಕೊಳ್ಳಲಾಗಿದೆ‌.

ಮಂಡ್ಯ‌ ಮೂಲದ ಆರೋಪಿ ಹಲವು ವರ್ಷಗಳಿಂದ ಮಹಾನಗರದಲ್ಲಿ ವಾಸ ಮಾಡಿಕೊಂಡಿದ್ದ. ಜೀವನ‌ಕ್ಕಾಗಿ ಕಳ್ಳತನ ವೃತ್ತಿ ಆಯ್ಕೆ ಮಾಡಿಕೊಂಡಿದ್ದ. ಬೀಗ ಹಾಕಿದ ಮನೆಗಳ ಕಳ್ಳತನಕ್ಕೆ ಮುಂದಾಗುತ್ತಿದ್ದ ಈತ‌ ಪೊಲೀಸರಿಗೆ ತಮ್ಮ‌ ಬಗ್ಗೆ ಸುಳಿವು ಸಿಗದಿರಲಿ ಎಂಬ ಕಾರಣಕ್ಕಾಗಿ ಒಬ್ಬನೇ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದ.

ಅಲ್ಲದೆ ಕದ್ದ ಮಾಲುಗಳನ್ನು ಗಿರವಿ ಅಂಗಡಿಗಳಲ್ಲಿ ಅಡವಿಡಲು ಹಣದಾಸೆ ತೋರಿಸಿ ಹೊಸ ಹೊಸ ಗೆಳೆಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ಹೀಗೆ ಅಕ್ರಮವಾಗಿ ಹಣ ಸಂಪಾದನೆ ಮಾಡಿ ಹುಟ್ಟಿದೂರಿನಲ್ಲಿ ತಾನು ಶ್ರೀಮಂತ ಎಂದು ಬಿಂಬಿಸಿಕೊಂಡಿದ್ದ.

ಅಪರಾಧ‌ ಕೃತ್ಯ ಬಳಿಕ ವಕೀಲರಿಗೆ ಒಂದಷ್ಟು ಹಣ ಎತ್ತಿಟ್ಟು, ಉಳಿದ ಹಣದಲ್ಲಿ ಯುವತಿಯರ ಜೊತೆ ಮೋಜು, ಮಸ್ತಿ ಮಾಡುತ್ತಿದ್ದ. ಈತನ ವಿರುದ್ಧ 20ಕ್ಕೂ ಅಧಿಕ ಪ್ರಕರಣದಲ್ಲಿ ವಾರಂಟ್ ಜಾರಿಯಲ್ಲಿದ್ದರೂ ತಲೆಮರೆಸಿಕೊಂಡು ಕಳ್ಳತನ ಮಾಡುತ್ತಿದ್ದ. ಸದ್ಯ ಆರೋಪಿಯನ್ನು ಕೋರಮಂಗಲ‌ ಪೊಲೀಸರು ಜೈಲಿಗಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.