ಬೆಂಗಳೂರು: ಪ್ಲೇ ಆಫ್ ತಲುಪಲು ಗೆಲ್ಲಲೇಬೇಕಿರುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ನಾಯಕ ವಿಲಿಯಮ್ಸನ್ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 176 ರನ್ ಗಳಿಸಿದೆ.
ಟಾಸ್ ಗೆದ್ದ ಬೆಂಗಳೂರು ತಂಡ ಹೈದರಬಾದ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಎಸ್ಆರ್ಹೆಚ್ ಪರ ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ(20) ಹಾಗೂ ಮಾರ್ಟಿನ್ ಗಪ್ಟಿಲ್ ಮೊದಲ ವಿಕೆಟ್ಗೆ 46 ರನ್ಗಳ ಜೊತೆಯಾಟ ನೀಡಿದರು. ಸಹಾ ಸೈನಿ ಬೌಲಿಂಗನಲ್ಲಿ ಉಮೇಶ್ ಯಾದವ್ಗೆ ಕ್ಯಾಚ್ ನೀಡಿದರು. ಗಪ್ಟಿಲ್(30) ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು.
-
Innings Break!
— IndianPremierLeague (@IPL) May 4, 2019 " class="align-text-top noRightClick twitterSection" data="
The @SunRisers post a total of 175/7 after 20 overs. Is this enough for the #SRH bowlers to defend?#RCBvSRH pic.twitter.com/2grGC3nXOI
">Innings Break!
— IndianPremierLeague (@IPL) May 4, 2019
The @SunRisers post a total of 175/7 after 20 overs. Is this enough for the #SRH bowlers to defend?#RCBvSRH pic.twitter.com/2grGC3nXOIInnings Break!
— IndianPremierLeague (@IPL) May 4, 2019
The @SunRisers post a total of 175/7 after 20 overs. Is this enough for the #SRH bowlers to defend?#RCBvSRH pic.twitter.com/2grGC3nXOI
ಇವರಿಬ್ಬರ ವಿಕೆಟ್ ಪತನದ ನಂತರ ಬಂದ ಕನ್ನಡಿಗ ಪಾಂಡೆ ಕೇವಲ 9 ರನ್ಗಳಿಗೆ ವಿಕೆಟ್ ಒಪ್ಪಿಸಿ ಹೈದರಾಬಾದ್ಗೆ ನಿರಾಸೆ ಮೂಡಿಸಿದರು. ನಂತರ ಒಂದಾದ ನಾಯಕ ವಿಲಿಯಮ್ಸನ್ ಹಾಗೂ ವಿಜಯ್ ಶಂಕರ್(27) 45 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ಮೂಡಿಸಿದರು. ಸುಂದರ್ ಬೌಲಿಂಗ್ನಲ್ಲಿ ಸತತ 2 ಸಿಕ್ಸರ್ ಸಿಡಿಸಿ ಮೂರನೇ ಎಸೆತದಲ್ಲಿ ಗ್ರ್ಯಾಂಡ್ಹೋಮ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ಯೂಸುಫ್ ಪಠಾಣ್(3), ನಬಿ(4) ರಶೀದ್ ಖಾನ್(1) ಬಂದಷ್ಟೇ ವೇಗವಾಗಿ ವಾಪಸ್ ತೆರಳಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಏಕಾಂಗಿಯಾಗಿ ಹೋರಾಡಿದ ವಿಲಿಯಮ್ಸನ್ 43 ಎಸೆತಗಳಲ್ಲಿ 4 ಸಿಕ್ಸರ್, 5 ಬೌಂಡರಿ ನೆರವಿನಿಂದ 70 ರನ್ ಗಳಿಸಿ 176 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.