ಚೆನ್ನೈ: ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ ಎನ್ನುವ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ವಿವಾದಿತ ಹೇಳಿಕೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಅವರಕುರುಚ್ಚಿಯಲ್ಲಿ ಚುನಾವಣಾ ಪ್ರಚಾರದ ವೇಳೆ ನೀಡಿರುವ ಹೇಳಿಕೆಗೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಹೇಳಿರುವುದು ಐತಿಹಾಸಿಕ ಸತ್ಯ. ಈ ವಿಚಾರದಲ್ಲಿ ಯಾರೊಂದಿಗೂ ಜಗಳವಾಡಲು ನಾನು ಇಷ್ಟಪಡುವುದಿಲ್ಲ ಎಂದು ಕಮಲ್ ಹಾಸನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹೆಚ್ಚಿನ ಓದಿಗಾಗಿ:
ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ...! ವಿವಾದಕ್ಕೆ ಕಾರಣವಾಗುತ್ತಾ ಕಮಲ್ ಹೇಳಿಕೆ..?
ನನ್ನ ಮಾತನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳದೇ ಮಾಧ್ಯಮಗಳು ಹೇಳಿಕೆ ತಪ್ಪಾಗಿ ಪ್ರಸಾರ ಮಾಡಿವೆ. ಮಾಧ್ಯಮಗಳು ಇಂತಹ ತಪ್ಪನ್ನು ಹಲವು ಬಾರಿ ಮಾಡಿವೆ ಎಂದು ಇದೇ ವೇಳೆ ಕಮಲ್ ಮಾಧ್ಯಮದ ವಿರುದ್ಧ ಕಿಡಿಕಾರಿದ್ದಾರೆ.
ನಾನು ಒಂದು ಸಮುದಾಯಕ್ಕೆ ನೋವಾಗುವ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ. ನನ್ನ ಮನೆಯಲ್ಲಿ ಎಲ್ಲರೂ ಹಿಂದೂಗಳೇ ಇದ್ದಾರೆ. ಎಲ್ಲರೂ ದೇವರನ್ನು ನಂಬುತ್ತಾರೆ. ಹೀಗಾಗಿ ನೋವಾಗುವ ಹೇಳಿಕೆಯನ್ನು ನಾನು ನೀಡುವುದಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.