ಹೈದರಾಬಾದ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 1ರನ್ಗಳ ರೋಚಕ ಗೆಲುವು ದಾಖಲು ಮಾಡುವುದರ ಮೂಲಕ 4ನೇ ಸಲ ಟ್ರೋಫಿಗೆ ಮುತ್ತಿಕ್ಕಿದೆ. ಇದರ ಮಧ್ಯೆ ಮುಂಬೈ ತಂಡದ ಆಲ್ರೌಂಡರ್ ಕಿರನ್ ಪೋಲಾರ್ಡ್ ತೋರಿದ್ದ ಅನುಚಿತ ವರ್ತನೆಗೆ ಪಂದ್ಯದ ಶೇ.25ರಷ್ಟು ದಂಡ ವಿಧಿಸಲಾಗಿದೆ.
- — adarsh kumar (@adarshk06684881) May 12, 2019 " class="align-text-top noRightClick twitterSection" data="
— adarsh kumar (@adarshk06684881) May 12, 2019
">— adarsh kumar (@adarshk06684881) May 12, 2019
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಮುಂಬೈ ಇಂಡಿಯನ್ಸ್ ತಂಡದ ಪರ ಕೊನೆ ಓವರ್ ಎದುರಿಸುತ್ತಿದ್ದ ಪೋಲಾರ್ಡ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾವೋ ಬೌಲ್ ಮಾಡಿದ್ದರು. ಈ ವೇಳೆ ಎರಡನೇ ಹಾಗೂ ಮೂರನೇ ಎಸೆತ ವೈಡ್ ಆಗಿದ್ದರೂ ಅಂಪೈರ್ ನೀಡಿರಲಿಲ್ಲ. ಹೀಗಾಗಿ ಅಸಮಾಧಾನಗೊಂಡ ಪೋಲಾರ್ಡ್ ಬ್ಯಾಟ್ ಮೇಲಕ್ಕೆಸೆದು ಸಿಟ್ಟು ಹೊರಹಾಕಿರುವ ಜತೆಗೆ ಮೈದಾನಬಿಟ್ಟು ವೈಡ್ ಗೆರೆ ದಾಟಿ ಬ್ಯಾಟಿಂಗ್ ಮಾಡಲು ಮುಂದಾಗಿದ್ದರು.
ಈ ವೇಳೆ ಅಂಪೈರ್ಗಳು ಪೋಲಾರ್ಡ್ ಬಳಿ ತೆರಳಿ ಮಾತನಾಡಿದ್ದರು. ಇದೇ ವಿಚಾರವಾಗಿ ಬಿಸಿಸಿಐ ನೀತಿ ಸಂಹಿತೆ ಲೆವಲ್ 1 ಉಲ್ಲಂಘನೆಯಾಗಿರುವ ಕಾರಣ ರೆಫ್ರಿ ಪಂದ್ಯದ ಶೇ.25ರಷ್ಟು ದಂಡ ವಿಧಿಸಿದ್ದಾರೆ.