ಪಂಜಾಬ್: ವಿರಾಟ್ ಕೊಹ್ಲಿ ಸದ್ಯ ಟೀಂ ಇಂಡಿಯಾದ ಸ್ಟಾರ್ ಆಟಗಾರ. ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುವ ಈ ಪ್ಲೇಯರ್ಗೆ ಸರಿಸಮವಾದ ಇನ್ನೊಬ್ಬ ಆಟಗಾರನಿಲ್ಲ ಎಂಬ ಮಾತು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇವೆ. ಆದರೆ, ಇದೀಗ ಇವರಿಗೆ ಸರಿಸಮವಾಗಿ ನಿಲ್ಲುವ ಆಟಗಾರನೋರ್ವ ಟೀಂ ಇಂಡಿಯಾದಲ್ಲಿದ್ದಾನೆ ಎಂಬ ಮಾತನ್ನ ವೆಸ್ಟ್ ಇಂಡೀಸ್ನ ದೈತ್ಯ ಆಟಗಾರ ಕ್ರಿಸ್ ಗೇಲ್ ಹೊರಹಾಕಿದ್ದಾರೆ.
ಖಾಸಗಿ ಚಾನಲ್ವೊಂದರಲ್ಲಿ ಮಾತನಾಡಿರುವ ಗೇಲ್, ವಿರಾಟ್ ಕೊಹ್ಲಿ ನಂತರ ಕೆಎಲ್ ರಾಹುಲ್ ಭಾರತ ಕ್ರಿಕೆಟ್ನ ಭವಿಷ್ಯವಾಗಿದ್ದು, ಆ ಜವಾಬ್ದಾರಿ ಹೊತ್ತುಕೊಳ್ಳುವ ಕ್ಷಮತೆ ಕೆಎಲ್ ಬಳಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಐಪಿಎಲ್ನಲ್ಲಿ ಪಂಜಾಬ್ ತಂಡದ ಪರ ಕೆಎಲ್ ಬ್ಯಾಟ್ ಬೀಸುತ್ತಿದ್ದು, ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಇದೀಗ ಅವರು ಟೀಂ ಇಂಡಿಯಾದ ಭವಿಷ್ಯದ ತಾರೆ ಆಗಿದ್ದು, ಅವರ ಬಳಿ ವಿರಾಟ್ ಕೊಹ್ಲಿ ಬಳಿ ಇರುವ ಎಲ್ಲ ಗುಣಲಕ್ಷಣಗಳಿವೆ. ಯಾವುದೇ ಸಮಯದಲ್ಲೂ ಅವರು ಶಾಂತರೀತಿಯಾಗಿ ಬ್ಯಾಟ್ ಬೀಸುವ ಕಲೆ ಕರಗತ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.