ಕಾರ್ಡಿಫ್: ಬಾಂಗ್ಲಾದೇಶದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸುವ ಮೂಲಕ ಕಳೆದೆರಡು ವರ್ಷಗಳಿಂದ ಭಾರತ ತಂಡವನ್ನು ಕಾಡುತ್ತಿರುವ 4ನೇ ಕ್ರಮಾಂಕದ ಸಮಸ್ಯೆಗೆ ಕೆ.ಎಲ್ ರಾಹುಲ್ ಪರಿಹಾರ ನೀಡಿದ್ದಾರೆ.
50ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್ಗೆ ಆಗಮಿಸಿದ ರಾಹುಲ್ ಕೊಹ್ಲಿ ಜೊತೆ ಸೇರಿ 33 ರನ್ಗಳ ಜೊತೆಯಾಟ ನೀಡಿದರು. ಕೊಹ್ಲಿ ಔಟಾದ ನಂತರ ಬಂದ ವಿಜಯ್ ಶಂಕರ್ 2 ರನ್ಗಳಿಸಿ ಔಟಾದರು.
-
What a knock from KL Rahul!
— Cricket World Cup (@cricketworldcup) May 28, 2019 " class="align-text-top noRightClick twitterSection" data="
His century arrives from just 94 balls – he's put on 153 with MS Dhoni!#BANvIND | #CWC19
FOLLOW ➡️ https://t.co/9ZQUD2ugr3 pic.twitter.com/Xi7ZDaPkjE
">What a knock from KL Rahul!
— Cricket World Cup (@cricketworldcup) May 28, 2019
His century arrives from just 94 balls – he's put on 153 with MS Dhoni!#BANvIND | #CWC19
FOLLOW ➡️ https://t.co/9ZQUD2ugr3 pic.twitter.com/Xi7ZDaPkjEWhat a knock from KL Rahul!
— Cricket World Cup (@cricketworldcup) May 28, 2019
His century arrives from just 94 balls – he's put on 153 with MS Dhoni!#BANvIND | #CWC19
FOLLOW ➡️ https://t.co/9ZQUD2ugr3 pic.twitter.com/Xi7ZDaPkjE
ಈ ಹಂತದಲ್ಲಿ ಧೋನಿ ಜೊತೆಗೂಡಿದ ರಾಹುಲ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. 99 ಎಸೆತಗಳನ್ನು ಎದುರಿಸಿದ ರಾಹುಲ್ 4 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ 108 ರನ್ಗಳಿಸಿದರು. ಧೋನಿ ಜೊತೆಗೂಡಿ 5 ನೇ ವಿಕೆಟ್ಗೆ 164 ರನ್ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಿ 44 ನೇ ಓವರ್ನಲ್ಲಿ ಅರೆಕಾಲಿಕ ಬೌಲರ್ ಸಬ್ಬಿರ್ ರಹಮಾನ್ಗೆ ವಿಕೆಟ್ ಒಪ್ಪಿಸಿದರು.
ರಾಹುಲ್ಗೆ ಸಾಥ್ ನೀಡಿದ ಧೋನಿ ಕ್ರೀಸ್ನಲ್ಲಿದ್ದು ಅರ್ಧಶತಕ ಪೂರ್ಣಗೊಳಿಸಿದ್ದು ಶತಕದತ್ತ ದಾಪುಗಾಲಿಟ್ಟಿದ್ದಾರೆ.